Asianet Suvarna News Asianet Suvarna News

ನೀಟ್ ಬಗ್ಗೆ ಅಧ್ಯಯನ ಬೇಕೇ? ಬೇಡವೇ ಚರ್ಚೆಯಾಗಲಿ: ಸಚಿವ ದಿನೇಶ್ ಗುಂಡೂರಾವ್

ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರ ನೋಡಿದರೆ‌ ರಾಜ್ಯಕ್ಕೆ ನೀಟ್ ಬೇಕೇ, ಬೇಡವೇ ಎಂಬ ವ್ಯಾಪಕ ಚರ್ಚೆಯಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Want to study for NEET Let there be discussion or not Says Minister Dinesh Gundu Rao gvd
Author
First Published Jun 28, 2024, 5:36 PM IST

ಬಾಗಲಕೋಟೆ (ಜೂ.28): ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರ ನೋಡಿದರೆ‌ ರಾಜ್ಯಕ್ಕೆ ನೀಟ್ ಬೇಕೇ, ಬೇಡವೇ ಎಂಬ ವ್ಯಾಪಕ ಚರ್ಚೆಯಾಗಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನೀಟ್‌ಲ್ಲಿ ಆಗಿರೋದು ದುರಾದೃಷ್ಟಕರ ಮತ್ತು ಅತ್ಯಂತ ನೋವಿನ ಸಂಗತಿ. ಮಕ್ಕಳ ಭವಿಷ್ಯ ಪ್ರಶ್ನೆ, ಇದು ಹೊರೆಗೆ ಬಂದಿದೆ, ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಜನರು ಓದಿ ಕಷ್ಟಪಟ್ಟು ನೀಟ್ ಪರೀಕ್ಷೆ ಬರೆದಿದ್ದಾರೆ. ಪಾಪ ಅವರ ಭವಿಷ್ಯ ಏನಾಗಬೇಕು. ಈ ತರ ಅನಾಹುತ ಆದ್ರೇ ಅವ್ರ ಭವಿಷ್ಯ ಏನಾಗ್ಬೇಕು. ನೀಟ್ ಬಗ್ಗೆ ಕೂಲಂಕುಶವಾಗಿ ಚರ್ಚೆ ಆಗಬೇಕು ಎಂದರು.

ಇದರಿಂದ ನಮ್ಮ ಕರ್ನಾಟಕದ  ಮಕ್ಕಳಿಗೆ ಅನುಕೂಲ ಆಗ್ತಿದೆಯಾ  ಇಲ್ವಾ.? ನೀಟ್‌ನಿಂದ ಏನ ಪ್ರಯೋಜನ ಇದೆ. ಗುಜರಾತ್, ಬಿಹಾರ, ಉತ್ತರ ಪ್ರದೇಶ ರಿಂಗ್ ಮಾಡಿ ಅವರಿಗೆನೇ ಅಡ್ಮಿಶನ್ ಆದ್ರೆ, ನಮ್ಮ ಮಕ್ಕಳ ಎಲ್ಲಿ  ಹೋಗ್ಬೇಕು ಅವರ ಭವಿಷ್ಯ ಏನು?. ನನ್ನ ವೈಯಕ್ತಿಕ ಅಭಿಪ್ರಾಯ ನೀಟ್ ಬೇಕಾ? ಬೇಡ್ವಾ? ಅಂತ. ನೀಟ್ ಬಗ್ಗೆ ಅಧ್ಯಯನ ಮಾಡಬೇಕು. ಇದು ಬೇಕಾ? ಬೇಡ್ವಾ? ಅಂತ. ನಮ್ಮ ರಾಜ್ಯದ ಮಕ್ಕಳ ಹಿತ ಕಾಪಾಡುವ ವ್ಯವಸ್ಥೆ, ಇದೆಯೋ ಇಲ್ವಾ ಅಂತ. ಆ ಬಗ್ಗೆ ಗಂಭೀರ ಅಧ್ಯಯನ ಚರ್ಚೆ ಆಗ್ಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿದ ಅವರು, ಈಗಷ್ಟೇ ರಿಸಲ್ಟ್ ಬಂದಿದೆ. ಮತ್ತೆ ಉಪ ಚುನಾವಣೆಗಳು ಬರ್ತಿದೆ. ಮೂರು ಕಡೆಗಳಲ್ಲಿ ಉಪ ಚುನಾವಣೆ ಆಗುತ್ತೆ, ಆಮೇಲೆ ನೋಡೋಣ ಏನ್ ಮಾಡೋದಂತ.  ಕಾಂಗ್ರೆಸ್ ಶಾಸಕರೇ ಚರ್ಚೆ ತೇಲಿ ಬಿಟ್ಟಿರುವ ವಿಚಾರ. ನಮ್ಮ ವ್ಯವಸ್ಥೆಯಲ್ಲಿ ಏನೊ ಒಂದು ಕೇಳ್ತಾರೆ, ಅದೇ ದೊಡ್ಡ ಇಶ್ಯೂ ಆಗಿ ಹೋಗುತ್ತೆ. ಆದ್ದರಿಂದ ಇದು ಅಷ್ಟು ಸೀರಿಯಸ್ ಇಶ್ಯೂ ಅಲ್ಲ. ಚರ್ಚೆ ಆಗಿ ಆಗಿ ಈ ತರ ಇಶ್ಯೂ ಆಗ್ತಿದೆ ಅಷ್ಟೇ ಎಂದು ತಿಳಿಸಿದರು. 

ದರ್ಶನ್​ ಅಭಿಮಾನಿಗಳಿಂದ ಬ್ಯಾಡ್​ ಕಮೆಂಟ್ಸ್ ಟಾರ್ಚರ್: ಗುರು ನಾನ್‌ ಇನ್ನೂ ಚಿಕ್ಕವಳು ಎಂದ ಸೋನು ಗೌಡ!

ಮುಖ್ಯಮಂತ್ರಿ ಇರುವಾಗ ಮತ್ತೆ ಆ ಹುದ್ದೆ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹುದ್ದೆ ಕುರಿತು ಪಕ್ಷದ ನಾಯಕರು ಸಾರ್ವಜನಿಕ ಚರ್ಚೆ ಮಾಡುತ್ತಿರುವುದು ಸರಿಯಲ್ಲ ಎಂದರು. ಪಕ್ಷದ ವೇದಿಕೆಯಲ್ಲಿ ಚರ್ಚೆಯಾಗಬೇಕಾದ ವಿಷಯಗಳ ಬಗ್ಗೆ ಕೆಲ ಸಚಿವರು ವಿನಾಕಾರಣ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದು ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios