Asianet Suvarna News Asianet Suvarna News

ಕರ್ನಾಟಕದ ಹಲವೆಡೆ ಭಾರೀ ಮಳೆ, ಸಿಡಿಲು ಬಡಿದು ಮಹಿಳೆ ಸಾವು

ಕಲ​ಬು​ರ​ಗಿ, ಚಾಮ​ರಾ​ಜ​ನ​ಗರ, ಬೆಂಗ​ಳೂರು ಮತ್ತು ಚಿತ್ರ​ದು​ರ್ಗ​ದಲ್ಲಿ ಕೆಲ​ಕಾಲ ಉತ್ತಮ ಮಳೆ ಸುರಿ​ದಿ​ದೆ. ಕಲ​ಬು​ರ​ಗಿ​ ಜಿಲ್ಲೆ​ಯಾ​ದ್ಯಂತ ಗುಡುಗು ಸಹಿತ ಸಾಧಾ​ರಣ ಮಳೆ​ಯಾ​ಗಿದ್ದು, ಸಿಡಿಲು ಬಡಿ​ದು ಅಫ​ಜ​ಲ್ಪುರ ತಾಲೂ​ಕಿನ ಸಿದ​ನೂರ ಗ್ರಾಮ​ದಲ್ಲಿ ಹೊಲ​ದಲ್ಲಿ ಕೆಲಸ ಮಾಡು​ತ್ತಿದ್ದ ಕಲಾ​ವತಿ ಎಂಬ ಮಹಿಳೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾಳೆ. 

Woman Dies Due to Lightning in Kalaburagi grg
Author
First Published Sep 3, 2023, 8:00 AM IST

ಬೆಂಗ​ಳೂ​ರು(ಸೆ.03): ರಾಜ್ಯದ ನಾಲ್ಕು ಜಿಲ್ಲೆ​ಗ​ಳ​ಲ್ಲಿ ಶನಿ​ವಾ​ರವೂ ಮಳೆ ಮುಂದು​ವ​ರಿ​ದಿದ್ದು, ಕಲ​ಬು​ರ​ಗಿ​ಯಲ್ಲಿ ಸಿಡಿ​ಲಿಗೆ ಮಹಿ​ಳೆ​ಯೊ​ಬ್ಬರು ಬಲಿ​ಯಾ​ಗಿ​ದ್ದಾ​ರೆ.

ಕಲ​ಬು​ರ​ಗಿ, ಚಾಮ​ರಾ​ಜ​ನ​ಗರ, ಬೆಂಗ​ಳೂರು ಮತ್ತು ಚಿತ್ರ​ದು​ರ್ಗ​ದಲ್ಲಿ ಕೆಲ​ಕಾಲ ಉತ್ತಮ ಮಳೆ ಸುರಿ​ದಿ​ದೆ. ಕಲ​ಬು​ರ​ಗಿ​ ಜಿಲ್ಲೆ​ಯಾ​ದ್ಯಂತ ಗುಡುಗು ಸಹಿತ ಸಾಧಾ​ರಣ ಮಳೆ​ಯಾ​ಗಿದ್ದು, ಸಿಡಿಲು ಬಡಿ​ದು ಅಫ​ಜ​ಲ್ಪುರ ತಾಲೂ​ಕಿನ ಸಿದ​ನೂರ ಗ್ರಾಮ​ದಲ್ಲಿ ಹೊಲ​ದಲ್ಲಿ ಕೆಲಸ ಮಾಡು​ತ್ತಿದ್ದ ಕಲಾ​ವತಿ ಎಂಬ ಮಹಿಳೆ ಸ್ಥಳ​ದಲ್ಲೇ ಮೃತ​ಪ​ಟ್ಟಿ​ದ್ದಾಳೆ. ಇದೇ ವೇಳೆ ಸವಿತಾ ಎಂಬ ಮಹಿ​ಳೆಗೆ ಗಂಭೀರ ಗಾಯ​ಗ​ಳಾ​ಗಿದ್ದು, ಆಸ್ಪತ್ರೆಗೆ ದಾಖ​ಲಿ​ಸ​ಲಾ​ಗಿ​ದೆ.

ಚಿಕ್ಕಮಗಳೂರು: ಕೈಕೊಟ್ಟ ವರುಣದೇವ, ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಮಲೆನಾಡಿಗರು..!

ಇನ್ನು ಚಾಮ​ರಾ​ಜ​ನ​ಗ​ರ ಜಿಲ್ಲೆಯ ಯಳಂದೂರಿನ​ಲ್ಲಿ ಸತತ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾ​ಕಾರ ಮಳೆ​ಯಿಂದಾಗಿ ಹಲವು ಮನೆ​ಗ​ಳಿಗೆ ನೀರು ನುಗ್ಗಿ ಜನ​ಜೀ​ವನ ಅಸ್ತ​ವ್ಯ​ಸ್ತ​ಗೊಂಡಿ​ದೆ. ಮಧ್ಯಾಹ್ನ 3 ಗಂಟೆಗೆ ಆರಂಭವಾದ ಮಳೆಯಿಂದಾಗಿ ಪಟ್ಟಣದ ಬಸ್‌ ನಿಲ್ದಾಣ ಮತ್ತು ಸಂತೆ ಮಾರುಕಟ್ಟೆ ಬಳಿ ಕೆಲ​ಕಾಲ ಕೃತಕ ಪ್ರವಾಹ ಸೃಷ್ಟಿ​ಯಾ​ಗಿ​ತ್ತು.

Follow Us:
Download App:
  • android
  • ios