Asianet Suvarna News Asianet Suvarna News

Srirangapatna Mosque : ಬಾಬ್ರಿ ರೀತಿ ಶ್ರೀರಂಗಪಟ್ಟಣ ಮಸೀದಿ ಕೆಡವಲು ಸಂಚು: ಆರೋಪ

  •  ಬಾಬ್ರಿ ರೀತಿ ಶ್ರೀರಂಗಪಟ್ಟಣ ಮಸೀದಿ ಕೆಡವಲು ಸಂಚು: ಆರೋಪ
  •  ಸಾಮರಸ್ಯ ಹಾಳುಮಾಡುವ ಉದ್ದೇಶದಿಂದ ಸಂಕೀರ್ತನಾ ಯಾತ್ರೆ
  • -ಶ್ರೀರಂಗಪಟ್ಟಣದ ಮಸೀದೆ-ಎ-ಆಲಾ ಕೆಡವಲು ಹುನ್ನಾರ
  • -ಸಾಮಾಜಿಕ ಜಾಲ ತಾಣಗಳಲ್ಲಿ ಮಸೀದಿ ಧ್ವಂಸಗೊಳಿಸುವ ಪ್ರಚಾರ
  • -ಮಂಡ್ಯದಲ್ಲಿ ಮುಸ್ಲಿಂ ಮುಖಂಡರಿಂದ ಗಂಭೀರ ಆರೋಪ
     
Muslim Leaders allegation For plan To Demolish  Srirangapatna Mosque snr
Author
Bengaluru, First Published Dec 14, 2021, 8:19 AM IST

ಮಂಡ್ಯ (ಡಿ.14):  ಅಯೋಧ್ಯೆಯಲ್ಲಿ (Ayodhya) ಬಾಬರಿ ಮಸೀದಿ (Babri masjid) ಕೆಡವಿದ ರೀತಿಯಲ್ಲೇ ಡಿ.16ರಂದು ಹನುಮ ಜಯಂತಿ ಆಚರಣೆ ವೇಳೆ ಶ್ರೀರಂಗಪಟ್ಟಣದ (Srirangapattana) ಮಸೀದೆ-ಎ-ಅಲಾ ಕೆಡವಲು ಕೆಲವು ಸಂಘಟನೆಗಳು ಸಂಚು ರೂಪಿಸಿವೆ ಎಂದು ಮಂಡ್ಯ ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದ (Social Media)  ಮೂಲಕ ಈ ಬಗ್ಗೆ ಪ್ರಚಾರ ಮಾಡಲಾಗಿದ್ದು ಅಂದು ಶಾಂತಿ ಕದಡುವ ಹಾಗೂ ಹಿಂದೂ-ಮುಸ್ಲಿಂ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದಲೇ ಸಂಕೀರ್ತನಾ ಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರಾದ(Muslim Leaders) ಮುನಾವರ್‌ ಖಾನ್‌, ರಿಜ್ವಾನ್‌ ಸೈಯದ್‌, ಮಹಮದ್‌ ಬಾಷಾ, ಅಮ್ಜದ್‌ ಖಾನ್‌, ನದೀಮ್‌ ಅಹಮದ್‌, ಮುಜಾಹಿಲ್‌ ಖಲೀಮ್‌ ಮಸೀದಿ ಇರುವ ಜಾಗದಲ್ಲಿ ಹಿಂದೆ ಹನುಮ ಮಂದಿರವಿತ್ತು(Hanuma temple). ಮತ್ತೆ ಅದೇ ಜಾಗದಲ್ಲಿ ಹನುಮ ಮಂದಿರವನ್ನು ಪುನರ್‌ ನಿರ್ಮಾಣ ಮಾಡುತ್ತೇವೆ ಎಂದು ಸಾಮಾಜಿಕ ಜಾಲ ತಾಣದ ಮೂಲಕ ಪ್ರಚಾರ ಮಾಡಿದ್ದಾರೆ ಆತಂಕ ವ್ಯಕ್ತಪಡಿಸಿದರು. ತಕ್ಷಣವೇ ಮಸೀದಿಗೆ ಬಿಗಿ ಪೊಲೀಸ್‌ (Police) ಬಂದೋಬಸ್ತ್ ಒದಗಿಸಬೇಕೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

ಮಥುರಾ ಮಸೀದಿ ಹಿಂದುಗಳಿಗೆ ಕೊಡಿ :   ಉತ್ತರ ಪ್ರದೇಶದ ಯೋಗಿ ಸರ್ಕಾರದ (Uttar pradesh, Yogi Adityanath Govt) ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಆನಂದ್ ಸ್ವರೂಪ್ ಶುಕ್ಲಾ (Anand Swarup Shukla) ಅವರು ಮಥುರಾದಲ್ಲಿ ನಡೆಯುತ್ತಿರುವ ವಿವಾದದ ಕುರಿತು ಮುಸ್ಲಿಂ ಸಮಾಜಕ್ಕೆ ಮನವಿ ಮಾಡಿದ್ದಾರೆ. ಮಥುರಾದ 'ಶ್ರೀ ಕೃಷ್ಣ ಜನ್ಮಭೂಮಿ (Shri Krishna Janmabhoomi) ಸಂಕೀರ್ಣ'ದಲ್ಲಿರುವ 'ಸಫೇದ್ ಭವನ' (ಮಸೀದಿ)ಯನ್ನು ಮುಸ್ಲಿಮರೇ ಮುಂದೆ ಬಂದು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಆನಂದ್ ಸ್ವರೂಪ್ ಮಂಗಳವಾರ ಹೇಳಿದ್ದಾರೆ. ನ್ಯಾಯಾಲಯವು ಅಯೋಧ್ಯೆ ಸಮಸ್ಯೆಯನ್ನು ಪರಿಹರಿಸಿದೆ ಆದರೆ ಕಾಶಿ ಮತ್ತು ಮಥುರಾದಲ್ಲಿನ ಶ್ವೇತ ಗುಮ್ಮಟಗಳು ಹಿಂದೂಗಳಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು. ಅವರು ಕಾಶಿ ಮತ್ತು ಮಥುರಾದಲ್ಲಿ ನಿರ್ಮಿಸಲಾದ ಎರಡು ಮುಸ್ಲಿಂ ಧಾರ್ಮಿಕ ರಚನೆಗಳ ಬಗ್ಗೆ ಈ ಮಾತು ಹೇಳಿದ್ದಾರೆ.

ಮಥುರಾದಲ್ಲಿರುವ ಪ್ರತಿ ಹಿಂದೂಗಳನ್ನು ಚುಚ್ಚುವ ಶ್ವೇತ ಗುಮ್ಮಟಗಳನ್ನು ನ್ಯಾಯಾಲಯದ ಸಹಾಯದಿಂದ ತೆಗೆದುಹಾಕುವ ಸಮಯ ಬರುತ್ತದೆ ಎಂದು ಆನಂದ್ ಸ್ವರೂಪ್ ಹೇಳಿದ್ದಾರೆ. ಭಾರತದ ಮುಸ್ಲಿಮರು ರಾಮ ಮತ್ತು ಕೃಷ್ಣ ತಮ್ಮ ಪೂರ್ವಜರೆಂದು ನಂಬಬೇಕು ಮತ್ತು ಬಾಬರ್, ಅಕ್ಬರ್ ಮತ್ತು ಔರಂಗಜೇಬ್ ದಾಳಿಕೋರರು ಎಂದು ಡಾ ರಾಮ್ ಮನೋಹರ್ ಲೋಹಿಯಾ ಹೇಳಿದ್ದರು. ಅವರು ನಿರ್ಮಿಸಿದ ಯಾವುದೇ ಕಟ್ಟಡದೊಂದಿಗೆ ನಿಮ್ಮನ್ನು ಸಂಯೋಜಿಸಬೇಡಿ. ಮುಸ್ಲಿಂ ಸಮುದಾಯದವರು ಮುಂದೆ ಬಂದು ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿರುವ ಬಿಳಿ ಕಟ್ಟಡವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು. ಈ ಕೆಲಸ ಪೂರ್ಣಗೊಳ್ಳುವ ಕಾಲ ಬರಲಿದೆ ಎಂದಿದ್ದಾರೆ.

ವಾಸಿಂ ರಿಜ್ವಿಯಿಂದ ಮುಸ್ಲಿಮರು ಕಲಿಯಬೇಕು

ಶಿಯಾ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಸನಾತನ ಧರ್ಮವನ್ನು ಸ್ವೀಕಾರ ಸಂಬಂಧಿಸಿದ ಪ್ರಶ್ನೆಗೆ ಆನಂದ್ ಸ್ವರೂಪ್ ಇದು ಘರ್‌ ವಾಪಸಿಯಾಗಿದೆ ಮತ್ತು ಮುಸ್ಲಿಮರು ವಾಸಿಂ ರಿಜ್ವಿಯನ್ನು ಅನುಕರಿಸಬೇಕು ಎಂದು ಹೇಳಿದರು. ದೇಶದಲ್ಲಿರುವ ಮುಸ್ಲಿಮರೆಲ್ಲರೂ ಮತಾಂತರಗೊಂಡವರೇ ಆಗಿದ್ದಾರೆ. ಅವರ ಇತಿಹಾಸವನ್ನು ಅವಲೋಕಿಸಿದರೆ 200 ರಿಂದ 250 ವರ್ಷಗಳ ಹಿಂದೆ ಅವರು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರು. ಅವರೆಲ್ಲರೂ ಮನೆಗೆ ಮರಳಬೇಕೆಂದು ನಾವು ಬಯಸುತ್ತೇವೆ. ಭಾರತದ ಮೂಲ ಸಂಸ್ಕೃತಿ 'ಹಿಂದುತ್ವ' ಮತ್ತು 'ಭಾರತೀಯತೆ' ಪರಸ್ಪರ ಪೂರಕವಾಗಿದೆ. ಅಯೋಧ್ಯೆಯಲ್ಲಿ ನಿರಾಯುಧ ಕರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ ಸಮಾಜವಾದಿ ಪಕ್ಷ, ಅದರ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಮತ್ತು ಅದರ ಅಧ್ಯಕ್ಷ ಅಖಿಲೇಶ್ ಯಾದವ್ ಹಿಂದೂ ವಿರೋಧಿ ಎಂದು ಶುಕ್ಲಾ ಬಣ್ಣಿಸಿದರು.

Follow Us:
Download App:
  • android
  • ios