Yadgir: ಚಂದ್ರಯಾನದ ಯಶಸ್ಸು, ಮಕ್ಕಳಿಗೆ ವಿಕ್ರಮ್-ಪ್ರಗ್ಯಾನ್ ಎಂದು ನಾಮಕರಣ!
ಚಂದ್ರಯಾನ-3 ದೊಡ್ಡಮಟ್ಟದ ಯಶಸ್ಸು ಕಂಡ ಬೆನ್ನಲ್ಲಿಯೇ, ಅದರ ನೆನಪಿಗಾಗಿ ಯಾದಗಿರಿಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ.
ಯಾದಗಿರಿ (ಆ.26): ಚಂದ್ರಯಾನ-3 ಯಶಸ್ವಿಯಾದ ಹಿನ್ನಲೆಯಲ್ಲಿ ಅದರ ನೆನಪಿಗಾಗಿ ಯಾದಗಿರಿಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರನ್ನಿಟ್ಟಿದ್ದಾರೆ. ವಿಕ್ರಮ್ ಎನ್ನುವುದು ಚಂದ್ರಯಾನ-3ಯ ಲ್ಯಾಂಡರ್‌ನ ಹೆಸರಾಗಿದ್ದರೆ, ಪ್ರಗ್ಯಾನ್ ಎನ್ನುವುದು ರೋವರ್‌ರ ಹೆಸರಾಗಿದೆ. ಯಾದಗಿರಿಯಲ್ಲಿ ಮಕ್ಕಳಿಗೆ ವಿಕ್ರಮ ಹಾಗೂ ಪ್ರಗ್ಯಾನ್ ಹೆಸರಿಟ್ಟು ನಾಮಕರಣ ಮಾಡಲಾಗಿದೆ. ಇಬ್ಬರು ಮಕ್ಕಳಿಗೆ ಐತಿಹಾಸಿಕ ಹೆಸರಿಟ್ಟು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ಒಂದೇ ಕುಟುಂಬದಲ್ಲಿ ಜನಿಸಿದ ಇಬ್ಬರು ಮಕ್ಳಳಿಗೆ ಈ ಹೆಸರನ್ನು ಇಡಲಾಗಿದೆ. ಒಂದೇ ಕುಟುಂಬದಲ್ಲಿ ಕಳೆದ ಒಂದು ತಿಂಗಳ ಹಿಂದೆ ಜನಿಸಿರುವ ಎರಡು ಗಂಡು ಮಗುವಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಹೆಸರನ್ನು ಇಡಲಾಗಿದೆ. ಬಾಲಪ್ಪ ಹಾಗೂ ನಾಗಮ್ಮ ದಂಪತಿಯ ಮಗುವಿಗೆ ವಿಕ್ರಮ ಎಂದು ಹೆಸರು ಇಡಲಾಗಿದ್ದರೆ, ನಿಂಗಪ್ಪ ಹಾಗೂ ಶಿವಮ್ಮ ದಂಪತಿಯ ಮಗುವಿಗೆ ಪ್ರಗ್ಯಾನ್ ಎಂದು ನಾಮಕರಣ ಮಾಡಲಾಗಿದೆ. ವಿಕ್ರಮ ಹೆಸರಿನ ಮಗು ಜುಲೈ 28 ರಂದು ಹಾಗೂ ಪ್ರಗ್ಯಾನ್ ಜನಸಿದ್ದು ಅಗಸ್ಟ್ 18 ರಂದು ಜನನವಾಗಿತ್ತು. ಎರಡು ಮಕ್ಕಳ ನಾಮಕರಣವನ್ನು ಆಗಸ್ಟ್ 24 ರಂದು ಮಾಡಲಾಗಿತ್ತು. ಚಂದ್ರಯಾನ-3 ಯಶಸ್ವಿಗೊಳಿಸಿದ ಇಸ್ರೋಗೆ ಅಭಿನಂದನೆ ಸಲ್ಲಿಸಲು ಈ ಹೆಸರನ್ನು ಇಡಲಾಗಿದೆ.
ಯಾದಗಿರಿ: ಕಲುಷಿತ ನೀರು ಸೇವನೆ, 10ಕ್ಕೂ ಅಧಿಕ ಜನರು ಅಸ್ವಸ್ಥ; ಮಹಿಳೆ ಸಾವು?
ಯಾದಗಿರಿ: ಗಾಜರಕೋಟದಲ್ಲಿ ಕಲುಷಿತ ನೀರು ಸೇವಿಸಿ 19 ಜನ ಅಸ್ವಸ್ಥ