ಒಡಿಶಾ ರೈಲು ದುರಂತ: ಸುರಕ್ಷಿತವಾಗಿ ಬೆಂಗ್ಳೂರಿಗೆ ಬಂದಿಳಿದ ರಾಜ್ಯದ ವಾಲಿಬಾಲ್ ಆಟಗಾರರು
ಬೆಂಗಳೂರಿನ ವಾಲಿಬಾಲ್ ಆಟಗಾರರು ಕೋಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದರು. ಆಟಗಾರರು ಹಾಗೂ ಕೋಚ್‌ಗಳು ರಾಜ್ಯಕ್ಕೆ ಬರಲು ರೈಲು ಇಲ್ಲದೆ ಪರದಾಡುತ್ತಿದ್ದರು. ನಿನ್ನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಿದ್ದರು. ಈ ವೇಳೆ ಫ್ಲೈಟ್ ಟಿಕೆಟ್ ಅರೆಂಜ್ ಮಾಡಿದ್ದ ಸಚಿವ ಸಂತೋಷ್ ಲಾಡ್.
ಬೆಂಗಳೂರು(ಜೂ.04): ಒಡಿಶಾದಲ್ಲಿ ಸರಣಿ ರೈಲು ಅಪಘಾತವಾದ ಹಿನ್ನಲೆಯಲ್ಲಿ ವಾಲಿಬಾಲ್ ಟೂರ್ನಿಗೆ ಹೋಗಿದ್ದವರು ಇಂದು(ಭಾನುವಾರ) ಬೆಂಗಳೂರಿಗೆ ವಾಪಸ್ ಬಂದಿಳಿದಿದ್ದಾರೆ. ಬೆಳಗ್ಗೆ 6:50 ರ ಇಂಡಿಗೋ ಫ್ಲೈಟ್‌ನಲ್ಲಿ ಆಟಗಾರರು ಬಂದಿಳಿದಿದ್ದಾರೆ. ಯುವತಿಯರು ಹಾಗೂ ಯುವಕರು ಒಟ್ಟು 32 ಆಟಗಾರರು ಆಗಮಿಸಿದ್ದಾರೆ.
ಬೆಂಗಳೂರಿನ ವಾಲಿಬಾಲ್ ಆಟಗಾರರು ಕೋಲ್ಕತ್ತಾದ ಹೌರಾದಲ್ಲಿ ಸಿಲುಕಿದ್ದರು. ಆಟಗಾರರು ಹಾಗೂ ಕೋಚ್‌ಗಳು ರಾಜ್ಯಕ್ಕೆ ಬರಲು ರೈಲು ಇಲ್ಲದೆ ಪರದಾಡುತ್ತಿದ್ದರು. ನಿನ್ನೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಮಾಡಿದ್ದರು. ಈ ವೇಳೆ ಸಚಿವ ಸಂತೋಷ್ ಲಾಡ್ ಅವರು ಫ್ಲೈಟ್ ಟಿಕೆಟ್ ಅರೆಂಜ್ ಮಾಡಿದ್ದರು. ಹೀಗಾಗಿ ಇಂದು ಬೆ. 4:15ಕ್ಕೆ ಕೋಲ್ಕತ್ತಾ ವಿಮಾನ ನಿಲ್ದಾಣದಿಂದ ನಿರ್ಗಮಿಸಿ ಬೆ 6:50ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಒಡಿಶಾ ತ್ರಿವಳಿ ರೈಲು ದುರಂತ: ಆಸ್ಪತ್ರೆಯಲ್ಲಿ ಹೆಣಗಳ ರಾಶಿ: ತಮ್ಮವರ ಪತ್ತೆಗೆ ಬಂಧುಗಳ ಪರದಾಟ
ಕಳಸದ ಶಿಖರ್ಜಿ ಯಾತ್ರಾರ್ಥಿಗಳು ಸುರಕ್ಷಿತ
ರೈಲು ಅಪಘಾತವಾದ ರೈಲಿನಲ್ಲಿ ಕಳಸದ ಶಿಖರ್ಜಿ ಯಾತ್ರಾರ್ಥಿಗಳು ಸುರಕ್ಷಿತರಾಗಿದ್ದಾರೆ. ಈ ಬಗ್ಗೆ ಸ್ವತಃ ಅವರೇ ವಿಡಿಯೋ ಮಾಡಿ ಮಾಹಿತಿ ನೀಡಿದ್ದು, ನಾವು ಸೇಫಾಗಿದ್ದೇವೆ. ಯಾರಿಗೂ ತೊಂದರೆಯಿಲ್ಲ ಎಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ.
ಸುರಕ್ಷಿತವಾಗಿ ಜಾರ್ಖಂಡ್‌ನ ಗಿರಡಿ ಜಿಲ್ಲೆಯ ಸಮ್ಮೇದ ಶಿಖರ್ಜಿಗೆ ಯಾತ್ರಾರ್ಥಿಗಳು ತಲುಪಿದ್ದಾರೆ. ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯ ಸಮ್ಮೇದ ಶಿಖರ್ಜಿ ಜೈನರ ಪರಮೋಚ್ಛ ತೀರ್ಥಕ್ಷೇತ್ರವಾಗಿದೆ. ಈ ಯಾತ್ರೆಗೆ ಕಳಸದ 110 ಜನರು ತೆರಳುತ್ತಿದ್ದರು. ಇದೇ ರೈಲು ಒಡಿಸಾ ಬಳಿ ದುರಂತಕ್ಕಿಡಾಗಿತ್ತು. ಇದರಲ್ಲಿ ಬರೋಬ್ಬರಿ 288 ಜನರು ಸಾವನ್ನಪಿದ್ದು, 1175 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ.