ಕೊಡಗು: ಕೊಳೆತ ಸ್ಥಿತಿಯಲ್ಲಿ ಎರಡು ಕಾಡಾನೆ ಕಳೇಬರ ಪತ್ತೆ!
ಮಡಿಕೇರಿಯಲ್ಲಿ ತಾಲೂಕಿನ ಹುಲ್ಲುಗಾವಲಿನಲ್ಲಿ 40 ವರ್ಷದ ಕಾಡಾನೆ, ಕುಶಾಲನಗರ ತಾಲೂಕಿನ ತ್ಯಾಗತ್ತೂರಿನಲ್ಲಿ 18 ವರ್ಷದ ಕಾಡಾನೆ ಕಳೇಬರ ಪತ್ತೆಯಾಗಿವೆ. ತಲಕಾವೇರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕಾಡಾನೆ ಮತ್ತೊಂದು ಆನೆಯೊಂದಿಗೆ ಕಾದಾಡಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.
ಕೊಡಗು (ಮೇ.25) ಮಡಿಕೇರಿಯಲ್ಲಿ ತಾಲೂಕಿನ ಹುಲ್ಲುಗಾವಲಿನಲ್ಲಿ 40 ವರ್ಷದ ಕಾಡಾನೆ, ಕುಶಾಲನಗರ ತಾಲೂಕಿನ ತ್ಯಾಗತ್ತೂರಿನಲ್ಲಿ 18 ವರ್ಷದ ಕಾಡಾನೆ ಕಳೇಬರ ಪತ್ತೆಯಾಗಿವೆ.
ತಲಕಾವೇರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಕಾಡಾನೆ ಮತ್ತೊಂದು ಆನೆಯೊಂದಿಗೆ ಕಾದಾಡಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇನ್ನೊಂದು ತ್ಯಾಗತ್ತೂರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿರಬಹುದು ಶಂಕಿಸಲಾಗಿದೆ.
ಜೀವಂತ ಕಾಡಾನೆಯ ದಂತ ಕತ್ತರಿಸಿದ ಕರ್ನಾಟಕ ಅರಣ್ಯ ಇಲಾಖೆ
ಎರಡೂ ಕಾಡಾನೆಗಳು ಕೆಲವು ದಿನಗಳ ಹಿಂದೆಯೇ ಮೃತಪಟ್ಟಿವೆ ಹೀಗಾಗಿ ಮೃತದೇಹ ಬಹುತೇಕ ಕೊಳೆತುಹೋಗಿದ್ದು, ಸ್ಥಳದಲ್ಲಿ ಬೃಹತ್ ಗಾತ್ರದ ಕೋರೆಗಳು ಪತ್ತೆಯಾಗಿವೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಮಡಿಕೇರಿ ಡಿಎಫ್‌ಓ ಭಾಸ್ಕರ್, ಎಸಿಎಫ್ ಗೋಪಾಲ್, ಡಿಆರ್‌ಎಫ್‌ಓ ರತನ್ ಕುಮಾರ್, ವೈದ್ಯಾಧಿಕಾರಿ ಚಿಟ್ಟಿಯಪ್ಪ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಬೆಂಗಳೂರು ಮೈಸೂರು ಹಳೇ ಹೆದ್ದಾರಿಯಲ್ಲಿ ಕಾಡಾನೆ ಪ್ರತ್ಯಕ್ಷ!
ಚನ್ನಪಟ್ಟ ತಾಲೂಕಿನ ಕೆಂಗಲ್ ಗ್ರಾಮದ ಬಳಿ ಕಾಡಾನೆ ಪ್ರತ್ಯಕ್ಷವಾಗಿದ್ದು ವಾಹನ ಸವಾರರು, ಗ್ರಾಮಸ್ಥರು ಆತಂಕದಲ್ಲಿ ಓಡಾಡುವಂತಾಗಿದೆ.
ಒಂಟಿ ಸಲಗ ಸಂಚಾರ: ಚಾರ್ಮಾಡಿ ಘಾಟಿಯಲ್ಲಿ ಅರಣ್ಯ ಇಲಾಖೆಯಿಂದ ರಾತ್ರಿ ಗಸ್ತು
ಹೆದ್ದಾರಿ ಮೇಲೆಯೇ ರಾಜಾರೋಷವಾಗಿ ಓಡಾಡುತ್ತಿರುವ ಕಾಡಾನೆ. ಪಕ್ಕದ ಕೆಮ್ಮಣ್ಣುಗುಡ್ಡೆ ಅರಣ್ಯ ಪ್ರದೇಶದಿಂದ ಆಹಾರ ಹುಡುಕಿ ಬಂದಿರುವ ಕಾಡಾನೆ. ಕಳೆದ ಮೂರು ನಾಲ್ಕು ದಿನಗಳಿಂದ ರಾತ್ರಿ ವೇಳೆ ಹೆದ್ದಾರಿ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದೆ. ಕಾಡಾನೆ ಓಡಾಟದ ದೃಶ್ಯ ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಡಾನೆ ಹಾವಳಿ ಹೆಚ್ಚಾಗಿ ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.