ಐಷಾರಾಮಿ ಪ್ರವಾಸಕ್ಕೆ ಬಂತು ಸುಸಜ್ಜಿತ ಕ್ಯಾರವಾನ್!
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಪ್ರವಾಸಿಗರಿಗಾಗಿ ನೂತನ ಕ್ಯಾರವಾನ್ ವಾಹನ ಪರಿಚಯಿಸಿದೆ. ಬುಧವಾರ ವಿಧಾನಸೌಧದ ಆವರಣದಲ್ಲಿ ಈ ವಿನೂತನ ಕ್ಯಾರವಾನ್‌ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸಿದರು.
ಬೆಂಗಳೂರು (ಸೆ.29): ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ವಿನೂತನ ಹೆಜ್ಜೆ ಇಟ್ಟಿದ್ದು, ಪ್ರವಾಸಿಗರಿಗಾಗಿ ನೂತನ ಕ್ಯಾರವಾನ್ ವಾಹನ ಪರಿಚಯಿಸಿದೆ. ಬುಧವಾರ ವಿಧಾನಸೌಧದ ಆವರಣದಲ್ಲಿ ಈ ವಿನೂತನ ಕ್ಯಾರವಾನ್‌ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಸಿರು ನಿಶಾನೆ ತೋರಿಸಿದರು.
ಖಾಸಗಿ ಕಂಪನಿಯೊಂದು ಪ್ರವಾಸಿಗರಿಗೆ ತಕ್ಕಂತೆ ಈ ಕ್ಯಾರವಾನ್ ವಿನ್ಯಾಸಗೊಳಿಸಿದೆ. ಬಸ್ ಮಾದರಿಯ ಕ್ಯಾರವಾನ್‌ನಲ್ಲಿ ಮನೆಯ ವಾತಾವರಣ ಸೃಷ್ಟಿಸಲಾಗಿದ್ದು ಎರಡು ಹಾಸಿಗೆಗಳು, ಒಂದು ಟೇಬಲ್, ನಾಲ್ಕು ಕುರ್ಚಿಗಳು, ಅಡುಗೆ ಮನೆ, ಬೆಡ್ ರೂಮ್, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ನಾಲ್ಕರಿಂದ ಐದು ಮಂದಿ ಪ್ರಯಾಣ ಮಾಡಬಹುದಾಗಿದೆ. ಕ್ಯಾರವಾನ್ ಬಳಕೆ ಮಾಡುವ ಪ್ರವಾಸಿಗರು ಅದರಲ್ಲೇ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡಿ, ರಾತ್ರಿ ಸಮಯದಲ್ಲಿ ವಾಹನದಲ್ಲೇ ತಂಗುವ ವ್ಯವಸ್ಥೆ ಮಾಡಲಾಗಿದೆ.
ಸಾಲ ಕಟ್ಟದ ರೈತರ ಆಸ್ತಿಗಳ ಜಪ್ತಿ ತಡೆಗೆ ಕಾಯ್ದೆ: ಸಿಎಂ ಬೊಮ್ಮಾಯಿ
ಕಾರು ಮಾದರಿಯ ಕ್ಯಾರವಾನ್‌ನಲ್ಲಿ(ಮೋಟರ್ ಹೋಂ) ಮೂವರು ಅನಾಯಾಸವಾಗಿ ಪ್ರಯಾಣ ಮಾಡಬಹುದಾಗಿದ್ದು ಚಿಕ್ಕ ಕೊಠಡಿ, ಶೌಚಾಲಯ, ಅಡುಗೆ ಮನೆ ವ್ಯವಸ್ಥೆ ಇದೆ. ಈ ವಾಹನಗಳನ್ನು ರಾಜ್ಯದ ಜೆಎಲ್‌ಆರ್ (ಜಂಗಲ್ ಲಾಡ್ಜ್ ಅಂಡ್ ರೆಸಾರ್ಚ್) ಆವರಣದಲ್ಲಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್‌ನಿಂದಾಗಿ ಪ್ರವಾಸಿಗರು ಹೋಟೆಲ್‌ಗಳನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕ್ಯಾರವಾನ್ ವ್ಯವಸ್ಥೆಯಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಸದ್ಯ ಖಾಸಗಿ ಸಹಭಾಗಿತ್ವದಲ್ಲಿ ಕ್ಯಾರವಾನ್‌ಗಳನ್ನು ಒದಗಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಅದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್ ವ್ಯವಸ್ಥೆ ಮಾಡಲು ಚಿಂತನೆ ನಡೆಸಿದೆ. ಈ ವೆಬ್‌ಸೈಟ್ ಮೂಲಕ ಕ್ಯಾರವಾನ್ ಬಾಡಿಗೆ ಪಡೆಯಬೇಕೆಂದಿರುವವರು ಬುಕ್ಕಿಂಗ್ ಮಾಡಿಕೊಳ್ಳಬಹುದು. ದಿನಕ್ಕೆ ಎಷ್ಟುಬಾಡಿಗೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಶೀಘ್ರವೇ ಈ ಕುರಿತು ಕ್ರಮ ಕೈಗೊಂಡು ಪ್ರಕಟಿಸುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಸೋದ್ಯಮಕ್ಕೆ ಸರ್ಕಾರದ ಬಂಪರ್: ಪ್ರವಾಸೋದ್ಯಮ ಯೋಜನೆಗಳಿಗೆ ಸಂಬಂಧಿಸಿದ ಗುತ್ತಿಗೆ ಒಪ್ಪಂದ ಹಾಗೂ ಕ್ರಯಪತ್ರಗಳಿಗೆ ಶೇ.50ರಷ್ಟುಮುದ್ರಾಂಕ ಶುಲ್ಕ ರಿಯಾಯ್ತಿ ನೀಡುವುದೂ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ಸರ್ಕಾರ ಪ್ರಕಟಿಸಿದೆ.
ನಾನು ಲಾ ಓದಿದ್ದೇನೆ, ಬೊಮ್ಮಾಯಿ ಲಾ ಓದಿಲ್ಲ, ಬೆದರಿಕೆಗೆ ಬಗ್ಗಲ್ಲ: ಸಿದ್ದರಾಮಯ್ಯ
ಪ್ರವಾಸಿ ಗೈಡ್‌ಗಳ ಗೌರವಧನ ಹೆಚ್ಚಳ: ರಾಜ್ಯದ 365 ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ಕೊಡುತ್ತಿರುವ 2 ಸಾವಿರ ರು. ಪ್ರೋತ್ಸಾಹ ಧನವನ್ನು 5 ಸಾವಿರ ರು.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.