Asianet Suvarna News Asianet Suvarna News

ಕುಡಿಯೋದೇ ನನ್ನ ವೀಕ್ನೆಸ್ಸು, ತಹಶಿಲ್ದಾರ್ ಕಚೇರಿ ಎದುರು ಟೈಟ್ ಆಗಿ ಮಲಗಿದ ಗ್ರಾಮ ಲೆಕ್ಕಾಧಿಕಾರಿ!

• ತಹಶಿಲ್ದಾರ್ ಕಚೇರಿ ಎದುರೇ ಕಂಠಪೂರ್ತಿ ಕುಡಿದು ಮಕಾಡೆ ಮಲಗಿದ ಗ್ರಾಮಲೆಕ್ಕಾಧಿಕಾರಿ

• ಕುಡಿದು ಮಲಗಿದ ವಿಡಿಯೋಗೆ 'ಕುಡಿಯೋದೇ ನನ್ನ ವೀಕ್ನೆಸ್' ಸಾಂಗ್ ಹಾಕಿ ಎಡಿಟ್

• ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ತಹಶಿಲ್ದಾರ್ ವಿರುದ್ಧ ಆಕ್ರೋಶ

village accountant in drunk state infront of tahasildar Office in Belagavi san
Author
Bengaluru, First Published May 11, 2022, 6:10 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಮೇ.11) : ಕರ್ತವ್ಯ ವೇಳೆಯೇ ಕಂಠಪೂರ್ತಿ ಕುಡಿದು ಸವದತ್ತಿ (Savadatti) ತಹಶಿಲ್ದಾರ್ ಕಚೇರಿ (tahasildar Office) ಎದುರು ಗ್ರಾಮಲೆಕ್ಕಾಧಿಕಾರಿ ಅಡ್ಡಲಾಗಿ ಮಲಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋಗೆ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಅಭಿನಯದ ಯುದ್ಧಕಾಂಡ ಚಿತ್ರದ ಕುಡಿಯೋದೆ ನನ್ನ ವೀಕ್ನೆಸ್ಸು ಸಾಂಗ್ ಎಡಿಟ್ ಮಾಡಿದ ವಿಡಿಯೋ ವೈರಲ್ ಆಗಿದೆ. 

ಮೊದಲು ಸವದತ್ತಿ ತಾಲೂಕಿನ ಗೊರವನಕೊಳ್ಳ ( Goravana Kolla) ಗ್ರಾಮದ ಗ್ರಾಮ ಲೆಕ್ಕಾಧಿಕಾರಿ (village accountant) ಆಗಿದ್ದ ಸಂಜು ಬೆಣ್ಣಿ (Sanju Benni) ಗೊರವನ್ನಕೊಳ್ಳ ಗ್ರಾಮದಲ್ಲಿಯೂ ಇದೇ ರೀತಿ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ‌ನಂತೆ. ಹೀಗಾಗಿ ಜಿಲ್ಲೆಯ ಸವದತ್ತಿ ತಹಶೀಲ್ದಾರ್ ಕಚೇರಿಗೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಷ್ಟಾದರೂ ತಹಶಿಲ್ದಾರ್ ಕಚೇರಿಯಲ್ಲಿಯೂ ತನ್ನ ಹಳೆಯ ಚಾಳಿಯನ್ನು ಗ್ರಾಮಲೆಕ್ಕಾಧಿಕಾರಿ ಸಂಜು ಬೆಣ್ಣಿ ಮುಂದುವರಿಸಿದ್ದಾರೆ. 

ಗ್ರಾಮ ಲೆಕ್ಕಾಧಿಕಾರಿ ಸಂಜು ಬೆಣ್ಣಿ ಕರ್ತವ್ಯ ವೇಳೆ ಕಂಠಪೂರ್ತಿ ಕುಡಿದು ದುರ್ವತನೆ ಮಾಡ್ತಾನೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು ಗ್ರಾಮಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದ ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ( Prashant Patil) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios