ಚಿತ್ತಾಪೂರದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಚಿವ ಪ್ರಿಯಾಂಕ್ ಖರ್ಗೆಯ ಕುಮ್ಮಕ್ಕು ಆರೋಪ ಕೇಳಿಬಂದಿರುವ ಹಿನ್ನೆಲೆ ಇಂದು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಢೀರ್ ಭೇಟಿ ನೀಡಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು.

ಕಲಬುರಗಿ (ಏ.18): ಚಿತ್ತಾಪೂರದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಚಿವ ಪ್ರಿಯಾಂಕ್ ಖರ್ಗೆಯ ಕುಮ್ಮಕ್ಕು ಆರೋಪ ಕೇಳಿಬಂದಿರುವ ಹಿನ್ನೆಲೆ ಇಂದು ಸ್ಥಳಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಢೀರ್ ಭೇಟಿ ನೀಡಿದರು. ಈ ವೇಳೆ ಪ್ರಿಯಾಂಕ್ ಖರ್ಗೆ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು.

ಚಿತ್ತಾಪೂರ ತಾಲೂಕಿನ ಭಾಗೋಡಿ ಸೇರಿದಂತೆ ಮರಳು ಗಣಿಗಾರಿಕಾ ಸ್ಥಳಗಳಿಗೆ ಭೇಟಿ ನೀಡಿದರು. ವಿಜಯೇಂದ್ರ ಅವರೊಂದಿಗೆ ಛಲವಾದಿ ನಾರಾಯಣಸ್ವಾಮಿ, ಎನ್. ರವಿಕುಮಾರ್, ಶಾಸಕ ಬಸವರಾಜ್ ಮತ್ತಿಮೂಡ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಸೇರಿದಂತೆ ಇತರ ಬಿಜೆಪಿ ಮುಖಂಡರು ಇದ್ದರು. ಆದರೆ, ಭಾಗೋಡಿಯಲ್ಲಿ ವಿಜಯೇಂದ್ರ ಭೇಟಿಯ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ, ಕಿರಿಕ್ ಮಾಡಿದರು. 'ಬಿಜೆಪಿ ಅವಧಿಯಲ್ಲೇ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದ್ದು, ಇದೀಗ ಆರೋಪ ಮಾಡಲು ಬಿಜೆಪಿಗೆ ಯಾವ ನೈತಿಕತೆ ಇದೆ? ಎಂದು ಖರ್ಗೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ವಿರುದ್ಧವೇ ಘೋಷಣೆ ಕೂಗಿದರು.

ಇದನ್ನೂ ಓದಿ: ಕಾಗಿಣಾ ಅಕ್ರಮ ಮರಳುಗಾರಿಕೆಗೆ ಖರ್ಗೆ ಕುಮ್ಮಕ್ಕು: ಕ್ರಮ ಆಗದಿದ್ದರೆ ಜಿಲ್ಲಾಡಳಿತ ವಿರುದ್ಧವೇ ಕೋರ್ಟ್‌ಗೆ:ಆಂದೋಲಾ ಶ್ರೀ

ಪ್ರಿಯಾಂಕ್ ಖರ್ಗೆ ಪರ ಹಾಗೂ ಬಿಜೆಪಿ ವಿರುದ್ಧ ಘೋಷಣೆಗಳೊಂದಿಗೆ ಬೆಂಬಲಿಗರು ಆರ್ಭಟಿಸಿದ್ದರಿಂದ ವಿಜಯೇಂದ್ರ ಅಂಡ್ ಟೀಂ ಸ್ಥಳದಿಂದ ಕಾಲ್ಕಿತ್ತಿತು. ವಿಜಯೇಂದ್ರ ಅವರು ಕಾಗಿಣಾ ನದಿಯ ಬ್ರಿಡ್ಜ್ ಮೇಲೆ ನಿಂತು ನದಿಯನ್ನು ವೀಕ್ಷಿಸಿದರು. ಈ ವೇಳೆ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೆ ಸ್ಥಳದಿಂದ ತೆರಳಿದರು. 

ಪ್ರಿಯಾಂಕ್ ಖರ್ಗೆ ಬೆಂಬಲಿಗರು, 'ನಿಮ್ಮ ಅವಧಿಯಲ್ಲೇ ಅತಿಹೆಚ್ಚು ಮರಳು ಗಣಿಗಾರಿಕೆ ನಡೆದಿದೆ. ಇದೀಗ ರಾಜಕೀಯ ನಾಟಕ ಮಾಡಲು ಇಲ್ಲಿಗೆ ಬಂದಿದ್ದೀರಿ' ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಘಟನೆಯಿಂದ ಚಿತ್ತಾಪೂರದಲ್ಲಿ ರಾಜಕೀಯ ವಾತಾವರಣ ಉದ್ವಿಗ್ನವಾಗಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿದೆ.