ಬೆಂಗಳೂರು(ಜು.26): ದೇವರ ಜೀವನಹಳ್ಳಿ (ಡಿ.ಜೆ.) ವಾರ್ಡ್‌-47ರಲ್ಲಿ ಕೊರೋನಾ ಸೋಂಕಿನಿಂದ ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ ಎಂದು ಡಿ.ಜೆ.ಹಳ್ಳಿ ವಾರ್ಡ್‌ ಪಾಲಿಕೆ ಸದಸ್ಯ ಸಂಪತ್‌ ರಾಜ್‌ ಸ್ಪಷ್ಟಪಡಿಸಿದ್ದಾರೆ.

ಎಸ್‌.ಕೆ.ಗಾರ್ಡನ್‌ ವಾರ್ಡ್‌-61 ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದು, ಮಾಧ್ಯಮಗಳು ಡಿ.ಜೆ.ಹಳ್ಳಿ ವಾರ್ಡ್‌ನಲ್ಲಿ ಮೃತಪಟ್ಟಿರುವುದಾಗಿ ಪ್ರಸಾರ ಮಾಡುತ್ತಿವೆ. 

ಕೊರೋನಾ ಕಾಟ: ಅರ್ಧದಷ್ಟು ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳ ಸಮ್ಮತಿ

ಡಿ.ಜೆ ಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ, ಎಸ್‌.ಕೆ. ಗಾರ್ಡನ್‌ ವಾರ್ಡ್‌ ವ್ಯಾಪ್ತಿಯಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಆದರೂ ಡಿ.ಜೆ.ಹಳ್ಳಿ ವಾರ್ಡ್‌ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ ಎಂದು ಸುದ್ದಿ ಬಿತ್ತರಿಸುತ್ತಿರುವುದರಿಂದ, ವಾರ್ಡ್‌ ವ್ಯಾಪ್ತಿಯ ನಾಗರಿಕರು ಭಯಭೀತರಾಗಿದ್ದಾರೆ. ನಮ್ಮ ವಾರ್ಡ್‌ನಲ್ಲಿ ಹೆಚ್ಚಿನ ಪ್ರಕರಣ ಇಲ್ಲ. ಸೋಂಕಿನಿಂದ ಯಾರು ಮೃತಪಟ್ಟಿಲ್ಲ ಎಂದು ಸಂಪತ್‌ ರಾಜ್‌ ಸ್ಪಷ್ಟಪಡಿಸಿದ್ದಾರೆ.