Asianet Suvarna News Asianet Suvarna News

ಜಿಪಂ, ತಾಪಂ ಕ್ಷೇತ್ರ ಮರುವಿಂಗಡಣೆ ಕರಡು ಪ್ರಕಟ: ಆಕ್ಷೇಪಣೆಗೆ ಜ.16 ಕೊನೆಯ ದಿನ

ರಾಜ್ಯದ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳ ಗಡಿಯನ್ನು ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ನಿಗದಿಗೊಳಿಸಿದ್ದು, ಸೋಮವಾರ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ZP TP constituencies redistribution draft published govt bengaluru rav
Author
First Published Jan 3, 2023, 11:09 AM IST

ಬೆಂಗಳೂರು (ಜ.3) : ರಾಜ್ಯದ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳ ಗಡಿಯನ್ನು ‘ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ’ ನಿಗದಿಗೊಳಿಸಿದ್ದು, ಸೋಮವಾರ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ರಾಜ್ಯದ 31 ಜಿಲ್ಲೆಗಳ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳ ಸದಸ್ಯರ ಸಂಖ್ಯೆ ಮತ್ತು ಕ್ಷೇತ್ರಗಳು ಒಳಗೊಂಡಿರುವ ಗ್ರಾಮಗಳ ವಿವರ, ಗಡಿ ಇತ್ಯಾದಿಗಳೊಂದಿಗೆ ಕರಡು ಗೆಜೆಟ್‌ ಪ್ರಕಟಿಸಲಾಗಿದೆ.

ಕೆಲವು ಬದಲಾವಣೆ:

ಜಿಲ್ಲಾ ಪಂಚಾಯತ್‌ಗೆ ಸಂಬಂಧಪಟ್ಟಂತೆ ಕೆಲವು ಜಿಲ್ಲೆಗಳಲ್ಲಿ ಕ್ಷೇತ್ರಗಳ ಸಂಖ್ಯೆಯಲ್ಲಿ ಸಣ್ಣ ಪುಟ್ಟಬದಲಾವಣೆಯಾಗಿದೆ. ಬಳ್ಳಾರಿ ಜಿಲ್ಲೆ ಈ ಮೊದಲು 40 ಜಿ.ಪಂ. ಕ್ಷೇತ್ರವನ್ನು ಹೊಂದಿತ್ತು. ಈಗ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚಿಸಿರುವುದರಿಂದ ತಲಾ 28 ಕ್ಷೇತ್ರ ಹಂಚಿಕೆಯಾಗಿದೆ. ಕೆಲವು ಜಿಲ್ಲಾ ಪಂಚಾಯತ್‌ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚು- ಕಡಿಮೆಯಾಗಿದೆ.

KMF, ಅಮುಲ್ ವಿಲೀನ ಇಲ್ಲ: ಸಿದ್ದರಾಮಯ್ಯ, ಎಚ್ಡಿಕೆ ವಿರುದ್ದ ಅಶ್ವತ್ಥ್‌ನಾರಾಯಣ್ ಗರಂ...

ಆಕ್ಷೇಪಣೆಗೆ ಜ.16 ಕೊನೆಯ ದಿನ:

ಸದಸ್ಯರ ಸಂಖ್ಯೆ ಹಾಗೂ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಜ.16ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಆನ್‌ಲೈನ್‌ ಮೂಲಕ ಅಥವಾ ಖುದ್ದಾಗಿ/ಅಂಚೆಯ ಮೂಲಕ ಸಲ್ಲಿಸಬಹುದು. ನಿಗದಿಪಡಿಸಿದ ದಿನದ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಅಧಿಕೃತ ವೆಬ್‌ಸೈಟ್ ಅಥವಾ ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗ, 3ನೇ ಗೇಟ್‌, 2ನೇ ಮಹಡಿ, ಕೊಠಡಿ ಸಂಖ್ಯೆ 222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್‌ ವೀದಿ, ಬೆಂಗಳೂರು-560001. ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಬಹುದು.

ಜಿಪಂ, ತಾಪಂ ಚುನಾವಣೆ ವಿಳಂಬ: ಸರ್ಕಾರಕ್ಕೆ ದಂಡ ವಿಧಿಸಿದ ಹೈಕೋರ್ಟ್‌

ಜಿ.ಪಂ. ಸದಸ್ಯರ ಸಂಖ್ಯೆ ಎಲ್ಲಿ ಎಷ್ಟು?

ಬೆಂಗಳೂರು ನಗರ ಜಿಲ್ಲೆ- 28, ಬೆಂಗಳೂರು ಗ್ರಾಮಾಂತರ ಜಿಲ್ಲೆ-25, ಕೋಲಾರ-29, ಚಿಕ್ಕಬಳ್ಳಾಪುರ-29, ರಾಮನಗರ-28, ತುಮಕೂರು-57, ಚಿತ್ರದುರ್ಗ-37, ಶಿವಮೊಗ್ಗ-31, ಮೈಸೂರು-46, ಮಂಡ್ಯ-40, ಹಾಸನ-39, ಚಿಕ್ಕಮಗಳೂರು-36, ಚಾಮರಾಜನಗರ-28, ಕೊಡಗು-25, ದಕ್ಷಿಣ ಕನ್ನಡ-35, ಉಡುಪಿ-28, ಬೆಳಗಾವಿ-91, ಧಾರವಾಡ-28, ಗದಗ-25, ಹಾವೇರಿ-34, ವಿಜಯಪುರ-44, ಬಾಗಲಕೋಟೆ-35, ಉತ್ತರ ಕನ್ನಡ-54, ಕಲಬುರಗಿ-48, ಯಾದಗಿರಿ-28, ಬೀದರ್‌-35, ರಾಯಚೂರು-38, ಕೊಪ್ಪಳ-31, ಬಳ್ಳಾರಿ-28, ವಿಜಯನಗರ-28

Follow Us:
Download App:
  • android
  • ios