ಚಿಕ್ಕಮಗಳೂರು: ಕೈಕೊಟ್ಟ ವರುಣದೇವ, ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮುಂದಾದ ಮಲೆನಾಡಿಗರು..!
ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 37 ವರ್ಷದ ಹಿಂದೆಯೂ ಇದೇ ರೀತಿ ಮಳೆ ಅಭಾವ ಎದುರಾಗಿತ್ತು. ಗಂಗೇಗಿರಿ ಬೆಟ್ಟದಲ್ಲಿ ಪೂಜೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ.
ಚಿಕ್ಕಮಗಳೂರು(ಸೆ.02): ಮಳೆಗಾಗಿ 37 ವರ್ಷದ ಹಿಂದಿನ ಆಚರಣೆಗೆ ಮಲೆನಾಡಿಗರು ಮುಂದಾಗಿದ್ದಾರೆ. ಹೌದು, ಮಳೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಗಂಗೇಗಿರಿ ಬೆಟ್ಟ ಹತ್ತಿದ ಅಳೇಹಳ್ಳಿ, ಹೆನ್ನಂಗಿ, ಬೆಳ್ಳಂಗಿ ಮೂರು ಗ್ರಾಮಗಳ ಜನರು ವಿಶೇಷ ಪೂಜೆಯನ್ನ ಮಾಡಿದ್ದಾರೆ.
ಪರದೇಶಪ್ಪನ ಮಠದ ಗುರುಗಳ ನೇತೃತ್ವದಲ್ಲಿ ಗಂಗೇಗಿರಿ ಬೆಟ್ಟ ಹತ್ತಿ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. 37 ವರ್ಷದ ಹಿಂದೆಯೂ ಇದೇ ರೀತಿ ಮಳೆ ಅಭಾವ ಎದುರಾಗಿತ್ತು. ಗಂಗೇಗಿರಿ ಬೆಟ್ಟದಲ್ಲಿ ಪೂಜೆ ಮಾಡಿದರೆ ಮಳೆ ಬರುತ್ತೆ ಅನ್ನೋ ನಂಬಿಕೆ.
ಚಿಕ್ಕಮಗಳೂರು: ಡ್ಯೂಟಿ ಮುಗೀತು, ಬೇರೆಯವರು ಪೆಟ್ರೋಲ್ ಹಾಕ್ತಾರೆ ಎಂದಿದ್ದಕ್ಕೆ ಮನಬಂದಂತೆ ಹಲ್ಲೆ
ಗಿರಿಯಲ್ಲಿ ಪೂಜೆ ಮಾಡಿ ಕಳಸದಲ್ಲಿ ಅಲ್ಲಿನ ನೀರು ತಂದು ಪೂಜೆ ಮಾಡಬೇಕು. 9 ದಿನ ಮಡಿಯಿಂದ ಪೂಜೆ ಮಾಡಿದರೆ ಮಳೆಯಾಗುತ್ತೆ ಅನ್ನೋ ಪ್ರತೀತಿ ಇದೆ. ಹೀಗಾಗಿ ಗಂಗೇಗಿರಿಯಿಂದ ಜಲ ತಂದಿರೋ ಜನರಿಂದ 9 ದಿನ ಮಡಿ ಪೂಜೆ ಮಾಡಿದ್ದಾರೆ.