Asianet Suvarna News Asianet Suvarna News

ಬೆಂಗಳೂರು: ತಿಂಗಳಾದರೂ ಆರಂಭವಾಗದ ವೈಟ್‌ಟಾಪಿಂಗ್‌ ಕಾಮಗಾರಿ

ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಅರ್ಧಕ್ಕೆ ಸ್ಥಗಿತಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಹೇಳಿ ತಿಂಗಳಾಗುತ್ತಾ ಬಂದರೂ, ಕಾಮಗಾರಿ ಮಾತ್ರ ಇನ್ನೂ ಪುನಾರಂಭಗೊಂಡಿಲ್ಲ.

white topping work still not started
Author
Bangalore, First Published Oct 30, 2019, 10:40 AM IST

ಬೆಂಗಳೂರು(ಅ.30): ಪೊಲೀಸ್‌ ಇಲಾಖೆಯ ಅನುಮತಿ ಪಡೆದು ಅರ್ಧಕ್ಕೆ ಸ್ಥಗಿತಗೊಂಡ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಚುರುಕುಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಹೇಳಿ ತಿಂಗಳಾಗುತ್ತಾ ಬಂದರೂ, ಕಾಮಗಾರಿ ಮಾತ್ರ ಇನ್ನೂ ಪುನಾರಂಭಗೊಂಡಿಲ್ಲ.

ಈಗಾಗಲೇ ನಗರದಲ್ಲಿ ಕೈಗೊಂಡಿರುವ ಮೊದಲ ಮತ್ತು ಎರಡನೇ ಹಂತದ ವೈಟ್‌ ಟಾಪಿಂಗ್‌ ರಸ್ತೆಗಳ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಅ.9ರಿಂದ ಬಾಕಿ ಉಳಿದಿರುವ ವೈಟ್‌ಟಾಪಿಂಗ್‌ ರಸ್ತೆಗಳ ಕಾಮಗಾರಿಗೆ ಪೊಲೀಸ್‌ ಇಲಾಖೆ ಅನುಮತಿ ನೀಡಲಿದೆ ಎಂದು ಆಯುಕ್ತರು ತಿಂಗಳ ಆರಂಭದಲ್ಲೇ ಹೇಳಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಕಾಮಗಾರಿ ಚುರುಕು ಪಡೆದುಕೊಂಡಿಲ್ಲ. ವೈಟ್‌ಟಾಪಿಂಗ್‌ ಕಾಮಗಾರಿ ಸ್ಥಗಿತಗೊಂಡ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆಮುಂದುವರೆದಿದ್ದು, ಸಾರ್ವಜನಿಕರು ನಿತ್ಯತೊಂದರೆ ಅನುಭವಿಸಬೇಕಾಗಿದೆ.

ಭ್ರಷ್ಟರಿಗೆ ದುಸ್ವಪ್ನವಾಗಿದ್ದ ಮಾಜಿ ಲೋಕಾಯುಕ್ತ ಎನ್.ವೆಂಕಟಾಚಲ ಇನ್ನಿಲ್ಲ

ಈ ಕುರಿತು ಮಂಗಳವಾರ ಪ್ರತಿಕ್ರಿಯೆ ನೀಡಿದ ಆಯುಕ್ತರು, ಸಂಚಾರಿ ಪೊಲೀಸರು ಅರ್ಧಕ್ಕೆ ಸ್ಥಗಿತಗೊಂಡ ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಕಳೆದ ಸೋಮವಾರ ಒಪ್ಪಿಗೆ ನೀಡಿದ್ದಾರೆ. ತ್ವರಿತವಾಗಿ ಕಾಮಗಾರಿ ಆರಂಭಿಸುವುದಕ್ಕೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ವರ್ಷದಿಂದ ಕಾಮಗಾರಿ ಸ್ಥಗಿತ

ಒಂದು ವರ್ಷದ ಹಿಂದೆ ಪ್ರಾರಂಭಗೊಂಡ ವೈಟ್‌ಟಾಪಿಂಕ್‌ ಕಾಮಗಾರಿ ಈವರೆಗೂ ಪೂರ್ಣಗೊಂಡಿಲ್ಲ. ಜಲ ಮಂಡಳಿ ಕೊಳವೆ ಅಳವಡಿಕೆ ಕಾಮಗಾರಿ ನಡೆಸುವುದಕ್ಕೆ ಹೊರ ರಾಜ್ಯದವರಿಗೆ ಗುತ್ತಿಗೆ ನೀಡಿದ್ದು, ಕಾಮಗಾರಿಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಬಿಬಿಎಂಪಿ ಮತ್ತು ಜಲ ಮಂಡಳಿಯ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ . ಉದ್ದೇಶಪೂರ್ವಕವಾಗಿಯೇ ವೈಟ್‌ಟಾಪಿಂಗ್‌ ಕಾಮಗಾರಿ ವಿಳಂಬ ಮಾಡಲಾಗತ್ತಿದೆ ಎಂದು ವಿಶ್ವೇಶ್ವರಪುರ ವಾರ್ಡ್‌ನ ಸದಸ್ಯೆ ವಾಣಿ. ವಿ. ರಾವ್‌ ಆರೋಪಿಸಿದ್ದಾರೆ.

ಗುತ್ತಲ: ಕರಿಹರಿಯುವ ಮುನ್ನ ಗೌಳಿಗರ ಎಮ್ಮೆಗಳ ಮೆರವಣಿಗೆ

Follow Us:
Download App:
  • android
  • ios