Asianet Suvarna News Asianet Suvarna News

ವೀರಶೈವ ಲಿಂಗಾಯತರು ಆಯ್ತು, ಈಗ ಒಕ್ಕಲಿಗರಿಗೆ ಗಿಫ್ಟ್‌ ಕೊಟ್ಟ ಸರ್ಕಾರ!

ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮದಿಂದ ಉದ್ಯೋಗ, ಗಂಗಾ ಕಲ್ಯಾಣ, ಶೈಕ್ಷಣಿಕ, ವಿದೇಶದಲ್ಲಿ ಉನ್ನತ ವ್ಯಾಸಂಗ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

Vokkaliga Development Corporation Application invitation for students and employment loan sat
Author
First Published Oct 4, 2023, 7:14 PM IST

ಬೆಂಗಳೂರು (ಅ.04): ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2023-24 ನೇ ಸಾಲಿಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ (Fresh Students, Renewal), ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ (Fresh Students), ಸ್ವಾತಂತ್ರ್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ, ಸ್ವಾವಲಂಬಿ ಸಾರಥಿ ಯೋಜನೆ ಹಾಗೂ  ಸ್ವಯಂ ಉದ್ಯೋಗ ಸಾಲ ಯೋಜನೆಗಳ ಸಾಲ ಸೌಲಭ್ಯ ಪಡೆಯಲು ಕರ್ನಾಟಕ ಒಕ್ಕಲಿಗ ಸಮುದಾಯಕ್ಕೆ ಸೇರಿದ ಜಾತಿ ಹಾಗೂ ಉಪಜಾತಿಯ ಅಭ್ಯರ್ಥಿಗಳು ಆನ್ ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಯಾವುದಾದರೂ  ಒಂದು ಯೋಜನೆಯಲ್ಲಿ  ಸೌಲಭ್ಯ  ಪಡೆಯಲು  ಅರ್ಹರಿರುತ್ತಾರೆ.  ಆಸಕ್ತ ಅರ್ಜಿದಾರರು ಸೇವಾಸಿಂಧು ಪೋರ್ಟಲ್ (http://sevasindhu.karnataka.gov.in)ನಲ್ಲಿ, ಗ್ರಾಮಒನ್ (http://gramaone.karnataka.gov.in), ಬೆಂಗಳೂರು ಒನ್ (https://www.karnatakaone.gov.in) ಹಾಗೂ ಕರ್ನಾಟಕ ಒನ್ (https://k1app.karnataka.gov.in)ಗಳ ಮೂಲಕ ಆನ್‌ಲೈನ್ ನಲ್ಲಿ ಮತ್ತು ಸ್ವಾತಂತ್ಯ್ರ ಅಮೃತ ಮುನ್ನಡೆ ಯೋಜನೆಗೆ ಅರ್ಜಿಯನ್ನು ಕೌಶಲ್ಯ ಕರ್ನಾಟಕ ತಂತ್ರಾಶದ http://www.kaushalkar.com ನಲ್ಲಿ ಅರ್ಜಿಯನ್ನು ಅಕ್ಟೋಬರ್ 30 ರೊಳಗೆ ಸಲ್ಲಿಸಬೇಕು. ಈ ಯೋಜನೆಗಳ ಪೈಕಿ ಶೈಕ್ಷಣಿಕ ಸಾಲ ಯೋಜನೆಗೆ ಕೊನೆಯ ದಿನಾಂಕ ಇರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ,  ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ  ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ: 080-29904350 ಅಥವಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು ಉತ್ತರ ಜಿಲ್ಲಾ ಕಚೇರ ದೂರವಾಣಿ  ಸಂಖ್ಯೆ: 080-23539600/ 23539601 ಮೂಲಕ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆಯ  ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ಧಿ ನಿಗಮ (ನಿ)ದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಶೈವ ಲಿಂಗಾಯತರಿಗೆ ಬಂಪರ್‌ ಗಿಫ್ಟ್‌: ಶೈಕ್ಷಣಿಕ, ಸ್ವಯಂ ಉದ್ಯೋಗ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ

ವೀರಶೈವ ಲಿಂಗಾಯತರಿಗೂ ಅರ್ಜಿ ಆಹ್ವಾನ: ಇನ್ನು ಕಳೆದ ಎರಡು ದಿನಗಳ ಹಿಂದೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ  ವತಿಯಿಂದ 2023-24ನೇ ಸಾಲಿಗೆ  “ಶೈಕ್ಷಣಿಕ  ಸಾಲ ಯೋಜನೆ, ವಿದೇಶ ವಿದ್ಯಾವಿಕಸಾಸ ಯೋಜನೆ, ಜೀವಜಲ  ಯೋಜನೆ, ಕಾಯಕಕಿರಣ ಯೋಜನೆ, ಭೋಜನಾಲಯ (ಖಾನಾವಳಿ) ಕೇಂದ್ರ, ವಿಭೂತಿ ನಿರ್ಮಾಣ ಘಟಕ, ಸ್ವಾವಲಂಭಿ ಸಾರಥಿ (ವಾಣಿಜ್ಯ ಬ್ಯಾಂಕ್ ಗಳ ಸಹಯೋಗದೊಂದಿಗೆ) ಸ್ವಯಂ ಉದ್ಯೋಗ ಸಾಲ ಯೋಜನೆ (ವಾಣಿಜ್ಯ ಬ್ಯಾಂಕ್ ಗಳ ಸಹಯೋಗದೊಂದಿಗೆ)  ಯೋಜನೆಗಳಿಗೆ ಸಾಲ ಸೌಲಭ್ಯ ಪಡೆಯಲು  ಅರ್ಹ  ವೀರಶೈವ -ಲಿಂಗಾಯತ  ಜಾತಿಗೆ ಸೇರಿದ ಅಭ್ಯರ್ಥಿಗಳಿಂದ ಆನ್ ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೂಡ ಅ.30 ಕೊನೆಯ ದಿನವಾಗಿದೆ.

ನಮ್ಮಲ್ಲಿರೋ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌: ಎಚ್ಚರಿಕೆ ರವಾನಿಸಿದ ಯತ್ನಾಳ್

Follow Us:
Download App:
  • android
  • ios