ಮಸೀದಿ ಜಾಗದಲ್ಲಿ ದೇವಾಲಯ ನಿರ್ಮಾಣ ಶತಸಿದ್ಧ: ಈಶ್ವರಪ್ಪ

ಎಲ್ಲೆಲ್ಲಿ ಹಿಂದೂ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೋ ಅಲ್ಲಿ ಮುಂದೊಂದು ದಿನ ದೇವಾಲಯ ನಿರ್ಮಿಸುತ್ತೇವೆ. 5 ವರ್ಷ ಆಗಬಹುದು, 50 ವರ್ಷವಾಗಬಹದು, ಅದನ್ನು ಮಾಡಿಯೇ ತೀರುತ್ತೇವೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

We will build a temple in the place of a mosque says ks eshwarappa rav

ಹಾವೇರಿ *ಜೂ.25)  ಎಲ್ಲೆಲ್ಲಿ ಹಿಂದೂ ದೇಗುಲ ಒಡೆದು ಮಸೀದಿ ಕಟ್ಟಿದ್ದಾರೋ ಅಲ್ಲಿ ಮುಂದೊಂದು ದಿನ ದೇವಾಲಯ ನಿರ್ಮಿಸುತ್ತೇವೆ. 5 ವರ್ಷ ಆಗಬಹುದು, 50 ವರ್ಷವಾಗಬಹದು, ಅದನ್ನು ಮಾಡಿಯೇ ತೀರುತ್ತೇವೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಶಾಸಕರಿಗೆ ರವಿಶಂಕರ ಗೂರೂಜಿ, ಗುರುರಾಜ ಕರ್ಜಗಿ ಅವರಿಂದ ಮಾರ್ಗದರ್ಶನ ಮಾಡಿಸುವ ಬಗ್ಗೆ ವಿರೋಧ ವ್ಯಕ್ತವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ಮುಸ್ಲಿಮರನ್ನು ಸಂತೃಪ್ತಿಪಡಿಸುವುದೆ ಕೆಲಸ. ಮುಸ್ಲಿಮರು ಇಲ್ಲದಿದ್ದರೆ ದೇಶದಲ್ಲಿ ಕಾಂಗ್ರೆಸ್‌ ಸರ್ವನಾಶ ಆಗುತ್ತಿತ್ತು. ಅವರು ಇರುವುದರಿಂದ ಇನ್ನೂ ಜೀವಿಸುತ್ತಿದೆ. ಅದಕ್ಕಾಗಿ ಸುಮ್ಮನೆ ಇದನ್ನು ಸೃಷ್ಟಿಸಿದ್ದಾರೆ ಎಂದರು.

 

ಮಸೀದಿ ಕೆಡವಿದಾಗ ದೇವಸ್ಥಾನ ಪತ್ತೆ; ಮಸೀದಿ ಕಾಮಗಾರಿಗೆ ತಡೆಯಾಜ್ಞೆ ತಂದ ಭಜರಂಗದಳ!

ಕಾಂಗ್ರೆಸ್‌ನವರಿಗೆ ಆರ್ಟಿಕಲ್‌ 370 ರದ್ದುಗೊಳ್ಳಬಾರದಿತ್ತು. ರದ್ದಾಗಿ ಅದು ಅವರಿಗೆ ನಿರಾಶೆಯಾಗಿದೆ. ಅಯೋಧ್ಯೆ ರೀತಿಯಲ್ಲಿಯೇ ಕಾಶಿ ವಿಶ್ವನಾಥ ದೇವಾಲಯದ ಬಗ್ಗೆ ಕೂಡಾ ತೀರ್ಪು ಬರಲಿದೆ. ಇದರ ಜತೆಗೆ ದೇಶದಲ್ಲಿ ಎಲ್ಲೆಲ್ಲಿ ಹಿಂದೂ ದೇವಾಲಯ ನಾಶ ಮಾಡಿ ಮಸೀದಿ ಕಟ್ಟಿದ್ದಾರೋ ಆ ಮಸೀದಿ ಕೆಡವಿ ಮತ್ತೆ ಹಿಂದೂ ದೇವಾಲಯ ನಿರ್ಮಾಣವಾಗಲಿವೆ. ಭಾರತೀಯ ಸಂಸ್ಕೃತಿ ಮರು ನಿರ್ಮಿಸಲು ಬಿಜೆಪಿ ಸಿದ್ಧವಾಗಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ ರೋಡ್‌ ಹಂಪ್‌ ರೀತಿ ಅಡ್ಡಿಯಾಗಿದೆ. ಮುಸ್ಲಿಂ ಲೀಗ್‌ಗಿಂತ ಕಾಂಗ್ರೆಸ್‌ಗೆ ಮುಸ್ಲಿಮರ ಮೇಲೆ ಆಸಕ್ತಿಯಿದೆ ಎಂದು ಟೀಕಿಸಿದರು.

ಶ್ವೇತಪತ್ರ ಹೊರಡಿಸಿ:

ರಾಜ್ಯದಲ್ಲಿ ಮೋಸದಿಂದ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಗ್ಯಾರಂಟಿ ನಂಬಿ ಕಾಂಗ್ರೆಸ್‌ಗೆ ಜನ ವೋಟ್‌ ಕೊಟ್ಟಿದ್ದರು. ಅದನ್ನು ನಂಬಿ ಕೆಟ್ಟಿದ್ದೇವೆ ಎಂದು ಈಗ ಜನರು ಪರಿತಪಿಸುತ್ತಿದ್ದಾರೆ. ಅಕ್ಕಿಯನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್‌ ನಾಯಕರು ಮಾಡುತ್ತಿದ್ದಾರೆ. ಇದೊಂದು ಮೋಸಗಾರ ಸರ್ಕಾರ ಎಂದು ಜನರ ವಿರೋಧ ಆರಂಭವಾಗಿದೆ. ಈ ಸರ್ಕಾರ ಎಷ್ಟುದಿನ ಇರುತ್ತದೆ ಎಂಬುದು ಗೊತ್ತಿಲ್ಲ. 5 ಗ್ಯಾರಂಟಿ ಯೋಜನೆಗಳಿಗೆ ಎಲ್ಲಿಂದ ಹಣ ತರುತ್ತೀರಿ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ಸೋಲಿಗೆ ಹತಾಶೆ ಬೇಡ:

ಬಿಜೆಪಿ ಕಾರ್ಯಕರ್ತರಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ ಎನ್ನುವುದು ತಾತ್ಕಾಲಿಕ ನಿರಾಶೆ. ತಾಪಂ, ಜಿಪಂ ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಲಿದೆ. ಸೋಲಿಗೆ ಹಲವು ಕಾರಣಗಳಿವೆ. ಅದನ್ನು ನಾವು ಕುಳಿತು ಚರ್ಚಿಸುತ್ತೇವೆ. ಕಳೆದ ಚುನಾವಣೆ ಸೋಲಿಗೆ ನಮ್ಮದೂ ತಪ್ಪಿದೆ. ಸೋಲು ಬಿಜೆಪಿಗೆ ಹೊಸದಲ್ಲ. ರಾಷ್ಟ್ರೀಯತೆ ಸಿದ್ಧಾಂತದ ಮೇಲೆ ನಾವು ಮತ್ತೆ ಸಂಘಟನೆ ಬಲಪಡಿಸುತ್ತೇವೆ. ಸಂಘಟನೆ, ಕೇಂದ್ರದ ಸಾಧನೆ ಮತ್ತು ಮೋದಿ ನಾಯಕತ್ವ ಇಟ್ಟುಕೊಂಡು ಮುಂಬರುವ ಎಲ್ಲ ಚುನಾವಣೆಗಳಲ್ಲಿ ಜಯಭೇರಿ ಬಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಭೋಜರಾಜ ಕರೂದಿ, ಪಾಲಾಕ್ಷಗೌಡ ಪಾಟೀಲ, ಪ್ರಭು ಹಿಟ್ನಳ್ಳಿ, ಕಿರಣ ಕೋಣನವರ ಇದ್ದರು.

Srirangapatna Mosque : ಬಾಬ್ರಿ ರೀತಿ ಶ್ರೀರಂಗಪಟ್ಟಣ ಮಸೀದಿ ಕೆಡವಲು ಸಂಚು: ಆರೋಪ

ಈ ಸರ್ಕಾರ ಹೆಚ್ಚು ದಿನ ಇರಲ್ಲ

ಕಾಂಗ್ರೆಸ್‌ ಸರ್ಕಾರ ಎಷ್ಟುದಿನ ಇರುತ್ತದೆ ಎಂಬುದು ಗೊತ್ತಿಲ್ಲ. ಐದು ವರ್ಷ ತಾನೇ ಸಿಎಂ ಎಂದು ಸಿದ್ದರಾಮಯ್ಯ ಯಾವಾಗ ಹೇಳುತ್ತಾರೋ ಅಂದೇ ಈ ಸರ್ಕಾರ ಬೀಳುತ್ತದೆ ಎಂದು ಕೆ.ಎಸ್‌. ಈಶ್ವರಪ್ಪ ಹೇಳಿದರು. ಬಹುಮತ ಬಂದರೂ ಮುಖ್ಯಮಂತ್ರಿ ಆಯ್ಕೆ ಮಾಡಲು ಕಾಂಗ್ರೆಸ್‌ ಹಲವು ದಿನ ತೆಗೆದುಕೊಂಡಿತು. 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ ಎಂದು ಎಂ.ಬಿ. ಪಾಟೀಲ ಹೇಳಿದರೂ ಅವರ ಪಕ್ಷದ ಯಾರೂ ಈ ಬಗ್ಗೆ ಮಾತನಾಡಲಿಲ್ಲ ಎಂದು ಹೇಳಿದರು.

Latest Videos
Follow Us:
Download App:
  • android
  • ios