ಲಾಕ್ಡೌನ್‌ ವೇಳೆ ಕಾರ್ಮಿಕರ ಕಣ್ಣೀರು ಒರೆಸಿದ್ದೇವೆ: ಕಟೀಲ್‌

ಲಾಕ್ಡೌನ್‌ ವೇಳೆ ಕಾರ್ಮಿಕರ ಕಣ್ಣೀರು ಒರೆಸಿದ್ದೇವೆ: ಕಟೀಲ್‌| ಜನಸಂವಾದ ರಾರ‍ಯಲಿಯಲ್ಲಿ ನಡ್ಡಾಗೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ ಮಾಹಿತಿ| 1.5 ಕೋಟಿ ಊಟ, 49 ಲಕ್ಷ ದಿನಸಿ ಪ್ಯಾಕೆಟ್‌, 65 ಲಕ್ಷ ಮಾಸ್ಕ್‌ ವಿತರಣೆ

We Have Helped The Migrant Workers Says Karnataka BJP President Nalin Kumar Kateel

ಬೆಂಗಳೂರು(ಜೂ.15): ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಸಂಕಷ್ಟದಲ್ಲಿದ್ದ 1.52 ಕೋಟಿ ಜನರಿಗೆ ಆಹಾರದ ಪೊಟ್ಟಣ, ದಿನಸಿ, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ವಿತರಿಸುವ ಮೂಲಕ ಪಕ್ಷವು ಸಾಮಾಜಿಕ ಜವಾಬ್ದಾರಿ ಮೆರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ವರ್ಚುವಲ್‌ ವೀಡಿಯೋ ಕಾನ್ಫರೆನ್ಸ್‌ ಮೂಲಕ ‘ಕರ್ನಾಟಕ ಜನಸಂವಾದ ರಾರ‍ಯಲಿ’ಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕರ್ನಾಟಕ ಜನ ಸಂವಾದ ರ‍್ಯಾಲಿ: ಯಡಿಯೂರಪ್ಪರನ್ನ ಹೊಗಳಿದ ಜೆಪಿ ನಡ್ಡಾ

ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ಸೂಚನೆ ಮೇರೆಗೆ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಸಾಮಾಜಿಕ ಜವಾಬ್ದಾರಿ ವಹಿಸಿಕೊಂಡು ಕನಿಷ್ಠ ಐದು ಜನರಿಗೆ ಆಹಾರ ನೀಡುವ ಮೂಲಕ ವಲಸೆ ಕಾರ್ಮಿಕರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ರಾಜ್ಯದ ಪ್ರತಿ ಶಾಸಕರು, ಸಚಿವರು, ಜಿಪಂ ಸದಸ್ಯರು, ಪಾಲಿಕೆ ಸದಸ್ಯರು ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಕೈಜೋಡಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ರಾಜ್ಯ ಬಿಜೆಪಿ ವತಿಯಿಂದ 1.52 ಕೋಟಿ ಜನರಿಗೆ ಆಹಾರದ ಪೊಟ್ಟಣ, 49 ಲಕ್ಷ ಜನರಿಗೆ ದಿನಸಿ, 65 ಲಕ್ಷ ಜನರಿಗೆ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ವಿತರಣೆ, 1.9 ಲಕ್ಷ ಜನರ ಮಾಸ್ಕ್‌ಗಳ ತಯಾರಿಕೆ, 6 ಲಕ್ಷ ಜನರಿಗೆ ಸಹಾಯವಾಣಿ ಮೂಲಕ ಸಹಾಯ, 64.21 ಲಕ್ಷ ಪಿಎಂ ಕೇರ್‌ಗೆ ಸಂಪರ್ಕ ಮಾಡಿಸುವುದು ಮತ್ತು 6.03 ಲಕ್ಷ ಜನರಿಗೆ ಆರೋಗ್ಯಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಸುವ ಕೆಲಸ ಮಾಡಿದೆ. ನಮ್ಮ ಜೊತೆಗೆ ರಾಜ್ಯದ ಎಲ್ಲಾ ಎನ್‌ಜಿಒ, ಮಠ ಮಾನ್ಯಗಳು ಹತ್ತಾರು ರೀತಿಯಲ್ಲಿ ಸಹಾಯ ಮಾಡುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಬೆಂಬಲ ನೀಡಿದ್ದಾರೆ ಎಂದರು.

ಕೇಂದ್ರ ಸರ್ಕಾರವು ಸ್ವದೇಶಿ ಚಿಂತನೆಯಲ್ಲಿ ಆತ್ಮನಿರ್ಭರ ಯೋಜನೆಯಡಿ 20 ಲಕ್ಷ ಕೋಟಿ ರು. ಪ್ಯಾಕೇಜ್‌ ಮತ್ತು ಕೊರೋನಾ ವೇಳೆ ರಾಜ್ಯ ಸರ್ಕಾರ ಘೋಷಿಸಿರುವ ಯೋಜನೆಗಳು ಮತ್ತು ಸರ್ಕಾರದ ಸಾಧನೆಯನ್ನು ಮನೆ ಮನೆ ಸಂಪರ್ಕ ಮಾಡಿ 16 ಲಕ್ಷ ಮನೆಗಳಿಗೆ ತಲುಪಿಸಲಾಗಿದೆ ಎಂದು ಹೇಳಿದರು.

ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ದೇಶಕ್ಕೆ ಮಾದರಿಯಾಗಿದೆ. ಬೇರೆ ರಾಜ್ಯ ಘೋಷಿಸುವ ಮೊದಲೇ ಪ್ಯಾಕೇಜ್‌ ಘೋಷಿಸಿ ಆಟೋ, ಟ್ಯಾಕ್ಸಿ ಚಾಲಕರು, ನೇಕಾರರು, ಕ್ಷೌರಿಕರು, ಮಡಿವಾಳರು ಸೇರಿದಂತೆ 18.5 ಲಕ್ಷ ಕಾರ್ಮಿಕರಿಗೆ 5 ಸಾವಿರ ರು. ಸಹಾಯ ಧನ, ಹೂ ಬೆಳೆಗಾರರಿಗೆ ಎಕರೆಗೆ 20 ಸಾವಿರ ರು., ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ವಿದ್ಯುತ್‌ ಬಿಲ್‌ ಮನ್ನಾ ಮಾಡುವ ಮೂಲಕ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಎಂಎಲ್‌ಸಿ ಟಿಕೆಟ್‌ ಆಕಾಂಕ್ಷಿ​ಗ​ಳಿಗೆ ಕಟೀಲ್‌ ಶಾಕ್‌!

ಕೊರೋನಾ ನಿಯಂತ್ರಣಕ್ಕೆ ಅಮೆರಿಕ, ಇಟಲಿಯಂತಹ ದೇಶಗಳೇ ಸೋತಿದ್ದರೂ ಭಾರತ ನಿಯಂತ್ರಣ ಮಾಡಿದೆ. ಈ ಮೂಲಕ ಅಮೆರಿಕವೇ ಭಾರತದತ್ತ ನೋಡುವಂತೆ ಮಾಡಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರು ಕರೆ ನೀಡಿದಾಗ ಇಡೀ ದೇಶದ ದೇಶದ ಜನ ಕೈಜೋಡಿಸಿದ್ದರು. ಸ್ವಾತಂತ್ರ್ಯ ನಂತರ ಕೊರೋನಾ ನಿಯಂತ್ರಣಕ್ಕಾಗಿ ಜನತಾ ಕಫä್ರ್ಯ ವಿಧಿಸಿದಾಗ ದೇಶದ ಜನ ಮೋದಿ ಅವರಿಗೆ ಕೈಜೋಡಿಸುವ ಮೂಲಕ ತಾವು ನಿಮ್ಮೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿದ್ದಾರೆ ಎಂದರು.

Latest Videos
Follow Us:
Download App:
  • android
  • ios