ಬಿಜೆಪಿ ನಾಯಕರುಗಳಲ್ಲಿ ಫೈರ್ ಬ್ರಾಂಡ್ ಎಂದೇ ಗುರುತಿಸಿಕೊಂಡಿರುವ ರಾಷ್ಟ್ರೀಯ ಪ್ರಧಾನ ಕಾರ್ಯಕರ್ಶಿ ಸಾಮಾನ್ಯ ಕಾರ್ಯಕರ್ತನಾಗಿ ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು ಹೇಗೆ ಗೊತ್ತಾ? ಇಲ್ಲಿದೆ ವಿಶೇಷ ವರದಿ!

ವರದಿ: ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಜು.19) : ಸಿಟಿ ರವಿ ರಾಜ್ಯ ಬಿಜೆಪಿ ಪಾಳಯದ ಫೈರ್ ಬ್ರಾಂಡ್. ನೇರವಾಗಿ ವಿಚಾರ ಮಂಡಿಸುವ ಮತ್ತು ಮಂಡಿಸಿದ ವಿಷಯವನ್ನು ಸಮರ್ಥನೆ ಮಾಡಿಕೊಳ್ಳುವ ಕೆಲವೆ‌ ಕೆಲವು ರಾಜ್ಯ ಬಿಜೆಪಿ ನಾಯಕರಲ್ಲಿ ಇವರು ಮೊದಲಿಗರು. ಪಕ್ಷ ಏನನ್ನು ಬಯಸುತ್ತಿದೆ. ನಾನೇನು ಮಾಡಿದರೆ ಪಕ್ಷ ಲಾಭ ಆಗಲಿದೆ ಎನ್ನೋದನ್ನ ಗ್ರಹಿಸುವ ಜೊತೆ ಜೊತೆಗೆ ರಾಜಕೀಯವಾಗಿ ನಾನು ತಲುಪಬೇಕಾದ ಗುರಿ ಯಾವುದು ಎನ್ನೋದನ್ನ ಸ್ಮೃತಿ ಪಟಲದಲ್ಲಿ ಪ್ರಿಂಟ್ ಹಾಕಿ ಇಟ್ಟುಕೊಂಡು ವ್ಯವಹರಿಸುವ ಅತಿ ಸೂಕ್ಷ್ಮ ಗೃಹಿ ರಾಜಕಾರಣಿ. 

ಅವರು ಸಚಿವ ಯಡಿಯೂರಪ್ಪ (B. S. Yediyurappa) ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆ(Tourism Department.) ಸಚಿವರಾಗಿದ್ದವರು ಏಕಾಏಕಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(National General Secretary) ಹೇಗಾದ್ರು,, ಯಾಕೆ ಆದ್ರೂ ಎನ್ನೋದು ಸಹಜ ಕುತೂಹಲ. ಆ ನಿರ್ಧಾರದ ಹಿಂದೆ ಹೈಕಮಾಂಡ್ ಯೋಚನೆ ಏನ್ ಇತ್ತು ಎಂದು ನಿಖರವಾಗಿ ಹೇಳೊದು ಕಷ್ಟ. ಆದ್ರೆ ಸಿಟಿ ರವಿ(CT Ravi) ಯಾಕೆ ಸಚಿವ ಸ್ಥಾನ ಬಿಟ್ಟು ರಾಷ್ಟ್ರ ರಾಜಕೀಯಕ್ಕೆ ಹೋದ್ರು ಎನ್ನೋದನ್ನ ವಿಮರ್ಶೆ ಮಾಡಿ ನೋಡಿದ್ರೆ, ಸಿಟಿ ರವಿ ಉದ್ದೇಶ ಕನಸು ದೊಡ್ಡದಿದೆ ಎನ್ನಬಹುದು. ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್‌ ಸಮೀಪ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸೂಚನೆ

ಅವನು ದಡ್ಡ ಸಚಿವ ಸ್ಥಾನ ಬಿಟ್ಟು ಹೋಗಿದ್ದಾನೆ ಎಂದಿದ್ದರು:

ಸಿಟಿ ರವಿಯವರು ಸಚಿವ ಸ್ಥಾನಕ್ಕೆ ರಾಜೀನಾಮೆ(resignation) ನೀಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಒಪ್ಪಿಕೊಂಡಾಗ ರಾಜ್ಯದ ಬಿಜೆಪಿ(BJP) ಪ್ರಮುಖ ಲೀಡರ್ ಒಬ್ಬರು, ಅಯ್ಯೋ ಸಿಟಿ ರವಿ ದಡ್ಡ. ಪಕ್ಷದ ಜವಬ್ದಾರಿ ಯಾವಾಗ ಬೇಕಾದರೂ ಮಾಡಬಹುದು. ಆದ್ರೆ ಮಂತ್ರಿ ಆಗೋಕೆ ಆಗತ್ತಾ ಎಂದು ಮಾತನಾಡಿದ್ದು ಸಿಟಿ ರವಿ ಗಮನಕ್ಕೆ ಬಂದಿತ್ತಾದ್ರೂ, ಅದನ್ನು ಕೇಳಿ ಸಿಟಿ ರವಿ ನಕ್ಕು ಸುಮ್ಮನಾಗಿದ್ರಂತೆ.

ಜೆಪಿ ನಡ್ಡಾ(J.P. Nadda) ನಿನಗೆ ಕರೆ ಮಾಡಬಹುದು ಎಂದಿದ್ರಂತೆ ಯಡಿಯೂರಪ್ಪ: ಅಂದು ಯಡಿಯೂರಪ್ಪ ಮುಖ್ಯಮಂತ್ರಿ. ಜೆಪಿ ನಡ್ಡಾ ಒಂದು ದಿನ ಯಡಿಯೂರಪ್ಪಗೆ ಕರೆ ಮಾಡಿ ಸಿಟಿ ರವಿಯನ್ನು ನಾವು ಸಂಘಟನೆಗೆ ಬಳಸಿಕೊಳ್ಳಲು ಯೋಚನೆ ಮಾಡಿದ್ದೇವೆ. ನಿಮ್ಮ ಅಭಿಪ್ರಾಯ ಏನು ಎಂದು ಬಿಎಸ್ ವೈಗೆ ಕೇಳಿದ್ರಂತೆ. ಆಗ ಯಡಿಯೂರಪ್ಪರು ಅವನು ಒಪ್ಪಿದ್ರೆ ನನ್ನದೇನು ಅಭ್ಯಂತರ ಇಲ್ಲ ಅಂದಿದ್ರಂತೆ. ಒಂದು ದಿನ ಸರ್ಕಾರಿ ಕಾರ್ಯಕ್ರಮ ಒಂದರ ವೇದಿಕೆಯಲ್ಲಿ ಇದ್ದ ಯಡಿಯೂರಪ್ಪರು, ಅಲ್ಲೇ ಇದ್ದ ಸಿಟಿ ರವಿಯವರಿಗೆ ನಿನಗೆ ಜೆಪಿ ನಡ್ಡಾ ಜಿ ಕರೆ ಮಾಡಬಹುದು ಎಂದಿದ್ರಂತೆ. ನಡ್ಡಾ ಅವರು ಕರೆ ಮಾಡುವ ತನಕ ಸಿಟಿ ರವಿಯವರಿಗೆ ತಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗ್ತೇನೆ ಎನ್ನುವ ಕಲ್ಪನೆ‌ ಇರಲಿಲ್ಲ. ಜೆಪಿ ನಡ್ಡಾ ಅವರು ಕರೆ ಮಾಡಿ ಸಂಘಟನೆಗೆ ಬರ್ತಿರೊ, ಅಥವಾ ಸಚಿವನಾಗಿ ಮುಂದುವರಿಯುತ್ತಿಯೋ ಎಂದು ಕೇಳಿದಾಗ, ನನ್ನ ಆದ್ಯತೆ ಸಂಘಟನೆಗೆ ಎಂದಿದ್ರಂತೆ ಸಿಟಿ ರವಿ..

ಇದನ್ನೂ ಓದಿ: ಫ್ರೀ ಸ್ಕೀಂ ಅಪಾಯದ ಎಚ್ಚರಿಕೆ ಕೊಟ್ಟ ಪ್ರಧಾನಿ: ಏನಿದು ಮೋದಿ ಹೇಳಿದ ರೇವ್ಡಿ ಜಾಗೃತಿ?

ಯಡಿಯೂರಪ್ಪರಿಗೆ ಪಕ್ಷ ಎಲ್ಲವನ್ನೂ ನೀಡಿದೆ: ಯಡಿಯೂರಪ್ಪರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರೆ ಎನ್ನೋದು ಹೈಕಮಾಂಡ್ ನಲ್ಲಿ‌ ನಿರ್ಧಾರ ಆಗಿತ್ತು. ಆದ್ರೆ ಅವರು ಯಾವಾಗ ರಾಜೀನಾಮೆ ಕೊಡ್ತಾರೆ ಎನ್ನೋದು ಇನ್ನೂ ಯಡಿಯೂರಪ್ಪರಿಗೆ ಹೊರತುಪಡಿಸಿ ಮತ್ಯಾರಿಗೂ ಗೊತ್ತಿರಲಿಲ್ಲ. ಮಾಧ್ಯಮದಲ್ಲಿ ಅದೇ ಸುದ್ದಿ ಜೋರಾಗಿ ಓಡ್ತಾ ಇತ್ತು. ಆ ವೇಳೆ ಗೋವಾದಲ್ಲಿದ್ದ ಸಿಟಿ ರವಿಯವರು, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪಕ್ಷ ಯಡಿಯೂರಪ್ಪರಿಗೆ ಎಲ್ಲವನ್ನೂ ನೀಡಿದೆ. ರಾಜ್ಯಾಧ್ಯಕ್ಷ, ಉಪಮುಖ್ಯಮಂತ್ರಿ, ನಾಲ್ಕು ಬಾರಿ ಸಿಎಂ ಹೀಗೆ ಪಕ್ಷ ಯಡಿಯೂರಪ್ಪರಿಗೆ ಎಲ್ಲವನ್ನೂ ನೀಡಿದೆ ಎಂದುಬಿಟ್ಟಿದ್ದರು. ಅವರ ಮಾತಿನಿಂದ ಯಡಿಯೂರಪ್ಪ ಅಭಿಮಾನಿಗಳು, ಕೆಲ ಶಾಸಕರು ಸಿಟಿ ರವಿ ಮೇಲೆ ಆಂತರಿಕವಾಗಿ ಅಸಮಾಧಾನಗೊಂಡಿದ್ರು. ಆದ್ರೆ ಸಿಟಿ ರವಿ ಯಡಿಯೂರಪ್ಪರಿಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂಬ ವಾಸ್ತವ ವಿಚಾರವನ್ನು ಹೇಳಿದ್ದರು ಮತ್ತು ತಮ್ಮ ಹೇಳಿಕೆಯಿಂದ ಯಾರಿಗೆ ನೋವಾಗಲಿದೆ ಎನ್ನೋದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. 

ಯಡಿಯೂರಪ್ಪರಿಗೆ ಗೊತ್ತು ನಾನು ನೇರಾನೇರ: ಅಂದುಕೊಂಡಂತೆ ಯಡಿಯೂರಪ್ಪರು ಎರಡು ವರ್ಷ ಸಿಎಂ ಆಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಎರಡು ವರ್ಷದ ಸರ್ಕಾರದ ಸಾಧನೆ ಪುಸ್ತಕ ಹೊರ ತಂದು ಅಂದೇ ರಾಜೀನಾಮೆ ನೀಡಿದ್ರು. ಅದಾದ ವಾರದ ಬಳಿಕ ಸಿಟಿ ರವಿ ಯಡಿಯೂರಪ್ಪ ನಿವಾಸಕ್ಕೆ ತೆರಳಿ ಉಭಯ ಕೊಶಲೋಪರಿ ವಿಚಾರಿಸಿ ಬಂದಿದ್ರು. ಪತ್ರಕರ್ತರು ಎನ್ ಸರ್ ಯಡಿಯೂರಪ್ಪ ನಿಮ್ಮ ಜೊತೆ ಚೆನ್ನಾಗಿ ಮಾತಾಡಿದ್ರಾ ಎಂದು ಕೇಳಿದ್ದಕ್ಕೆ, ನೋಡ್ರೊ, ಹಿಂದೊಂದು ಮುಂದೊಂದು ಮಾತಾಡೋರಗಿಂತ ಸಿಟಿ ರವಿ ಕೊನೆ ಪಕ್ಷ ನೇರವಾಗಿ ಎದುರುಗಡೆ ಹೇಳ್ತಾನೆ ಎಂಬುದು ಅವರಿಗೆ ಗೊತ್ತಿದೆ. ಮುಂದೆ ಹೊಗಳಿ ಹಿಂದೆ ಕೆಟ್ಟದಾಗಿ ಮಾತಾಡೋಕೆ ನನಗೆ ಬರೋದಿಲ್ಲ ಎಂದಿದ್ರು. 

ಒಮ್ಮೆ ಮಾಡಿದ ತಪ್ಪನ್ನು ಮತ್ತೆ ಮಾಡಲ್ಲ: ಸಿಟಿ ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿ ದೆಹಲಿಗೆ ಹೋದಾಗ, ಚಿಕ್ಕ ಅಳಕು ಇತ್ತಂತೆ. ಅದಕ್ಕೆ ಕಾರಣ ಭಾಷೆ. ಹೀಗಾಗಿ ಒಂದು ವರ್ಷ ಮಾಧ್ಯಮದದಿಂದ ದೂರ ಇದ್ದ ಸಿಟಿ ರವಿ, ಈಗ ಹಿಂದಿಯಲ್ಲಿ ಭಾಷಣ ಮಾಡುವಷ್ಟು ಹಿಂದಿಯನ್ನು ಗಟ್ಟಿ ದನಿಯಲ್ಲಿ ಮಾತಾಡುತ್ತಾರೆ. ಆದರೆ ಆರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಳಿ ಹೋಗಿ ನನಗೆ ಹಿಂದಿ ಚೆನ್ನಾಗಿ ಬರೋದಿಲ್ಲ. ಅದು ಸಮಸ್ಯೆ ಆಗಬಹುದು ಎಂದಾಗ, ನಡ್ಡಾ ಹೇಳಿದ್ರಂತೆ, ನೀನು ಹಿಂದಿ ಕಲಿ ಎಂದು. ಅವರಿಗೆ ಸಮಸ್ಯೆ ಇಲ್ಲ ಎಂದ ಮೇಲೆ ನನ್ನದೇನು ಎಂದುಕೊಂಡ ಸಿಟಿ ರವಿ ಈಗ ಹಿಂದೆ ಕಲಿತು ಭಾಷಣ ಹೊಡಿತಾರೆ ಅಂದ್ರೆ ಈ ಮನುಷ್ಯ ಚುರುಕು ಬುದ್ದಿಯವರೆ ಬಿಡಿ.

ನಾನು ಪಕ್ಕಾ ಹಳ್ಳಿಯಿಂದ ಬಂದವ: ಪಕ್ಷದ ವರಿಷ್ಠರಿಗೆ ಸಿಟಿ ರವಿ ಒಮ್ಮೆ ಹೇಳಿದ್ರಂತೆ. ನಾನು ವಿಷಯ ಮಂಡಿಸುವಾಗ ಭಾಷೆ ಶಬ್ದ ಅಡ್ಡಿಯಾಗಬಹುದು. ಆದ್ರೆ ನೀವು ನನ್ನ ಭಾವನೆ ಅರ್ಥ ಮಾಡಿಕೊಳ್ಳಿ. ನಾನು ಹೇಳಿ ಕೇಳಿ ಹಳ್ಳಿಯಿಂದ ಬಂದವನು. ನನಗೆ ಫಿಲ್ಟರ್ ಇಲ್ಲ. ನಾನು ಮಾಡಿದ ತಪ್ಪನ್ನು ಮತ್ತೆ ಮತ್ತೆ ಮಾಡಲ್ಲ. ಹೊಸ ಹೊಸ ತಪ್ಪುಗಳನ್ನು ಮಾಡ್ತೇನೆ. ನೀವು ಅದನ್ನು ಸಹಿಸ್ಕೊಬೇಕು ಎಂದು ನೇರವಾಗಿ ಹೇಳಿದ್ದಾರಂತೆ. ಅಷ್ಟಕ್ಕು ಹಲಾಲ್ ಕಟ್ ಗದ್ದಲ ರಾಜ್ಯಲ್ಲಿ ಶುರುವಾದಾಗ ಅದರ ಕಾವು ಹೆಚ್ಚಾಗಿದ್ದು ಸಿಟಿ ರವಿ ಹಲಾಲ್ ಎಕಾನಮಿ ಬಗ್ಗೆ ಮಾತಾಡಿದ ಮೇಲೆ ಎನ್ನೋದು ಗಮನಾರ್ಹ. ಹಾಗಾಂತ ಅದು ಪಕ್ಷದ ನಿಲುವು ಆಗಿರಲಿಲ್ಲ ಎನ್ನೋದು ಸತ್ಯ. ಅದಕ್ಕೆ ಇರಬೇಕು ಅಮಿತ್ ಶಾ ರಾಜ್ಯಕ್ಕೆ ಬಂದು ಕೋರ್ ಕಮಿಟಿ ಸಭೆ ಮಾಡಿದ್ದಾಗ ಸಭೆಯಲ್ಲಿ ಎಲ್ಲರನ್ನೂ ಉದ್ದೇಶಿಸಿ, ಹಲಾಲ್ ಗಿಲಾಲ್ ಚೋಡ್ ದೊ ಎಂದಿದ್ರಂತೆ. 

ಬಾರದು ಬಪ್ಪದು ಬಪ್ಪದು ತಪ್ಪದು: ಗ್ರಾಮೀಣ ಮಟ್ಟದಿಂದ ಬಂದು ತಾಲೂಕು ಲೆವೆಲ್ ಗೆ ತಲುಪಿ, ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ, ರಾಜ್ಯದಲ್ಲಿ ತನ್ನ ಬ್ರಾಂಡ್ ಹೆಚ್ಚಿಸಿಕೊಂಡ ಸಿಟಿ ರವಿ ಈಗ ರಾಷ್ಟ್ರ ರಾಜಕೀಯದ ಲ್ಲಿ ಸಂಘಟನೆ ಜವಬ್ದಾರಿ ನಿರ್ವಹಣೆ ಮಾಡ್ತಾ ಇದ್ದಾರೆ. ಪತ್ರಕರ್ತರ‌ ಮಿತ್ರರು ಏನ್ ಸರ್ ನೀವು ಯಾವಾಗ ಸಿಎಂ ಆಗೋದು ಎಂದು ಕಾಲೆಳೆದರೆ ಅಷ್ಟೇ ಚುರುಕಾಗಿ ಉತ್ತರ ನೀಡುವ ಸಿಟಿ ರವಿ, ಕೇಂದ್ರ ಮಟ್ಟದಲ್ಲಿ ಹೆಸರಾಗಿದ್ದ ದಿವಗಂತ ಅನಂತ್ ಕುಮಾರ್ ರನ್ನು ನೆನಪು ಮಾಡಿಕೊಳ್ತಾರೆ. ಅನಂತ್ ಕುಮಾರ್ ಸದಾ ಒಂದು ಮಾತು ಹೇಳ್ತಾ ಇದ್ರಂತೆ. ಬಾರದು ಬಪ್ಪದು‌ ಬಪ್ಪದು ತಪ್ಪದು.‌ಅದೇ ಮಾತನ್ನು ಸಿಟಿ ರವಿ ಕೂಡ ಹೇಳ್ತಾರೆ. ನಾನು ಲಿಫ್ಟ್ ಹತ್ತಿ ಬಂದವನಲ್ಲ. ನಾನು ಮೆಟ್ಟಿಲು ಏರಿ ಬಂದವನು. ಲಿಫ್ಟ್ ಏರಿ ಬಂದವರೆಲ್ಲಾ ಎಲ್ಲೆಲ್ಲೋ ಹೋದ್ರಿ ಬಿಡಿ ಎನ್ನುವ ಅವರು ಅಂತವರ ಕೆಲವು ಹೆಸರನ್ನು ಕೂಡ ನೆನಪು ಮಾಡಿಕೊಳ್ತಾರೆ. ಆದ್ರೆ ಅದನ್ನು ಇಲ್ಲಿ ಹೇಳೋದು ಬೇಡ.‌ ರಾಜಕೀಯದಲ್ಲಿ ಈಗ ಪಕ್ಷದ ಉನ್ನತ ಸ್ಥಾನದಲ್ಲಿ ಇದ್ದರೂ ಕೂಡ, ರಾಜ್ಯದ ಮೇಲೆ , ರಾಜ್ಯ ರಾಜಕೀಯದ ಮೇಲೆ ನಿಶ್ಚಿತವಾಗಿ ಅವರ ಆಸೆಗಣ್ಣಿದೆ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಂದು, ಯುವ ಮೋರ್ಚಾ ರಾಜ್ಯಾಧ್ಯಕ್ಷ ಆಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿ, ಸಚಿವನಾಗಿರುವ ವ್ಯಕ್ತಿ ಮುಂದೆ ಮುಖ್ಯಮಂತ್ರಿ ಆಗುವ ಕನಸು ಕಂಡರೆ ತಪ್ಪೇನು ಇಲ್ಲ ಬಿಡಿ...