Chikkamagaluru: ಎರಡು ತಿಂಗಳ ಅಂತರದಲ್ಲಿ ಕಾಡಾನೆ ದಾಳಿಗೆ ಮೂವರ ಬಲಿ: ಹೆಚ್ಚಿದ ಜನಾಕ್ರೋಶ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಎರಡು ತಿಂಗಳ ಅಂತರದಲ್ಲಿ ಮೂವರು ಬಲಿ ಆಗಿದ್ದಾರೆ. ಇಂದು ಕೂಡ ಕಾಡಾನೆ ದಾಳಿ ಮುಂದುವರಿದ್ದು ಕಾಡಾನೆ ದಾಳಿಗೆ ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ದಿನಗೂಲಿ ನೌಕರ ಬಲಿ ಆಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ನ.22): ಮಲೆನಾಡಿನಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಎರಡು ತಿಂಗಳ ಅಂತರದಲ್ಲಿ ಮೂವರು ಬಲಿ ಆಗಿದ್ದಾರೆ. ಇಂದು ಕೂಡ ಕಾಡಾನೆ ದಾಳಿ ಮುಂದುವರಿದ್ದು ಕಾಡಾನೆ ದಾಳಿಗೆ ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ದಿನಗೂಲಿ ನೌಕರ ಬಲಿ ಆಗಿದ್ದಾರೆ. ಕಾಡಾನೆಯನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆ ನಿಗ್ರಹ ಪಡೆಯ ಸದಸ್ಯನನ್ನೇ ಆನೆ ಬಲಿ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬೈರಾಪುರ ಗ್ರಾಮದಲ್ಲಿ ಇಂದು ನಡೆದಿದೆ.
ಎರಡು ತಿಂಗಳ ಅಂತರದಲ್ಲಿ ಮೂವರ ಬಲಿ, ಹೆಚ್ಚಿದ ಜನಾಕ್ರೋಶ: ಮೂಡಿಗೆರೆ ತಾಲ್ಲೂಕು ಗೌಡಹಳ್ಳಿ ನಿವಾಸಿ ಕಾರ್ತಿಕ್ ಗೌಡ (26) ಮೃತ ದುರ್ದೈವಿಯಾಗಿದ್ದಾರೆ. ಆನೆಗಳ ಹಾವಳಿ ನಿಯಂತ್ರಿಸಲೆಂದೇ ರಚಿಸಲಾಗಿರುವ ಆನೆ ನಿಗ್ರಹ ಪಡೆಗೆ ಅರಣ್ಯ ಇಲಾಖೆ ಅವರನ್ನು ನೇಮಿಸಿಕೊಂಡಿತ್ತು.ಬೈರಾಪುರ ಗ್ರಾಮದಲ್ಲಿ ಇಂದು (ಬುಧವಾರ) ಬೆಳಗಿನಿಂದ ಆನೆಗಳು ದಾಳಿ ಇಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆನೆ ನಿಗ್ರಹ ಪಡೆಯು ಅವುಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಮಧ್ಯಾಹ್ನದ ವೇಳೆಗೆ ಗುಂಪಿನಲ್ಲಿದ್ದ ಆನೆಯೊಂದು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ತೀವ್ರ ಗಾಯಗೊಂಡ ಕಾರ್ತಿಕ್ ಗೌಡ ಸಾವಪ್ಪಿದ್ದಾರೆ.
ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್
ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತ ಕಾರ್ತಿಕ್ ಗೌಡ ಕಳೆದ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಕೇವಲ 20 ದಿನಗಳ ಹಿಂದಷ್ಟೇ ಆಲ್ದೂರು ಸಮೀಪ ಒಂಟಿ ಸಲಗ ದಾಳಿ ಮಾಡಿ ಮೀಣಾ ಎಂಬ ಕಾರ್ಮಿಕ ಮಹಿಳೆಯೊಬ್ಬರನ್ನು ಕೊಂದಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ದುರುಂತ ಸಂಭವಿಸಿದ್ದು, ಮಲೆನಾಡನ್ನು ತಲ್ಲಣಗೊಳಿಸಿದೆ. ಒಂದೂವರೆ ತಿಂಗಳ ಹಿಂದೆ ಆಲ್ದೂರಿನ ಕುಂದೂರು ಬಳಿ ಚಿನ್ನಿ ಎಂಬುವವರನ್ನು ಆನೆ ಬಲಿ ಪಡೆದಿತ್ತು. ಇದೀಗ ಕಾರ್ತಿಕ್ ಗೌಡನನ್ನು ಆನೆ ಕೊಂದಿದೆ. ಎರಡೇ ತಿಂಗಳಲ್ಲಿ ಮೂರು ಮಂದಿ ಆನೆ ದಾಳಿಗೆ ತುತ್ತಾಗಿ ಜೀವ ಕಳೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೋಗು ಅಂದರೆ ಹೋಗೋಕೆ ತಾಳಿ ಕಟ್ಟಿದ ಹೆಂಡತಿ ನಾನಲ್ಲ: ಸಿ.ಎಂ.ಇಬ್ರಾಹಿಂ
ಆನೆ ಹಾವಾಳಿಗೆ ಶಾಶ್ವತ ಪರಿಹಾರಕ್ಕೆ ಒತ್ತಾಯ: ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ದಶಕದಿಂದಲೂ ಕೂಡ ಆನೆ ಹಾವಳಿ ಯಥೇಚ್ಛವಾಗಿದೆ. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದಂತೂ ಮಲೆನಾಡಿಗರು ಆನೆ ಭಯದಲ್ಲಿ ಬದುಕುತ್ತಿದ್ದಾರೆ. ಕಳೆದ ಎರಡು ವರ್ಷದಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನ ಆನೆ ದಾಳಿಗೆ ಉಸಿರು ಚೆಲ್ಲಿದ್ದಾರೆ. ಪ್ರತಿ ಬಾರಿ ಆನೆ ದಾಳಿಗೆ ಸಾವು ಸಂಭವಿಸಿದ ಬಳಿಕ ಆನೆ ಹಾವಾಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರಿಂದ ಆನೆ ಹಾವಾಳಿಗೆ ಕಡಿವಾಣ ಇಲ್ಲದಂತಾಗಿದೆ. ಸರ್ಕಾರ ಕೂಡ ನರಹಂತಕ ಕಾಡಾನೆಯನ್ನ ಸೆರೆ ಹಿಡಿಯಲು ಅನುಮತಿ ನೀಡುತ್ತೆ. ಆದ್ರೆ, ಮಲೆನಾಡಿಗರು ನಮಗೆ ನರಹಂತಕ ಆನೆಯ ಸ್ಥಳಾಂತರ ಬೇಡ. ಆನೆ ದಾಳಿಗೆ ಶಾಶ್ವತ ಪರಿಹಾರ ಬೇಕು. ಇಲ್ಲವಾದರೆ, ಆನೆ ದಾಳಿಯಿಂದ ಮುಂದಿನ ದಿನಗಳಲ್ಲೂ ಪ್ರಾಣ ಕಳೆದುಕೊಳ್ಳುವ ಸಂಖ್ಯೆ ಕಡಿಮೆ ಆಗುವುದಿಲ್ಲ. ಹಾಗಾಗಿ, ನಮಗೆ ನಿಮ್ಮ ಹಣಕಾಸಿನ ಪರಿಹಾರ, ಸ್ಥಳಾಂತರ ಬೇಡ. ಆನೆ ಹಾವಾಳಿಗೆ ಶಾಶ್ವತ ಪರಿಹಾರ ನೀಡಿ ಎಂದು ಆಗ್ರಹಿಸಿದ್ದಾರೆ.