ಕರ್ನಾಟಕ ಜನ ಸಂವಾದ ರ‍್ಯಾಲಿ: ಯಡಿಯೂರಪ್ಪರನ್ನ ಹೊಗಳಿದ ಜೆಪಿ ನಡ್ಡಾ
ಕರ್ನಾಟಕ ಜನ ಸಂವಾದ ರ‍್ಯಾಲಿ (Rally)ಯನ್ನುದ್ದೇಶಿಸಿ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾರವರು ಮಾತನಾಡಿದರು. ಭಾಷಣಗಳ ಹೈಲೇಟ್ಸ್ ಇಲ್ಲಿದೆ.
ಬೆಂಗಳೂರು, (ಜೂನ್.14): ಕರ್ನಾಟಕ ಜನ ಸಂವಾದ ರ‍್ಯಾಲಿ (Rally)ಯನ್ನುದ್ದೇಶಿಸಿ ವಿಡಿಯೋ ಕಾನ್ಫ್ ರೆನ್ಸ್ ಮೂಲಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾರವರು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಮಾತನಾಡಿದರು, ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಅಧ್ಯಕ್ಷೀಯ ಭಾಷಣ ಮಾಡಿದರು. ಎಲ್ಲರ ಭಾಷಣಗಳ ಹೈಲೇಟ್ಸ್ ಇಲ್ಲಿದೆ.
ಯಡಿಯೂರಪ್ಪರನ್ನ ಹೊಗಳಿದ ಜೆಪಿ ನಡ್ಡಾ
ಟ್ರೆಸ್, ಟೆಕ್ನಿಕಲ್, ಟೆಸ್ಟ್, ಟ್ರಿಟ್ಮೆಂಟ್ ಕರ್ನಾಟಕದಲ್ಲಿ ಮಾಡಲಾಗಿದ್ದು, ಯಡಿಯೂರಪ್ಪನವರು ಬಹಳ ಮುಂದಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಕೇಸ್ ಬೇರಡೆ ಹೋಲಿಸಿದರೆ ಕಡಿಮೆ ಇದೆ. ಯಡಿಯೂರಪ್ಪ ಟೀಮ್ ಅತ್ಯುತ್ತಮವಾಗಿ ಕೆಲಸ ಮಾಡಿದೆ.
ಅಷ್ಟೇ ಅಲ್ಲದೇ ಯಡಿಯೂರಪ್ಪನವರು ಸಹ ಪ್ಯಾಕೇಜ್ ಘೋಷಣೆ ಮಾಡಿದ್ದು, ಕೃಷಿಕರು, ಸವಿತಾ ಸಮಾಜ, ಆಟೊ ರೀಕ್ಷಾ ಹೀಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಯಡಿಯೂರಪ್ಪರ ಕಾರ್ಯಕವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮುಕ್ತ ಕಂಠದಿಂದ ಶ್ಲಾಘಿಸಿದರು.
ಬಾಲಿವುಡ್ ನಟ ಸುಶಾಂತ್ ಸೂಸೈಡ್, ಮತ್ತೆ ಲಾಕ್‌ಡೌನ್‌ಗೆ ಮೋದಿ ಡಿಸೈಡ್?ಜೂ.14ರ ಟಾಪ್ 10 ಸುದ್ದಿ!
ಯಡಿಯೂರಪ್ಪ ಭಾಷಣ
ಮೋದಿಯಿಂದ ವಿಶ್ವವೇ ಭಾರತದತ್ತ ನೋಡುತ್ತಿದ್ದು, ಬಲಿಷ್ಠ ಭಾರತದ ರೂವಾರಿ. ವಿಶ್ವದಲ್ಲೇ ಅಗ್ರಗಣ್ಯ ನಾಯಕ. ತ್ರಿವಳಿ ತಲಾಕ್ ರದ್ದು , ರೈತರು ಕಾರ್ಮಿಕರಿಗೆ ಪಿಂಚಣಿ, ಆಯುಷ್ ಮಾನ್ ಭಾರತ್ ಯೋಜನೆ, ಮೇಕ್ ಇನ್ ಇಂಡಿಯಾ ಘೋಷಣೆ ಮೋದಿ ಸಾಧನೆಯಾಗಿದೆ.
ಕೊರೋನಾ ಹೋರಾಟದಲ್ಲಿ ವಿಶ್ವವೇ ಭಾರತವನ್ನು ಶ್ಲಾಘಿಸಿದೆ. ಆರೋಗ್ಯ, ಕೃಷಿ, ಶಿಕ್ಷಣ ಬಾಹ್ಯಾಕಾಶ , ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಭಾರತ ಸಾಧನೆ ಮಾಡಿದೆ ಎಂದು ಹೇಳಿದರು.
ನಳೀನ್ ಕುಮಾರ್ ಭಾಷಣ
ನುಡಿದಂತೆ ನಡೆದವನ ಮುಡಿಗೆನ್ನ ನಮನ. ಈ ಮಾತು ಪ್ರಧಾನಿಗೆ ಅನ್ವಯ. ಕಾಶ್ಮೀರಕ್ಕೆ ಸ್ವಾತಂತ್ರ್ಯ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ತ್ರಿಬಲ್ ತಲಾಕ್ ರದ್ದು, CAA ಕಾನೂನು , ಇಪತ್ತು ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಇದೆಲ್ಲ ಮೋದಿ ಸರ್ಕಾರದ ಸಾಧನೆ.
ಕೊರೋನಾದಲ್ಲಿ ಇಟಲಿ ಅಮೇರಿಕಾ ದೇಶಗಳೇ ತತ್ತರಿಸಿದಾಗ ಭಾರತ ಹೋರಾಟ ಮಾಡಿದೆ. ರಾಜ್ಯದಲ್ಲಿ ಕೊರೋನಾ ತಡೆಗಟ್ಟಯವಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಒಳ್ಳೆಯ ಕಾರ್ಯ ಮಾಡಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದರು.