ನಾನು ಸಂವಿಧಾನ ಬಗ್ಗೆ ಮಾತಾಡಿಲ್ಲ, ಸಿಎಂ ತಿಳಿದು ಮಾತನಾಡಬೇಕಿತ್ತು: ಪೇಜಾವರ ಶ್ರೀ
ನಮ್ಮ ದೇಶದ ಜನಗಣತಿ ಪ್ರಕಾರ ಇದು ಹಿಂದುಸ್ಥಾನ. ಅದನ್ನು ಭಾರತ, ಇಂಡಿಯಾ ಎಂದು ಹೇಳಿ. ಆದರೆ, ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಹಿಂದುಗಳ ಭಾವನೆಗೂ ಬೆಲೆ ಕೊಡುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ನಾವು ಹೇಳಿದ್ದು ಹೌದು. ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ಯಾವತ್ತೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ ಶ್ರೀಗಳು
ಉಡುಪಿ(ಡಿ.03): ಸಂವಿಧಾನವನ್ನು ಬದಲಿಸಬೇಕು ಎನ್ನುವ ಮಾತನ್ನು ನಾನು ಆಡಿಯೇ ಇಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯವರು ಈ ಬಗ್ಗೆ ತಿಳಿದು ಮಾತನಾಡಬೇಕಾಗಿತ್ತು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಂತ ಸಮಾವೇಶ ನಡೆದಿತ್ತು. ಅಲ್ಲಿ ತಾವಾಡಿದ ಭಾಷಣದಲ್ಲಾಗಲಿ ಅಥವಾ ರಾಜ್ಯಪಾಲರಿಗೆ ಸಲ್ಲಿಸಲಾದ ಸಮಾವೇಶದ ನಿರ್ಣಯಗಳ ಲಿಖಿತ ಪ್ರತಿಯಲ್ಲಾಗಲಿ ಸಂವಿಧಾನ ಬದಲಾಯಿಸುವ ಕುರಿತು ಯಾವುದೇ ಮಾತಿನ ಉಲ್ಲೇಖ ಇಲ್ಲ. ಆದರೂ ಕೆಲವು ಜನರು ದಂಗೆ ಎದ್ದ ರೀತಿ ನಾನು ಆಡದ ಮಾತಿನ ಬಗ್ಗೆ ಸುಳ್ಳು ಆರೋಪ ಹೊರಿಸಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ವಿರುದ್ಧ ಪ್ರತಿಭಟಿಸುವ, ಖಂಡಿಸುವ ಕೆಲಸವಾಗುತ್ತಿದೆ. ಮುಖ್ಯ ಮಂತ್ರಿಯವರ ಹೇಳಿಕೆಯಿಂದ ಇಷ್ಟೆಲ್ಲ ಆಗಿದೆ, ಅವರು ಪರಿಶೀಲಿಸಿ ಮಾತನಾಡಬೇಕಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿಗಣತಿ ವರದಿಯಿಂದ ವೈಷಮ್ಯ ಸೃಷ್ಟಿ ಸಾಧ್ಯತೆ: ಪೇಜಾವರ ಶ್ರೀ
ನಮ್ಮ ದೇಶದ ಜನಗಣತಿ ಪ್ರಕಾರ ಇದು ಹಿಂದುಸ್ಥಾನ. ಅದನ್ನು ಭಾರತ, ಇಂಡಿಯಾ ಎಂದು ಹೇಳಿ. ಆದರೆ, ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಇಲ್ಲಿ ಹಿಂದುಗಳ ಭಾವನೆಗೂ ಬೆಲೆ ಕೊಡುವ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ನಾವು ಹೇಳಿದ್ದು ಹೌದು. ಸಂವಿಧಾನ ಬದಲಿಸಿ ಅಥವಾ ತಿದ್ದುಪಡಿ ಮಾಡಿ ಎಂದು ಯಾವತ್ತೂ ಹೇಳಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದರು.
ಮಾತಾಡುವ ಹಕ್ಕಿರೋದು ರಾಜಕಾರಣಿಗಳಿಗೆ ಮಾತ್ರವಾ?; 'ಪುಡಿ ರಾಜಕಾರಣಿ' ಎಂದ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀ ವಾಗ್ದಾಳಿ
ಮಂಗಳೂರು: ಜಾತಿ ವ್ಯವಸ್ಥೆ ಅನಿಷ್ಟಗಳಿಗೆ ಮೂಲ ಎನ್ನುವವರೇ ಅದನ್ನು ಪೋಷಿಸುತ್ತಿದ್ದಾರೆ. ಒಂದೆಡೆ ನಾವು ಜಾತ್ಯಾತೀತರು ಎನ್ನುತ್ತಾರೆ, ಇನ್ನೊಂದೆಡೆ ಎಲ್ಲ ವಲಯದಲ್ಲೂ ಅದನ್ನು ಪೋಷಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಎಂಎಲ್‌ಸಿ ಬಿಕೆ ಹರಿಪ್ರಸಾದ್ ವಿರುದ್ಧ ಪೇಜಾವರಶ್ರೀಗಳು ವಾಗ್ದಾಳಿ ನಡೆಸಿದ್ದರು.
ಜಾತಿ ಗಣತಿ ವಿಚಾರದಲ್ಲಿ ಸ್ವಾಮೀಜಿ ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ' ಎಂದಿದ್ದ ಬಿ.ಕೆ.ಹರಿ ಪ್ರಸಾದ್ ಹೇಳಿಕೆ ಪ್ರಸ್ತಾಪಿಸಿ ಇಂದು ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆ ಉದ್ದೇಶಿಸಿ ಮಾತನಾಡಿದ ಶ್ರೀಗಳು ಬಿಕೆ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ್ದರು.
ರಾಮನ ಗುಣಗಳು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದ್ರೆ ದೇಶ ರಾಮರಾಜ್ಯ: ಪೇಜಾವರಶ್ರೀ
ನಾವೇನು ಯಾರನ್ನೂ ಕರೆದು ಹೀಗೆ ಮಾಡ್ತಾರೆ ಅಂತ ಹೇಳಿಲ್ಲ. ಲೋಕದ ವ್ಯವಸ್ಥೆಯಲ್ಲಿ ನಮ್ಮಲ್ಲಿ ಬಂದು ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದಾಗ,. ಜಾತ್ಯಾತೀತ ಅಂತ ಹೇಳಿಕೊಳ್ಳುವಾಗ ಇಲ್ಲಿ ಜಾತಿ ಪಂಗಡಗಳ ಲೆಕ್ಕಾಚಾರ ಯಾಕೆ ಅನ್ನೋದು ನಮ್ಮ ಅಭಿಪ್ರಾಯ. ಹೀಗೆ ಹೇಳಿದ್ದನ್ನ ಪುಡಿ ರಾಜಕಾರಣ ಅಂತಾರೆ, ನಾವು ಹೇಳಿದ್ದು ತಪ್ಪು ಅಂತಾರೆ. ಹಾಗಾದ್ರೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಹೌದೋ ಅಲ್ಲವೋ ನೀವೇ ಹೇಳಿ ಎಂದ ಶ್ರೀಗಳು ಮುಂದುವರಿದು, ಹೌದು ಅಂತಾದ್ರೆ ಒಬ್ಬ ಮಾಠಾಧಿಪತಿಗೆ ಅಂತಲ್ಲ, ಸಾಮಾನ್ಯ ಪ್ರಜೆಗೂ ಮಾತಾಡುವ ಹಕ್ಕಿದೆ, ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಹೀಗಿರುವಾಗ ಕಾವಿ ತೆಗೆದಿಟ್ಟು ಬಂದರೆ ಉತ್ತರ ಕೊಡ್ತೇನೆ ಅನ್ನೋದರ ಅರ್ಥವೇನು?
ಅಂದರೆ ಸಮಾಜದಲ್ಲಿ ಮಾತನಾಡುವ ಹಕ್ಕಿರೋದು ಕೆಲವು ರಾಜಕಾರಣಿಗಳಿಗೆ ಮಾತ್ರವಾ? ಪ್ರಜೆಗಳಿಗೂ ಹಕ್ಕಿಲ್ಲ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ, ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು ತಾನೇ? ಎಂದು ಪ್ರಶ್ನಿಸಿದ್ದರು.
ಇಂತಹ ರಾಜಕಾರಣಿಗಳಿಗೆ ಸದ್ಬುದ್ಧಿ ಕೊಡು ಅಂತಾ ದೇವರಲ್ಲಿ ಕೇಳಿಕೊಳ್ತೇನೆ. ನಮ್ಮ ಪಂಗಡದೊಳಗೆ ಯಾರಿಗೆಲ್ಲ ವೈಮನಸು ಇದೆಯೋ ಅದೆಲ್ಲ ದೂರವಾಗಲಿ ಎಂದು ಶ್ರೀಗಳು ಹೇಳಿದ್ದರು.