ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಬರ್ ಚಾಲಕನೋರ್ವ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳ್ಳಂದೂರು ಬಳಿಯ ಬೋಗನಹಳ್ಳಿಯಲ್ಲಿ ನಡೆದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ.

ಬೆಂಗಳೂರು (ಆ.10) :  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಉಬರ್ ಚಾಲಕನೋರ್ವ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳ್ಳಂದೂರು ಬಳಿಯ ಬೋಗನಹಳ್ಳಿಯಲ್ಲಿ ನಡೆದಿದೆ.

ಮಗನಿಗೆ ಅನಾರೋಗ್ಯವೆಂದು ಆಸ್ಪತ್ರೆಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದ ಮಹಿಳೆ. ಬುಕ್ ಮಾಡಿದ ಸ್ಥಳಕ್ಕೆ ಬಂದಿದ್ದ ಕ್ಯಾಬ್. ಮಗನೊಂದಿಗೆ ಕ್ಯಾಬ್‌ನಲ್ಲಿ ಕುಳಿತಿದ್ದ ವೇಳೆ ಸ್ಥಳಕ್ಕೆ ಮತ್ತೊಂದು ಕ್ಯಾಬ್ ಬಂದಿದೆ. ಕುಳಿತಿದ್ದ ಕ್ಯಾಬ್ ಬೇರೆಯದೆಂದು ಇಳಿಯಲು ಯತ್ನಿಸಿದ ಮಹಿಳೆ. ಕಾರು ಚಲಾಯಿಸಲು ಮುಂದಾದ ಕ್ಯಾಬ್ ಡ್ರೈವರ್. ಮಹಿಳೆ ಕ್ಯಾಬ್‌ನಿಂದ ಇಳಿದು ಬುಕ್ ಮಾಡಿದ್ದ ಕ್ಯಾಬ್‌ಗೆ ಹತ್ತಲು ಮುಂದಾದಾಗ ದಿಢೀರನೆ ಕ್ಯಾಬ್ ನಿಲ್ಲಿಸಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಚಾಲಕ.

ಅಕ್ಕ.. ನಿಮ್ಮ ಫೋನ್ ನೀವೇ ಇಟ್ಕೊಳ್ಳಿ ಅಂತ ಕಳ್ಳ ಐಫೋನ್ ವಾಪಸ್ ನೀಡಿದ್ದೇಕೆ?

ಅಪಾರ್ಟ್‌ಮೆಂಟ್ ಮುಂಭಾಗದಲ್ಲೇ ಮಹಿಳೆಯ ತಲೆಗೆ ಹೊಡೆದು ಹಲ್ಲೆ ನಡೆಸಿರುವ ಚಾಲಕ. ಕೂಡಲೇ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನ ರಕ್ಷಿಸಿದ ಸ್ಥಳೀಯರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಅಪಾರ್ಟ್‌ಮೆಂಟ್ ನಿವಾಸಿಗಳು. ಘಟನೆಯ ದೃಶ್ಯ ಅಪಾರ್ಟ್‌ಮೆಂಟ್ ಸಿಸಿಟಿವಿಯಲ್ಲಿ ಸೆರೆ.

ಬೆಳ್ಳಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ತೆಂಗಿನ ಮರದಿಂದ ಬಿದ್ದು ಮಹಿಳೆ ಸಾವು

ಪುತ್ತೂರು: ವೃತ್ತಿನಿರತ ತೆಂಗಿನ ಕಾಯಿ ಕೀಳುವ ಮಹಿಳೆ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟಘಟನೆ ಪುತ್ತೂರು ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಬುಧವಾರ ಎಂಬಲ್ಲಿ ನಡೆದಿದೆ. ಇಲ್ಲಿನ ಪ್ರವೀಣ್‌ ಬೊಳ್ಳಾಜೆ ಎಂಬವರ ಪತ್ನಿ ಸುಚಿತ್ರಾ(34) ಮೃತರು.

ಮಹಿಳೆಯಾಗಿದ್ದರೂ ತೆಂಗಿನ ಮರ ಹತ್ತಿ ಕಾಯಿ ಕೀಳುವ ವಿಚಾರಕ್ಕೆ ಖ್ಯಾತಿ ಪಡೆದಿದ್ದ ಅವರು ಕೆಲ ವರ್ಷಗಳಿಂದ ಈ ಕಾಯಕವನ್ನು ನಡೆಸುತ್ತಿದ್ದರು. ಎಂದಿನಂತೆ ತೆಂಗಿನ ಮರ ಹತ್ತಿ ಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ಕೆಳಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಒಬ್ಬ ಮಹಿಳೆಯಾಗಿ ತೆಂಗಿನ ಮರ ಹತ್ತಿ ಕಾಯಿ ಕೀಳುವ ಕಾಯಕ ಮಾಡುತ್ತಿದ್ದ ಸುಚಿತ್ರ ಅವರನ್ನು ಹಲವಾರು ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿದ್ದವು. ಸುಚಿತ್ರಾ ಅವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಮಗಳನ್ನು ಕೊಟ್ಟು ಮದುವೆ ಮಾಡಲಿಲ್ಲವೆಂದು 850 ಅಡಕೆ ಗಿಡ ನಾಶ ಮಾಡಿದ ಕಿಡಿಗೇಡಿ!