* ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಭಾರತೀಯ ಮುಸ್ಲಿಮರು* ಶಾಂತಿ ಸಹಬಾಳ್ವೆಗೆ ನಮ್ಮ ಮೊದಲ ಆದ್ಯತೆ* ಶಾಸಕ ಜಮೀರ್ ಅಹಮದ್ ಖಾನ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿಕೆ

ಬೆಂಗಳೂರು, (ಏ.11): ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಭಾರತೀಯ ಮುಸ್ಲಿಮರು. ಶಾಂತಿ ಸಹಬಾಳ್ವೆಗೆ ನಮ್ಮ ಮೊದಲ ಆದ್ಯತೆ. ನಾವು ಬಹಳ ಗೌರವದಿಂದ ಭಾರತದಲ್ಲಿ ಬಾಳುತ್ತಿದ್ದೇವೆ. ಮುಂದೆಯೂ ಕೂಡ ನಾವು ಗೌರವಯುತವಾಗಿ ಇರುತ್ತೇವೆ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ (Zameer Ahmed Khan) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಾವಿನ ಮನೆಯಲ್ಲಿಯೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ದೂರಿದ್ದಾರೆ. ಈ ಹಿಂದಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು ನಡೆಯುತ್ತಿದ್ದವು. ನಾನು ಚಾಮರಾಜಪೇಟೆ ಕ್ಷೇತ್ರದ ಶಾಸಕನಾಗುವ ಮುಂಚೆಯೂ ಗಲಭೆ ನಡೆಯುತ್ತಿತ್ತು. ನಾನು ಶಾಸಕನಾದ ನಂತರ ಕ್ಷೇತ್ರದಲ್ಲಿ ಶಾಂತಿ ನೆಲೆಸಿದೆ. ಇಲ್ಲಿ ಗಲಭೆ ಸೃಷ್ಟಿಸಲೇಬೇಕೆಂದು ಬಿಜೆಪಿ ಮುಖಂಡರು ಯತ್ನಿಸುತ್ತಿದ್ದಾರೆ. ಈಗ ಚಂದ್ರು ಕೊಲೆಯ ವಿಚಾರದಲ್ಲಿಯೂ ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಜೆಜೆ ನಗರ ಕೊಲೆ ಪ್ರಕರಣ: ಚಂದ್ರು ಕುಟುಂಬಕ್ಕೆ ಜಮೀರ್‌ ಅಹಮದ್‌ 2 ಲಕ್ಷ ಪರಿಹಾರ

ನನ್ನ ಕ್ಷೇತ್ರದಲ್ಲಿ ಶಾಂತಿ ಕದಡಲು ನಾನು ಅವಕಾಶ ಮಾಡಿಕೊಡುವುದಿಲ್ಲ. ಮುಂದಿನ ದಿನಗಳಲ್ಲಿ ಚಾಮರಾಜಪೇಟೆಯು ಶಾಂತಿಯ ನೆಲೆವೀಡು ಆಗಲಿದೆ. ಚಂದ್ರು ಸಾವಿನ ನಂತರ ತನಿಖೆ ನಡೆಸಿದ ನಗರ ಪೊಲೀಸ್ ಆಯುಕ್ತರು ಇದೊಂದು ಕೊಲೆ ಎಂದು ಕಮಿಷನರ್ ತಿಳಿಸಿದ್ದಾರೆ. ಆದರೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರ ಈ ತಂತ್ರಕ್ಕೆ ಯಾರು ಮತದಾರರು ನಮ್ಮ ಕ್ಷೇತ್ರದವರು ಮಣಿಯಬಾರದು. ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು ಎಂದರು.

ಬೆಂಗಳೂರಿನ ಜೆ.ಜೆ.ನಗರದಲ್ಲಿ ಯುವಕ ಚಂದ್ರು ಹತ್ಯೆ ಪ್ರಕರಣದ ಆರೋಪಿಗಳಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆರೋಪಿ ಚಿಕ್ಕವಯಸ್ಸಿನಲ್ಲೇ ಚಾಕು ಇಟ್ಟುಕೊಂಡು ಓಡಾಡುವುದನ್ನು ರೂಢಿಸಿಕೊಂಡಿದ್ದ. ಯಾರನ್ನೇ ಆದರೂ ಕೊಲೆ ಮಾಡುವುದು ತಪ್ಪು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ಬಿಜೆಪಿಯವರು ಶವ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ತೊಡೆಗೆ ಚಾಕು ಹಾಕಿದ್ದರಿಂದ ನರ ತುಂಡಾಗಿದೆ. ರಕ್ತಸ್ರಾವ ನಿಲ್ಲದ ಕಾರಣ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೊಲೆ ನಡೆದು ಎರಡು ದಿನ ಆದ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಶವ ಇರುವಾಗ ಯಾರು ಬಂದಿರಲಿಲ್ಲ. ಬೇರೆ ದಿನ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾವುದಾದ್ರು ಗಲಾಟೆಯಲ್ಲಿ ರಾಜಕಾರಣಿ ಸತ್ತಿದ್ದಾರಾ? ಜನರಿಂದ ಆಯ್ಕೆಯಾದ ಸರ್ಕಾರದಲ್ಲಿ, ಗಲಭೆ ಇಲ್ಲ. ತಮಿಳುನಾಡಿನಲ್ಲಿ ಹಿಜಾಬ್ ಗಲಾಟೆ ಇಲ್ಲ. ಆದರೆ ಇಲ್ಲಿ ರಾಜಕೀಯ ಲಾಭಗೊಸ್ಕರ ಗಲಭೆ ಸೃಷ್ಠಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.