Asianet Suvarna News Asianet Suvarna News

ನಗರದೊಳಗೆ ಎಂಟ್ರಿ ಕೊಟ್ಟ ಜಿಂಕೆ ಅಪಘಾತಕ್ಕೆ ಬಲಿ; ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿದ ಗ್ರೀನ್ ಆರ್ಮಿ ಫೋರ್ಸ್ ತಂಡ

ಬೆಂಗಳೂರು ನಗರದೊಳಗೆ ಎಂಟ್ರಿ ಕೊಟ್ಟಿದ್ದ ಜಿಂಕೆಯೊಂದು ಅಪಘಾತಕ್ಕೆ ಬಲಿಯಾದ ದುರ್ಘಟನೆ ಕೋರಮಂಗಲ 100 ಫೀಟ್ ರಸ್ತೆಯಲ್ಲಿ ನಡೆದಿದೆ. ಮುಂಜಾನೆ 5 ಗಂಟೆ ಸುಮಾರಿಗೆ ಕಾಣಿಸಿಕೊಂಡಿದ್ದ ಗಂಡು ಜಿಂಕೆ. ಅಪರಿಚಿತ ವಾಹನಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದೆ.  ಆರ್ಮಿ ಫೋರ್ಸ್ ರಸ್ತೆ ಬಳಿಯೇ ನಡೆದಿರೋ ದುರಂತ ಘಟನೆ.

Wildlife A deer that entered the city died in an accident Green Army Force team met   MP Tejaswi Surya rav
Author
First Published Dec 16, 2023, 11:04 AM IST

ಬೆಂಗಳೂರು (ಡಿ.16) ಬೆಂಗಳೂರು ನಗರದೊಳಗೆ ಎಂಟ್ರಿ ಕೊಟ್ಟಿದ್ದ ಜಿಂಕೆಯೊಂದು ಅಪಘಾತಕ್ಕೆ ಬಲಿಯಾದ ದುರ್ಘಟನೆ ಕೋರಮಂಗಲ 100 ಫೀಟ್ ರಸ್ತೆಯಲ್ಲಿ ನಡೆದಿದೆ.

ಮುಂಜಾನೆ 5 ಗಂಟೆ ಸುಮಾರಿಗೆ ಕಾಣಿಸಿಕೊಂಡಿದ್ದ ಗಂಡು ಜಿಂಕೆ. ಅಪರಿಚಿತ ವಾಹನಕ್ಕೆ ಸಿಲುಕಿ ದುರ್ಮರಣಕ್ಕೀಡಾಗಿದೆ. ಅರ್ಮಿ ಫೋರ್ಸ್ ರಸ್ತೆ ಬಳಿಯೇ ನಡೆದಿರೋ ದುರಂತ ಘಟನೆ. ವಿಷಯ ತಿಳಿದು ತಕ್ಷಣ ಅಪಘಾತ ನಡೆದ ಸ್ಥಳಕ್ಕೆ ಧಾವಿಸಿದ ಗ್ರಿನ್ ಆರ್ಮಿ ಫೋರ್ಸ್‌. ಗಾಯಗೊಂಡಿದ್ದ ಜಿಂಕೆಗೆ ಚಿಕಿತ್ಸೆ ನೀಡುವ ಪ್ರಯತ್ನ  ನಡೆಸಿದ್ದರು. ಆದರೆ ಅಷ್ಟರಲ್ಲಾಗಲೇ ಜಿಂಕೆ ಮೃತಪಟ್ಟಿತ್ತು. ಸದ್ಯ ಜಿಂಕೆ ಮೃತದೇಹ ಅರಣ್ಯ ಇಲಾಖೆಗೆ ಶಿಫ್ಟ್ ಮಾಡಿದ ಜಾಗೃತದಳದ ತಂಡ. 

ಬಂಡೀಪುರ ಕಾಡಂಚಿನಲ್ಲಿ ಕುರಿಗಾಹಿಯನ್ನು ಎಳೆದೊಯ್ದು ತಿಂದು ಹಾಕಿದ ಹುಲಿ!

ಕೋರಮಂಗಲ ಅರ್ಮಿ ಫೋರ್ಸ್ ಒಳಭಾಗದಿಂದ ಜಿಂಕೆ ರಸ್ತೆಗೆ ಬಂದಿರೋ ಸಾಧ್ಯತೆ. ಬೆಳಗಿನ ಜಾವ ಕತ್ತಲು ಆವರಿಸಿದ್ದರಿಂದ ದಾರಿ ತಪ್ಪಿ ಬಂದು ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದಿರುವ ಸಾಧ್ಯತೆ. ಘಟನೆ ಕಂಡು ಗ್ರೀನ್ ಅರ್ಮಿ ಫೋರ್ಸ್‌ಗೆ ಮಾಹಿತಿ ನೀಡಿದ್ದ ಸ್ಥಳೀಯರು. ತಂಡ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುವಷ್ಟರಲ್ಲಿ ಜಿಂಕೆ ಮೃತಪಟ್ಟಿದೆ. ಸದ್ಯ ಮಡಿವಾಳ ಅರಣ್ಯ ಇಲಾಖೆಗೆ ಜಿಂಕೆ ಮೃತದೇಹ ಶಿಫ್ಟ್ ಮಾಡಲಾಗಿದೆ.

ಅರ್ಜುನ ಸಾವಿನ ಇಂಚಿಂಚು ಮಾಹಿತಿ ಬಿಚ್ಚಿಟ್ಟ ವೈದ್ಯ ರಮೇಶ್: ಇಲ್ಲಿದೆ ನೋಡಿ ಅರ್ಜುನನ ಕೊಂದ ಕಾಡಾನೆ

ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿದ ಅರ್ಮಿ ಫೋರ್ಸ್:

ನಗರದೊಳಗೆ ಪ್ರವೇಶಿಸಿ ಅಪಘಾತಕ್ಕೊಳಗಾಗಿ ಜಿಂಕೆ ದುರ್ಮಕ್ಕೀಡಾಗಿರುವ ಹಿನ್ನೆಲೆ ಗ್ರೀನ್ ಅರ್ಮಿ ಫೋರ್ಸ್ ತಂಡ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿದರು. ರಾತ್ರಿ ಹೊತ್ತಲ್ಲಿ ವನ್ಯಜೀವಿಗಳಿಗೆ ತೊಂದರೆಯಾದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಯಾವುದೇ ಸೌಲಭ್ಯಗಳಿಲ್ಲ. ಹೀಗಾಗಿ ವನ್ಯಜೀವಿಗಳ ಸಮಸ್ಯೆಗೆ ಸರ್ಕಾರ ಸ್ಪಂದಿಸುವಂತೆ ಸಂಸದರಿಗೆ ಮನವಿ ಮಾಡಿದ ತಂಡ. ಗ್ರೀನ್ ಅರ್ಮಿ ಫೋರ್ಸ್ ಮನವಿ ಸ್ವೀಕರಿಸಿ ಸಂಸದ ತೇಜಸ್ವಿ ಸೂರ್ಯ ಸಕಾರಾತ್ಮಕವಾಗಿ ಸ್ಪಂದಿಸಿದರು.

Follow Us:
Download App:
  • android
  • ios