ಜಾತಿಗಣತಿ ವರದಿಯಿಂದ ವೈಷಮ್ಯ ಸೃಷ್ಟಿ ಸಾಧ್ಯತೆ: ಪೇಜಾವರ ಶ್ರೀ
ರಾಜ್ಯ ಸರ್ಕಾರ ಒಂದೆಡೆ ಜಾತಿ ರಾಜಕೀಯ ಬೇಡ ಎನ್ನುತ್ತಲೇ, ಜಾತಿಗಣತಿ ವರದಿ ಜಾರಿ ಅಗತ್ಯವಿದೆ ಎನ್ನುತ್ತಿದೆ. ಸರ್ಕಾರ ಏನು ಮಾಡಲು ಹೊರಟಿದೆ. ಜಾತಿಗಣತಿ ವರದಿಯಿಂದ ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿವೆ ಎಂದ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳು
ಗಂಗಾವತಿ(ಅ.23): ಜಾತ್ಯತೀತ ದೇಶ, ಸರ್ಕಾರ ಎನ್ನುವವರು ಜಾತಿಗಣತಿ ವರದಿ ಮಂಡಿಸುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ರಾಜ್ಯ ಸರ್ಕಾರ ಜಾತಿಗಣತಿ ವರದಿ ಎಂಬ ಅಸ್ತ್ರವನ್ನಿಟ್ಟುಕೊಂಡು ತಮ್ಮ ತಪ್ಪುಗಳನ್ನು ಮರೆಮಾಚುವಂತೆ ಮಾಡಲು ಯತ್ನಿಸುತ್ತಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಶ್ರೀಗಳು ಹೇಳಿದರು.
ತಾಲೂಕಿನ ಮರಳಿ ಗ್ರಾಮದ ತಪೋವನಕ್ಕೆ ಮಂಗಳವಾರ ಆಗಮಿಸಿ, ಶ್ರೀಕೃಷ್ಣ ಸಂಸ್ಥಾನ ಪೂಜೆ ಹಾಗೂ ಮಂತ್ರಾಲಯಕ್ಕೆ ತೆರಳುವ ಪಾದಯಾತ್ರಿಗಳನ್ನು ಆಶೀರ್ವದಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ನಂತರ ರಾಜ್ಯ ಸರ್ಕಾರ ಒಂದೆಡೆ ಜಾತಿ ರಾಜಕೀಯ ಬೇಡ ಎನ್ನುತ್ತಲೇ, ಜಾತಿಗಣತಿ ವರದಿ ಜಾರಿ ಅಗತ್ಯವಿದೆ ಎನ್ನುತ್ತಿದೆ. ಸರ್ಕಾರ ಏನು ಮಾಡಲು ಹೊರಟಿದೆ. ಜಾತಿಗಣತಿ ವರದಿಯಿಂದ ಜಾತಿಗಳ ಮಧ್ಯೆ ವೈಷಮ್ಯ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿವೆ ಎಂದರು.
ಕೋಟಿ ಕೋಟಿ ವಂಚನೆ: ಸೈಬರ್ ಸುಲಿಗೆಗೆ ನಲುಗಿದ ಕೊಪ್ಪಳ ಜನ!
ರಾಯರಮಠದ ವ್ಯವಸ್ಥಾಪಕ ಸಾಮವೇದ ಗುರುರಾಜಾಚಾರ, ರಾಮಕೃಷ್ಣ ಜಾಹಗೀರದಾರ, ವಾದಿರಾಜಾಚಾರ ಕಲ್ಮಂಗಿ, ಕೃಷ್ಣ ದೇಶಪಾಂಡೆ ಸೇರಿದಂತೆ ಮಂತ್ರಾಲಯ ಪಾದಯಾತ್ರಾರ್ಥಿಗಳು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಶ್ರೀಗಳು ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.