Asianet Suvarna News Asianet Suvarna News

ಯಾದಗಿರಿ: ಗಾಜರಕೋಟದಲ್ಲಿ ಕಲು​ಷಿತ ನೀರು ಸೇವಿ​ಸಿ 19 ಜನ ಅಸ್ವಸ್ಥ

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲೂಕಿನಲ್ಲಿ ಈ ಮೊದಲು ಫೆಬ್ರುವರಿ ತಿಂಗಳಲ್ಲಿ ಅನಪುರ ಗ್ರಾಮದ ಮೂವರು ವಾಂತಿ-ಭೇದಿಗೆ ಮೃತಪಟ್ಟ ನಂತರವು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದು ಆಶ್ಚರ್ಯಕರ ಎಂದು ಅಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು 

19 People Sick After Drinking Contaminated Water at Gurmitkal in Yadgir grg
Author
First Published Aug 23, 2023, 11:30 PM IST

ಗುರುಮಠಕಲ್‌(ಆ.23):  ತಾಲೂಕಿನ ಗಾಜರಕೋಟ ಗ್ರಾಮದಲ್ಲಿ ಕಲ​ಷಿತ ನೀರು ಸೇವ​ನೆ​ಯಿಂದ ಜನ​ರ​ಲ್ಲಿ ಸೋಮವಾರ ವಾಂತಿ ಭೇದಿ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆಗೆ 19 ಜನರು ಅಸ್ವಸ್ಥರಾಗಿದ್ದಾರೆ. ಇವ​ರ​ಲ್ಲಿ 9 ಜನರಲ್ಲಿ ಮಾತ್ರ ವಾಂತಿ-ಭೇದಿ ಸಮಸ್ಯೆಯಿದೆ. ಉಳಿದವರಲ್ಲಿ ಕೇವಲ ಭೇದಿ ಸಮಸ್ಯೆಯಿದೆ ಎಂದು ಗಾಜರಕೋಟ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ಎಂ.ಎಂ.ರಾಹಿಲ್‌ ತಿಳಿಸಿದ್ದಾರೆ.

ಗುರುಮಠಕಲ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ಐದು ಜನರನ್ನು ಕಳುಹಿಸಲಾಗಿದ್ದು, ವೈದ್ಯಕೀಯ ಆರೈಕೆ ಪಡೆದು ಗುಣಮುಖರಾಗಿದ್ದಾರೆ. ವಯಸ್ಸಾದ ಒಬ್ಬರಲ್ಲಿ ಕಡಿಮೆ ರಕ್ತದೋತ್ತಡ ಕಾಣಿಸಿಕೊಂಡ ಹಿನ್ನೆಲೆ ಯಾದಗಿರಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸದ್ಯ ಐವರು ವೈದ್ಯಕೀಯ ಆರೈಕೆ ಪಡೆಯುತ್ತಿದ್ದು, 4 ಜನ ಗುಣಮುಖರಾಗಿ ಮನೆಗೆ ಹಿಂದಿರುಗಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ ಮಾಹಿತಿ ನೀಡಿದರು.

ಯಾದಗಿರಿ ನಗರಸಭೆಯಲ್ಲಿ ಭಾರೀ ಗೋಲ್ಮಾಲ್ ಆರೋಪ: ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ !

ತಾಲೂಕಿನಲ್ಲಿ ಈ ಮೊದಲು ಫೆಬ್ರುವರಿ ತಿಂಗಳಲ್ಲಿ ಅನಪುರ ಗ್ರಾಮದ ಮೂವರು ವಾಂತಿ-ಭೇದಿಗೆ ಮೃತಪಟ್ಟ ನಂತರವು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸದಿರುವುದು ಆಶ್ಚರ್ಯಕರ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.

ಮೇಲಿಂದ ಮೇಲೆ ವಾಂತಿ ಭೇದಿ ಪ್ರಕರಣಗಳಾದರೂ ಕ್ರಮ ಇಲ್ಲ

ಫೆಬ್ರುವರಿಯಲ್ಲಿ ಅನಪುರ, ಬಳಿಕ ಚಿನ್ನಾಕಾರ, ದಂತಾಪುರ ಮತ್ತು ಜೂನ್‌ನಲ್ಲಿ ಹಿಮಾಲಪುರ ಗ್ರಾಮಗಳಲ್ಲಿ ವಾಂತಿ-ಭೇದಿಯಿಂದ ಹಲವು ಜನ ಅಸ್ವಸ್ಥರಾಗಿದ್ದರು. ಆದರೆ, ಈ ಯಾವ ಘಟನೆಗಳು ಆಡಳಿತದ ಮೇಲೆ ಪ್ರಭಾವ ಬೀರಲಿಲ್ಲವೇ? ಘಟನೆಗಳು ಪುನರಾವರ್ತನೆಯಾಗುತ್ತಿವೆ. ಅಧಿಕಾರಿಗಳ ಬೇಜವಾಬ್ದಾರಿಗೆ ಜನ ಬೆಲೆ ತೆರುವಂತಾಗುತ್ತಿದೆ. ಕಲುಷಿತ ನೀರಿನ ಸೇವೆನೆಯಿಂದ ಶಿವಪುರ ಮತ್ತು ಗಾಜರಕೋಟ ಗ್ರಾಮದಲ್ಲಿ ವಾಂತಿ-ಬೇಧಿ ಪ್ರಕರಣ ಉಲ್ಬಣಗೊಂಡಿದೆ. ಚಿಕಿತ್ಸೆ ನೀಡುತ್ತಿದ್ದೇವೆ. ಯಾವುದೇ ಪ್ರಾಣಪಾಯವಿಲ್ಲ ಎಂದು ಗಾಜರಕೋಟ ವೈದ್ಯಾಧಿಕಾರಿ ಡಾ.ರಹಿಲ್‌ ತಿಳಿಸಿದ್ದಾರೆ. 

ಯಾದಗಿರಿಯಲ್ಲಿ ತಡರಾತ್ರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ; ಗೋವು ಸ್ಥಳಾಂತರ ವೇಳೆ ಮಹಿಳೆ ಕಣ್ಣೀರು!

ನೀರಿನ ಮೂಲಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆ ವಾಂತಿ-ಭೇದಿ ಉಂಟಾಗಿದೆ. ಬ್ಲಿಚಿಂಗ್‌ ಪೌಡರ್‌ ಸಿಂಪಡಿಸಿಲ್ಲ ಹಾಗೂ ನೀರಿನ ಟ್ಯಾಂಕ್‌ ಸ್ವಚ್ಛತೆಗೊಳಿಸದ ಕಾರಣ ಇಂತಹ ಘಟನೆ ಜರುಗಿದೆ. ಇಂತಹ ಘಟನೆ ಬಾರದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಆನಂದ ಇಟಕಾಲ್‌, ಗಾಜರಕೋಟ ಗ್ರಾಮಸ್ಥ

ಗುರುಮಠಕಲ್‌ ಪಟ್ಟಣದ ಸರಕಾರಿ ಸಮುದಾಯ ಆಸ್ಪತ್ರೆಯಲ್ಲಿ ವಾಂತಿ-ಬೇಧಿ ಪ್ರಕರಣದಿಂದ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ತಹಸೀಲ್ದಾರ್‌ ಮೊಹ್ಮದ್‌ ಮೋಸಿನ್‌ ಭೇಟಿ ನೀಡಿ ಸಾಂತ್ವನ ಹೇಳಿದರು.

Follow Us:
Download App:
  • android
  • ios