ಹೌದು ಮೋದಿ ನನ್ನ ನಾಯಕ, ನನ್ನ ಹೆಮ್ಮೆ ಅವರಿಂದಲೇ ನಾನು ಗೆದ್ದಿರುವುದು: ಖಂಡ್ರೆಗೆ ಖೂಬಾ ತಿರುಗೇಟು

ನಾನು, ಮೋದಿಯವರ ಗಾಳಿಯಲ್ಲಿ ಗೆದ್ದಿರುವುದು ನಿಜ, ಜಗಮೆಚ್ಚಿದ ನಾಯಕ ನಮ್ಮ ಮೋದಿ, ನನ್ನ ನಾಯಕ ನನ್ನ ಹೆಮ್ಮೆ, ಸಂಸದನಾಗಿ ಮೋದಿಯವರ ಆಶಯದಂತೆ, ಜನರ ಮಧ್ಯದಲ್ಲಿ ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಭ್ರಷ್ಟಾಚಾರ ರಹಿತ ಸೇವೆ, ಸ್ವಜನ ಪಕ್ಷಪಾತ, ಓಲೈಕೆ ರಾಜಕಾರಣ ರಹಿತ ಸೇವೆ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಇತ್ತೀಚೆಗೆ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ.

Yes I won by name of Modi bhagwant khubas reaction to Ishwar Khandres statement at bidar rav

ಬೀದರ್‌ (ಆ.20) : ನಾನು, ಮೋದಿಯವರ ಗಾಳಿಯಲ್ಲಿ ಗೆದ್ದಿರುವುದು ನಿಜ, ಜಗಮೆಚ್ಚಿದ ನಾಯಕ ನಮ್ಮ ಮೋದಿ, ನನ್ನ ನಾಯಕ ನನ್ನ ಹೆಮ್ಮೆ, ಸಂಸದನಾಗಿ ಮೋದಿಯವರ ಆಶಯದಂತೆ, ಜನರ ಮಧ್ಯದಲ್ಲಿ ಅವರ ಕಷ್ಟಸುಖಗಳಿಗೆ ಸ್ಪಂದಿಸಿ, ಭ್ರಷ್ಟಾಚಾರ ರಹಿತ ಸೇವೆ, ಸ್ವಜನ ಪಕ್ಷಪಾತ, ಓಲೈಕೆ ರಾಜಕಾರಣ ರಹಿತ ಸೇವೆ ಮಾಡುತ್ತಿದ್ದೇನೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಇತ್ತೀಚೆಗೆ ಸಚಿವ ಈಶ್ವರ ಖಂಡ್ರೆ ಅವರ ಹೇಳಿಕೆಗೆ ತಿರಗೇಟು ನೀಡಿದ್ದಾರೆ.

ಈ ಕುರಿತಂತೆ ಪ್ರಕಟಣೆ ಅವರು ಹೊರಡಿಸಿದ್ದು, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ(Eshwar khandre)ಯವರು, ಸ್ವಾತಂತ್ರೋ್ಯತ್ಸವ ದಿನದಂದು ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ಹೋಗುತ್ತಾರೆ ಎಂದು ಹೇಳಿಕೆ ನೀಡಿ, ತನ್ನ ಅಹಂಕಾರ ಹಾಗೂ ದರ್ಪದ ವ್ಯಕ್ತಿತ್ವ ಮತ್ತೊಮ್ಮೆ ಜನರಿಗೆ ತೋರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ವರಿಷ್ಠರು ಒಪ್ಪಿದರೆ ಖೂಬಾ ಮೇಲೆ 200 ಕೋಟಿ ರು. ಮಾನನಷ್ಟಕೇಸ್‌: ಪ್ರಭು ಚವ್ಹಾಣ್

ನಾನು ನಿಮ್ಮಂತೆ ವಂಶ ಪಾರಂಪರಿಕ ರಾಜಕರಾಣ ಮಾಡುವುದಕ್ಕೆ ರಾಜಕಾರಣಕ್ಕೆ ಬಂದಿಲ್ಲ. ನಿಮ್ಮ ತಂದೆಯವರು, ನಿಮ್ಮ ಅಣ್ಣ, ಈಗ ನೀವು, ಮುಂದೆ ನಿಮ್ಮ ಮಗ, ಒಟ್ಟಿನಲ್ಲಿ ನಿಮ್ಮ ಕುಟುಂಬ ಮಾತ್ರ ಅಧಿಕಾರದಲ್ಲಿರಬೇಕು. ಯಾಕೆ ಕಾಂಗ್ರೆಸ್‌ನಲ್ಲಿ ಕಾರ್ಯಕರ್ತರಿಗೆ ನಾಯಕರಾಗುವ ಯೋಗ್ಯತೆ ಇಲ್ಲವಾ? ನಿಮ್ಮ ನಂತರ ಒಬ್ಬ ಕಾರ್ಯಕರ್ತನಿಗೆ ಶಾಸಕ ಮಾಡುವದಾಗಿ ಘೋಷಿಸಿ ಅವರನ್ನು ಬೆಳೆಸಿ, ಇನ್ನೆಷ್ಟುದಿನ ನಿಮ್ಮ ಕುಟುಂಬವೇ ರಾಜಕಾರಣ ಮಾಡಬೇಕು. ನಿಮ್ಮ ಪಕ್ಷದ ಕಾರ್ಯಕರ್ತರು ಕೇವಲ ನಿಮಗಾಗಿ ದುಡಿಯಬೇಕಾ, ಅವರೇನು ನಿಮ್ಮ ಗುಲಾಮರಾ? ಎಂದು ಖಂಡ್ರೆ ಅವರನ್ನು ಪ್ರಶ್ನಿಸಿದ್ದಾರೆ.

ರಾಜಕಾರಣವೆಂದರೆ ಸಮಾಜಕಾರಣವೆಂದು ಸಂಕಲ್ಪದೊಂದಿಗೆ ಜನರ ಸೇವೆಯನ್ನು ಮಾಡುತ್ತಿದ್ದೇನೆ. ಎಷ್ಟುಕಾಲ ಎನ್ನುವುದು ಮುಖ್ಯವಲ್ಲ, ಎಷ್ಟರ ಮಟ್ಟಿಗೆ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇನೆ ಎನ್ನುವುದು ಮುಖ್ಯ. ಎಷ್ಟುಕಾಲ ರಾಜಕೀಯದಲ್ಲಿ ಸೇವೆ ಮಾಡಿ, ಬಿಡುವಾಗ ನನ್ನ ಅಮೋಘ ಸೇವೆಯ ಗುರುತುಗಳು ಮತ್ತು ಆದರ್ಶಗಳು ಬಿಟ್ಟು ಹೋಗುವೆ! ಕೆವಲ ಅಧಿಕಾರಕ್ಕಾಗಿ ಜೋತು ಬಿಳುವವನಲ್ಲ ಮತ್ತು ಅಧಿಕಾರ ಮಕ್ಕಳಿಗೆ ಹಸ್ತಾಂತರಕ್ಕೆ ಸೀಮಿತ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿಮ್ಮ ಪಕ್ಷದ ನಾಯಕ ಪಪ್ಪು, ತಾವು ಓಟ್‌ ಬ್ಯಾಂಕಿನ ಮೇಲೆ, ಹಣ ಮತ್ತು ದಬ್ಬಾಳಿಕೆಯಿಂದ ಗೆಲ್ಲುತ್ತೀರಿ. ಕಾಂಗ್ರೆಸ್‌ ಟಿಕೆಟ್‌ ಪಡೆದುಕೊಂಡು ಗೆದ್ದು, ನಿಮಗೆ ನಿಮ್ಮ ಪಕ್ಷದ ನಾಯಕನ ಹೆಸರು ಹೇಳಲು ನಾಚಿಕೇನಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ಸಿನ ಮೂಲ ತತ್ವ ಸಿದ್ಧಾಂತಗಳೇ, ಅಹಂಕಾರದ ಸಂಸ್ಕೃತಿ ಮತು ಇನ್ನಿತರರನ್ನು ಕನಿಷ್ಠವೆಂದು ಭಾವಿಸುವುದು ಆಗಿದೆ. ಖಂಡ್ರೆಯವರು ಸಹ ವಂಶಪಾರಂಪರಿಕವಾಗಿ ಕಾಂಗ್ರೆಸ್‌ನಲ್ಲಿರುವ ಕಾರಣ, ನಮ್ಮಂತ ಕಾರ್ಯಕರ್ತನ ಹಂತದಿಂದ ಬೆಳೆದ ವ್ಯಕ್ತಿ ಬಗ್ಗೆ ಕೀಳಾಗಿ ನೋಡುವುದು ಅವರ ಸಹಜ ಗುಣವಾಗಿದೆ ಎಂದಿದ್ದಾರೆ.

ಕೇಂದ್ರ ಸಚಿವ ಭಗವಂತ್‌ ಖೂಬಾಗೆ ಮತ್ತೊಂದು ಶಾಕ್

ಇಂತಹ ನಿಮ್ಮ ಕೆಟ್ಟಸಂಸ್ಕೃತಿಗೆ ಧಿಕ್ಕರಿಸುತ್ತೇನೆ. ನನಗೆ ಆಶೀರ್ವಾದ ಮಾಡಿದ ಮತ್ತು 2024ರಲ್ಲಿ ಆಶೀರ್ವಾದ ಮಾಡಲಿರುವ ಜನತೆಯ ಸೇವೆ ನಿತ್ಯ ನಿರಂತರ ದಣಿವರಿಯದೆ ಮುಂದುವರಿಯಲಿದೆ. ಟೀಕೆ ಟಿಪ್ಪಣಿಗಳಿಗೆ ಕುಗ್ಗಲಾರದೆ ಸಂತೋಷದಿಂದ ಜನ ಸೇವೆಯಲ್ಲಿ ಇರುವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios