ಕಾಡಾನೆ ದಾಳಿಗೆ ಮೂವರ ಬಲಿ: ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?
ಕಾಡಾನೆ ದಾಳಿಯ ಭಯದಲ್ಲಿದ್ದ ಮಲೆನಾಡಿನ ಜನರಿಗೆ ಸಿಎಂ ಸಿದ್ದರಾಮಯ್ಯ ಭರವಸೆಯೊಂದನ್ನು ನೀಡಿ ಹೋಗಿದ್ದರು,ಮುಖ್ಯಮಂತ್ರಿಗಳೇ ಹೇಳಿದ್ದಾರೆ, ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಅಂತ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದ ಮಲೆನಾಡಿಗರಿಗೆ ತಣ್ಣೀರೆರಚಿದಂತಾಗಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.23): ಕಾಡಾನೆ ದಾಳಿಯ ಭಯದಲ್ಲಿದ್ದ ಮಲೆನಾಡಿನ ಜನರಿಗೆ ಸಿಎಂ ಸಿದ್ದರಾಮಯ್ಯ ಭರವಸೆಯೊಂದನ್ನು ನೀಡಿ ಹೋಗಿದ್ದರು,ಮುಖ್ಯಮಂತ್ರಿಗಳೇ ಹೇಳಿದ್ದಾರೆ, ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಅಂತ ಆಸೆಗಣ್ಣಿನಿಂದ ಎದುರು ನೋಡುತ್ತಿದ್ದ ಮಲೆನಾಡಿಗರಿಗೆ ತಣ್ಣೀರೆರಚಿದಂತಾಗಿದೆ. ಕಾಫಿನಾಡಿಗೆ ಅತ್ತ ಜಿಲ್ಲಾ ಮಂತ್ರಿಯೂ ಇಲ್ಲ. ಇತ್ತ ಶಾಸಕರೂ ಇಲ್ಲ. ಸಚಿವರೂ ಇಲ್ಲ. ಎಲ್ಲರೂ ಇದ್ದಾರೆ. ಜನಗಳ ಪಾಲಿಗಿಲ್ಲ ಅಷ್ಟೆ. ಈ ಮಧ್ಯೆ ಸುಳ್ಳು ಹೇಳೋ ಸಿಎಂ ಎಂದು ಜನ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ, ಜೀವ ಭಯದಲ್ಲಿದ್ದ ಮಲೆನಾಡಿಗರಿಗೆ ಸಿಎಂ ಹೇಳಿದ ಭರವಸೆ ಯಾವ್ದು ಗೊತ್ತಾ..
ಮಲೆನಾಡಿಗರಿಗೆ ಸುಳ್ಳು ಹೇಳಿದ್ರಾ ಸಿಎಂ ಸಿದ್ದರಾಮಯ್ಯ?: ಕಾಫಿನಾಡಲ್ಲಿ ಕಾಡಾನೆ ದಾಳಿಗೆ ಕಳೆದ 2 ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕಿನ್ನಿ. 20 ದಿನದ ಹಿಂದೆ ವೀಣಾ. ನಿನ್ನೆ ಕಾರ್ತಿಕ್. ಎಲ್ಲರೂ ಮೂಡಿಗೆರೆ ತಾಲೂಕಿನವ್ರು. ಆದ್ರೆ, ಸರ್ಕಾರ ಹಾಗೂ ಅರಣ್ಯ ಇಲಾಖೆ 15 ಲಕ್ಷ ಕೊಟ್ಟು ಕೈ ತೊಳೆದುಕೊಳ್ತೋ ವಿನಃ ಆನೆ ಹಾವಾಳಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ. ಕಾಡಾನೆ ದಾಂದಲೆ ನಿಂತಿಲ್ಲ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ಒಬ್ಬರ ಮನೆಗೂ ಹೋಗಿ ಸಾಂತ್ವಾನ ಹೇಳಿಲ್ಲ. ಈ ಮಧ್ಯೆ 20 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ ದಿನವೇ ವೀಣಾ ಎಂಬ ಮಹಿಳೆಯನ್ನ ಆನೆ ಸಾಯಿಸಿತ್ತು. ಆವತ್ತು ಸಿಎಂ ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಅರಣ್ಯ ಸಚಿವರೇ ಇಲ್ಲಿಗೆ ಬಂದು ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಅಂತ ಹೇಳಿದ್ರು.
ಎರಡು ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಮೂವರ ಬಲಿ: ಹೆಚ್ಚಿದ ಜನಾಕ್ರೋಶ
ಆದ್ರೆ, ಯಾವ ಸಚಿವರು ಬರ್ಲಿಲ್ಲ. ಯಾವ ಸಭೆಯನ್ನು ನಡೆಸ್ಲಿಲ್ಲ. ಮಲೆನಾಡಿಗರಿಗೆ ಸಿಎಂ ಸುಳ್ಳು ಹೇಳಿ ಹೋದ್ರಾ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮೂರು ಜನ ಸತ್ರು ಕೂಡ ಒಬ್ಬರ ಮನೆಗೂ ಹೋಗಿ ಸಾಂತ್ವಾನ ಹೇಳಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಕಾರ್ಯಕ್ರಮ ಹಾಗೂ ತಮ್ಮ ತೋಟಕ್ಕಷ್ಟೆ ಸೀಮಿತವಾಗಿದ್ದಾರೆ ಅಂತ ಮಲೆನಾಡಿಗರು ವ್ಯಂಗ್ಯವಾಡಿದ್ದಾರೆ. ಮೃತ ಕಾರ್ತಿಕ್ ಮನೆಗೆ ಅರಣ್ಯ ಅಧಿಕಾರಿಗಳು 25 ಲಕ್ಷ ಕೊಟ್ಟಿದ್ದಾರೆ. ಇನ್ನು 25 ಲಕ್ಷ ಕೊಡಬೇಕು, ತಿಂಗಳಿಗೆ 10 ಸಾವಿರ ಮಾಸಾಶನ ನೀಡಬೇಕು. ಇಲ್ಲವಾದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡೋದಾಗಿ ಮಲೆನಾಡಿಗರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನರಹಂತಕ ಆನೆಗೆ ಗುಂಡಿಕ್ಕಿ ಕೊಲ್ಲಲು ಮಲೆನಾಡಿಗರ ಆಗ್ರಹ: ಆನೆ ದಾಳಿಯಿಂದ ಸತ್ತ ವ್ಯಕ್ತಿಗೆ ಸರ್ಕಾರ ಕೊಡುವ ಪರಿಹಾರದ ಬಗ್ಗೆಯೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ 15 ಲಕ್ಷ ಪರಿಹಾರವೇ ಪರಿಹಾರವಲ್ಲ. 15 ಲಕ್ಷ ಹಣ ಒಂದು ಜೀವವನ್ನ ತಂದು ಕೊಡಲ್ಲ. ನಮಗೆ ಪರಿಹಾರ ಬೇಡ. ಆನೆ ಹಾವಾಳಿಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ. ಸಕಲೇಶಪುರಲ್ಲಿ ಸತ್ತ ಶಾರ್ಪ್ ಶೂಟರ್ ಗಾದ್ರೆ 50 ಲಕ್ಷ ಪರಿಹಾರ ಕೊಡ್ತೀರಾ. ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತಿದ್ದ ಕಾರ್ತಿಕ್ ಗೆ ಏಕೆ 25 ಲಕ್ಷ. ಆತನ ತಾಯಿಗೂ 50 ಲಕ್ಷ ನೀಡಬೇಕು, ಆತ ಒಬ್ಬನೇ ಮಗ. 26 ವರ್ಷ ವಯಸ್ಸು. ಆತನ ತಾಯಿಯನ್ನ ಯಾರು ನೋಡಿಕೊಳ್ಳುತ್ತಾರೆ. 50 ಲಕ್ಷ ಪರಿಹಾರ ನೀಡಿ, ತಿಂಗಳಿಗೆ ಮಾಸಾಶನ 10 ಸಾವಿರ ನೀಡಬೇಕೆಂದು ಆಗ್ರಹಿಸಿದ್ದಾರೆ. ಆನೆ ದಾಳಿಗೆ ಸತ್ತವರಿಗೆಲ್ಲಾ 15 ಲಕ್ಷ ಪರಿಹಾರವಲ್ಲ.
ಅಕ್ರಮ ಭೂ ಮಂಜೂರು ಪ್ರಕರಣ: ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರೂ ಪ್ರಯೋಜವಿಲ್ಲ!
ಸಮಸ್ಯೆಗೆ ಪರಿಹಾರವೇ ಶಾಶ್ವತ ಪರಿಹಾರ. ಮೊದಲು ಅದನ್ನ ಮಾಡಿ. ನರಹಂತಕ ಆನೆಯನ್ನ ಗುಂಡಿಕ್ಕಿ ಕೊಲ್ಲಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಟ್ಟಾರೆ, ಕಾಫಿನಾಡಲ್ಲಿ ಆನೆ ಹಾವಳಿ ಕಡಿಮೆಯಾಗುತ್ತಿಲ್ಲ. ಆನೆಯಿಂದ ಸಾಯೋರ ಸಂಖ್ಯೆಯು ನಿಲ್ಲುತ್ತಿಲ್ಲ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಸಾವಿಗೂ ನಿಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಯಾರಾದ್ರು ಸತ್ತಾಗ. ಸ್ಥಳಕ್ಕೆ ಹೋಗಿ ಆಕ್ರೋಶಿತರ ಮುಖ-ಮೂತಿಗೆ ಬೆಣ್ಣೆಸವರಿ, ಪರಿಹಾರ ನೀಡಿ ಕೈತೊಳೆದುಕೊಳ್ತಾರೆ. ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಗೋಜಿಗೆ ಹೋಗ್ತಿಲ್ಲ. ಇದು ಮಲೆನಾಡಿಗರ ನಿಜವಾದ ಸಮಸ್ಯೆ. ಈ ಸಮಸ್ಯೆಗೆ ಸಿಎಂ, ಸಚಿವ, ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಉತ್ತರವಿಲ್ಲ. ಬರೀ ಸುಳ್ ಹೇಳ್ಕಂಡ್ ತೀರುಗ್ತಾರೆ. ಜನ ಮಾತ್ರ ನಿತ್ಯ ಆನೆ ಆತಂಕದಲ್ಲಿ ಜೀವವನ್ನ ಕೈನಲ್ಲಿ ಇಟ್ಕಂಡು ಓಡಾಡ್ತಿದ್ದಾರೆ. ಸರ್ಕಾರ ಏನ್ ಮಾಡುತ್ತೋ ಕಾದುನೋಡ್ಬೇಕು.