ನಿಮ್ಮ ಹತ್ರ ಖಡ್ಗ ಚಾಕು ಚೂರಿ ಇರಬಹುದು. ನಮ್ಮಲ್ಲಿ ಇರೊ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌. ನಾವು ಸಜ್ಜಾಗಬೇಕಾಗತ್ತದೆ ಎಂದು ಶಾಸಕ ಯತ್ನಾಳ್‌ ಎಚ್ಚರಿಕೆ ರವಾನಿಸಿದ್ದಾರೆ.

ಬೆಂಗಳೂರು (ಅ.04): ನಿಮ್ಮ ಹತ್ರ ಖಡ್ಗ ಚಾಕು ಚೂರಿ ಇರಬಹುದು. ನಮ್ಮನೆಗೆ ಬಂದು ನಮ್ಮನ್ನೇ ಹೊಡೆದ್ರೆ ಸುಮ್ಮನಿರಬೇಕಾ? ನಮ್ಮಲ್ಲಿ ಇರೊ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌. ನಾವು ಸಜ್ಜಾಗಬೇಕಾಗತ್ತದೆ. ಹಿಂದು ಸಮಾಜ ಉಳಿಸಿಕೊಳ್ಳಲು ನಮ್ಮಲ್ಲೂ ಕ್ಷಾತ್ರ ಗುಣ ಇರೋರು ಇದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಎಚ್ಚರಿಕೆ ರವಾನಿಸಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹಾಗೂ ಕೋಲಾರದಲ್ಲಿ ತಲ್ವಾರ್‌ ತೋರಿಸುತ್ತಾರೆ. ಆದರೆ, ನಮ್ಮಲ್ಲೂ ಶಿವಾಜಿ ಚೆನ್ನಮ್ಮ ಮದಕರಿ ನಾಯಕ ಅಹಲ್ಯ ಹೋಳ್ಕರ್ ಇದ್ದಾರೆ ಎನ್ನೋದು ನೆನಪಿಡಿ. ನಮ್ಮಲ್ಲಿ ಇರೊ ಚಾಕು ಚೂರಿ ಉಳ್ಳಾಗಡ್ಡಿ ಕಟ್ ಮಾಡೋಕೆ ಇರೋದಲ್ಲ‌, ನಾವು ಸಜ್ಜಾಗಬೇಕಾಗತ್ತದೆ. ಹಿಂದು ಸಮಾಜ ಉಳಿಸಿಕೊಳ್ಳಲು ನಮ್ಮಲ್ಲೂ ಕ್ಷಾತ್ರ ಗುಣ ಇರೋರು ಇದ್ದಾರೆ. ನಿಮ್ಮ ಸರ್ಕಾರ ಕೇವಲ ಮುಸ್ಲಿಂರಿಂದ ಅಧಿಕಾರಕ್ಕೆ ಬಂದಿದೆಯಾ? ಕಾಶ್ಮೀರ ಕೇರಳ ಏನಾಗಿದೆ? ಅದೇ ರೀತಿ ಕರ್ನಾಟಕ ಮಾಡೋಕೆ ಸಿದ್ದರಾಮಯ್ಯ ಕುಮ್ಮಕ್ಕು ನೀಡ್ತಾ ಇದ್ದಾರೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್‌

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಪತ್ತೆ ಆಗಿದ್ದಾರೆ. ಸನಾತನ ವಿಷಯ ಬಂದರೆ ಅಪ್ಪ ಮಗ ಸೇರಿ ಹೇಳಿಕೆ ಕೊಡ್ತಾರೆ. ಈಗ ಎಲ್ಲಿ ನಾಪತ್ತೆ ಆಗಿದ್ದಾರೆ. ಕೋಲಾರದಲ್ಲಿ ಸಂಸದನ ಮೇಲೆ ಪೊಲೀಸ್‌ ವರಿಷ್ಠಾಧಿಕಾರಿ ಹೇಗೆ ನಡ್ಕೊಂಡ ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಅಂದೇ ಹೇಳಿದ್ದೆ ರಾಜ್ಯದಲ್ಲಿ ತಾಲಿಬಾನ್ ಸರಕಾರ ಬಂದಿದೆ ಎಂದು ಈಗ ಅದೇ ರೀತಿ ನಡೆಯುತ್ತಿದೆ. ಅವರಿಗೆ ಭಯದ ವಾತಾವರಣ ಇಲ್ಲ. ಕುಕ್ಕರ್ ಬಾಂಬ್ ಹಾಕಿದರವರು ಇನೊಸೆಂಟ್ ಬ್ರದರ್ಸ್ ಎನ್ನುತ್ತಾರೆ. ಇವರಿಗೆ ನಾಚಿಕೆ ಆಗಲ್ವಾ? ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಕಲ್ಲು ಹೊಡೆದರೂ ಪೊಲೀಸರು ಸುಮ್ಮನೆ ನಿಂತಿದ್ದಾರೆ: ಕೋಲಾರದಲ್ಲಿ ಅನುಮತಿ ಇಲ್ಲದ ಖಡ್ಗ ಪ್ರತಿಷ್ಠಾಪನೆ ಮಾಡಿದ್ದಾರೆ. ಭಾರತದ ನಕ್ಷೆಗೆ ಹಸಿರು ಬಣ್ಣ ಹಾಕಿದ್ದಾರೆ. ಇದನ್ನೆಲ್ಲಾ ಹಾಕೋಕೆ ಯಾಕೆ ಬಿಟ್ರಿ. ಗೃಹ ಮಂತ್ರಿ ಮೇಲೆ ಗೌರವ ಇತ್ತು. ಆದರೆ, ದೇಶಕ್ಕೆ ಅವಮಾನ ಆಗುವ ಘಟನೆ ನಡೆದರೂ, ಧರ್ಮಗಳ ನಡುವೆ ಕಿಚ್ಚು ಹೊತ್ತಿಸುವಘಟನೆ ನಡೆದರೂ ಇದೊಂದು ಕ್ಷುಲಕ ಘಟನೆ ಎನ್ನುತ್ತಾರೆ. ಪೊಲೀಸರಿಗೆ ಹೊಡೆಯೋಕೆ ಬಂದರೆ ಪೊಲೀಸ್ ನೈತಿಕತೆ ಎಲ್ಲಿ ಇರುತ್ತದೆ. ಕಲ್ಲು ಹೊಡೆದರು, ಸುಮ್ನೆ ನಿಂತಿದ್ದರು. ಇನ್ನು ಈ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾರಣವಾದವರ ಕೇಸ್ ಕೈ ಬಿಡಿ ಎಂದು ಪತ್ರ ಬರೆಯುತ್ತಾರೆ. ಅದೆಂತಾ ಕೇಸ್ ಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸರ್ಕಾರದಲ್ಲಿ ಹಿಂದೂಗಳಿಗೆ ಭಯದ ವಾತಾವರಣ: ಶಾಸಕ ಬಸನಗೌಡ ಯತ್ನಾಳ್‌

ಬಿಜೆಪಿ ಅವಧಿಯಲ್ಲಿ 385 ಕ್ರಿಮಿನಲ್‌ ಕೇಸ್‌ ರದ್ದು, 2,361 ರೌಡಿಶೀಟರ್‌ಗಳ ಬಿಡುಗಡೆ ಮಾಡಲಾಗಿದೆ: ಬೆಂಗಳೂರು (ಅ.04): ಬಿಜೆಪಿ ಅಧಿಕಾರ ಅವಧಿಯಲ್ಲಿ ಏನೇನು ಮಾಡಿದ್ರು ಅದೆಲ್ಲ ಜನಕ್ಕೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಬಿಜೆಪಿ ಸರ್ಕಾರ 2019ರಲ್ಲಿ ರಾಜ್ಯದ ಹಿಂಸಾಚಾರದ ಮತ್ತೊಂದು ಪ್ರಕರಣಗಳಲ್ಲಿ 385 ಕ್ರಿಮಿನಲ್ ಕೇಸ್ ಗಳನ್ನು ಹಿಂದೆ ಪಡೆದಿದ್ದಾರೆ. 2361 ರೌಡಿಶೀಟರ್ ಗಳನ್ನು ಕೈಬಿಟ್ಟಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾಹಿತಿಯನ್ನು ಬಹಿರಂಗ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಏನು ಕೆಲಸ ಇಲ್ಲ. ತಮ್ಮ ಮನೆ ಹುಳುಕು, ಅವರ ಮನೆ ದೋಸೆ ತೂತು ಇವೆಲ್ಲರಿಗೆ ಕಾಣಿಸುತ್ತಿಲ್ಲ. ಅವರ ಅಧಿಕಾರ ಅವಧಿಯಲ್ಲಿ ಏನೇನು ಮಾಡಿದ್ರು ಅದೆಲ್ಲ ಜನಕ್ಕೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಬಿಜೆಪಿ ಅವರನ್ನ ಜನ ಎಲ್ಲಿ ಕೂರಿಸಬೇಕು ಕೂರಿಸಿದ್ದಾರೆ. ಇವರು ನನಗೆ ಹೇಳುತ್ತಾರಲ್ಲ, ಬಿಜೆಪಿ ಸರ್ಕಾರ 2019ರಲ್ಲಿ ಇದೇ ಹಿಂಸಾಚಾರ ಮತ್ತೊಂದು ಪ್ರಕರಣದಲ್ಲಿ 385 ಕ್ರಿಮಿನಲ್ ಕೇಸ್ ಗಳನ್ನು ಹಿಂದೆ ಪಡೆದಿದ್ದಾರೆ. 2361 ರೌಡಿಶೀಟರ್ ಗಳನ್ನು ಕೈಬಿಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.