Asianet Suvarna News Asianet Suvarna News

ರಾಮನ ಗುಣಗಳು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದ್ರೆ ದೇಶ ರಾಮರಾಜ್ಯ: ಪೇಜಾವರಶ್ರೀ

ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಬಾಕಿ ಉಳಿದ ಕಾಮಗಾರಿಗಳು ನಡೆಯುತ್ತಿದೆ. ಒಂದೂವರೆ ವರ್ಷದಲ್ಲಿ ಇನ್ನುಳಿದ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಉಡುಪಿ ಪೇಜಾವರ ಶ್ರೀಗಳು ತಿಳಿಸಿದರು.

Pejawar seer Vishwaprasanna Tirtha Swamiji visited former minister KS Eshwarappa residence at shivamogga rav
Author
First Published Oct 21, 2024, 4:43 PM IST | Last Updated Oct 21, 2024, 4:43 PM IST

ಶಿವಮೊಗ್ಗ (ಅ.21): ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರದ ಬಾಕಿ ಉಳಿದ ಕಾಮಗಾರಿಗಳು ನಡೆಯುತ್ತಿದೆ. ಒಂದೂವರೆ ವರ್ಷದಲ್ಲಿ ಇನ್ನುಳಿದ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದು ಉಡುಪಿ ಪೇಜಾವರ ಶ್ರೀಗಳು ತಿಳಿಸಿದರು.

ಇಂದು ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಕೆ ಎಸ್ ಈಶ್ವರಪ್ಪ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಶ್ರೀಗಳು,  ಮಂದಿರ ನಿರ್ಮಾಣದ ಜೊತೆಗೆ ರಾಮರಾಜ್ಯದ ನಿರ್ಮಾಣ ಕೂಡ ಆಗಬೇಕಿದೆ ಎಂದರು. 7 ಮೋಕ್ಷ ಪ್ರಧಾನ ಕ್ಷೇತ್ರಗಳಲ್ಲಿ ಶ್ರೀ ರಾಮನ ಜನ್ಮಸ್ಥಾನ ಅಯೋಗ್ಯ ಕೂಡ ಒಂದು. ಈ ಹಿನ್ನೆಲೆಯಲ್ಲಿ  ರಾಮಮಂದಿರ ಬೇಕಿದೆ. ರಾಮನ ಗುಣಗಳನ್ನು ಮೈಗೂಡಿಸಿಕೊಂಡು ಪ್ರಜೆಗಳು ರಾಮನಾದರೆ ದೇಶ ರಾಮರಾಜ್ಯ ಆಗುತ್ತದೆ. ಉಳ್ಳವರು ಬಡವರಿಗೆ ನಿಗದಿಕರಿಗೆ ನೆರವು ನೀಡುವ ಮೂಲಕ ರಾಮನ ಸೇವೆ ದೇಶ ಸೇವೆ ಮಾಡಬೇಕು ಎಂದರು.

ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

 ಸುಪ್ರೀಂ ಕೋರ್ಟ್ ನ್ಯಾಯಾಧೀಶ ಚಂದ್ರಚೂಡರವರು ಅಯೋಧ್ಯೆ ಮತ್ತು ಬಾಬ್ರಿ ಮಸೀದಿ ತೀರ್ಪಿನ ವೇಳೆ 'ದೇವರನ್ನು ಪ್ರಾರ್ಥಿಸಿದೆ' ಎಂಬ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು,  ವ್ಯಕ್ತಿಗತ ವಿಚಾರವನ್ನು ನಾವು ಹೇಗೆ ಅಲ್ಲಗೆಳೆಯಲು ಸಾಧ್ಯ ಅವರಿಗೆ ಹೇಗೆ ತಿಳಿಯಿತೋ ಹಾಗೆ ಮಾಡಿದ್ದಾರೆ ಇದರಲ್ಲಿ ತಪ್ಪೇನು ಕಾಣುತ್ತಿಲ್ಲ ಶ್ರೀರಾಮ ಮಂದಿರ ನಮ್ಮ ದೇಶದ ಹೆಮ್ಮೆಯ ಪ್ರತೀಕ ಎಂದರು.

ಜಾತಿಗಣತಿ ಗಣತಿ ಮುಚ್ಚಿಡೋದ್ಯಾಕೆ?

ಸರ್ಕಾರಗಳು ಸಾಕಷ್ಟು ಖರ್ಚು ಮಾಡಿ ಜಾತಿ ಜನಗಣತಿ ಮಾಡುತ್ತಾರೆ ನಂತರ ಹಾಗೆ ಮುಚ್ಚಿಡುತ್ತಾರೆ ಇದು ಯಾಕೆಂದು ತಿಳಿಯುತ್ತಿಲ್ಲ. ಮುಚ್ಚಿಡೋದಾದ್ರೆ ಜಾತಿಗಣತಿ ಯಾಕೆ? ನಮ್ಮದು ಜಾತ್ಯಾತೀತ ರಾಷ್ಟ್ರ ಹೀಗಿರುವಾಗ ಜಾತಿ ಜನಗಣತಿ ಯಾಕೆ ಮಾಡುತ್ತಿದ್ದಾರೆಂಬುದು  ತಿಳಿಯುತ್ತಿಲ್ಲ  ಇದು ಯುಕ್ತವಲ್ಲ. ಒಂದೆಡೆ ಜಾತಿ ಬೇಡ ಎನ್ನುವುದು ಮತ್ತೊಂದೆಡೆ ಎಲ್ಲಾ ಸೌಲಭ್ಯಗಳು ಜಾತಿಯ ಆಧಾರದಲ್ಲಿ ನೀಡುತ್ತಿರುವುದು ವಿಪರ್ಯಾಸ ಎಂದರು ಇದೇ ವೇಳೆ ಈಶ್ವರಪ್ಪ ಮನೆಗೆ ಸೌಹಾರ್ದ ಭೇಟಿ ನೀಡಿದ್ದೇನೆ ಬೇರೆ ಯಾವುದೇ ವಿದ್ಯಮಾನಗಳಿಗೂ  ಸಂಬಂಧವಿಲ್ಲ ಎಂದರು.

ವಿಜಯೇಂದ್ರ ಇನ್ನೂ ಎಳಸು ಅವರಿಂದ ಕಲಿಯಬೇಕಾದ್ದು ಏನೂ ಇಲ್ಲ: ಈಶ್ವರಪ್ಪ ವಾಗ್ದಾಳಿ

 ರಾಮ ರಾಜ್ಯದ ಕಲ್ಪನೆ ಹೊತ್ತು ರಾಜ್ಯದ್ಯಂತ ಪೇಜಾವರ ಶ್ರೀಗಳು ಪ್ರವಾಸ ಮಾಡಿದ್ದರು. ಈ ಕಲ್ಪನೆ ಸಾಕಾರಗೊಳಿಸಲು ಶ್ರೀಗಳಿಂದ ವಿನೂತನ ಪ್ರಯತ್ನ ನಡೆಸಿದ್ದಾರೆ ಈ ಹಿನ್ನೆಲೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ರಾಮರಾಜ್ಯದ ಕಲ್ಪನೆಗೆ ಬೆಂಬಲಿಸಲು ಶ್ರೀಗಳು ಕರೆ ನೀಡಿದರು.

Latest Videos
Follow Us:
Download App:
  • android
  • ios