ವಕ್ಫ್‌ ಆಸ್ತಿ ನೋಟಿಸ್‌: ದೀಪಾವಳಿ ಆಚರಿಸದಿರಲು ವಿಜಯಪುರ ರೈತರ ನಿರ್ಧಾರ

ಅನ್ನದಾತನ ಜೀವನದ ಜೊತೆ ಚೆಲ್ಲಾಟ ಆಡುತ್ತಾ ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ಜಿಲ್ಲೆಯ ಹಲವಾರು ರೈತ ಕುಟುಂಬಗಳನ್ನು ಬೀದಿಗೆ ತರುವ ಹುನ್ನಾರ ನಡೆದಿರುವುದನ್ನು ಖಂಡಿಸಿ ಜಿಲ್ಲೆಯ ರೈತರು ದೀಪಾವಳಿ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಲಾಗಿದೆ

vijayapur waqf property dispute Farmers decide not to celebrate Diwali festival rav

 ವಿಜಯಪುರ (ಅ.28): ಅನ್ನದಾತನ ಜೀವನದ ಜೊತೆ ಚೆಲ್ಲಾಟ ಆಡುತ್ತಾ ರೈತರ ಜಮೀನಿನ ಉತಾರೆಗಳಲ್ಲಿ ವಕ್ಫ್ ಆಸ್ತಿ ಎಂದು ಜಿಲ್ಲೆಯ ಹಲವಾರು ರೈತ ಕುಟುಂಬಗಳನ್ನು ಬೀದಿಗೆ ತರುವ ಹುನ್ನಾರ ನಡೆದಿರುವುದನ್ನು ಖಂಡಿಸಿ ಜಿಲ್ಲೆಯ ರೈತರು ದೀಪಾವಳಿ ಸಂಭ್ರಮಾಚರಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ರೈತರ ಬದುಕನ್ನೆ ಕತ್ತಲೆಗೆ ದೂಡಿದ ಕರ್ನಾಟಕ ಸರ್ಕಾರ ಹಾಗೂ ವಕ್ಫ್ ಮಂಡಳಿ ಮಾಡಿದ ಕಿತಾಪತಿಗೆ ನಾಡಿನ ರೈತರಿಗೆ ಇನ್ನೆಲ್ಲಿಂದ ಬರಬೇಕು ದೀಪಾವಳಿ ಸಂಭ್ರಮ. ಆದ್ದರಿಂದ ಮಂಗಳವಾರ ಅ.೨೯ರಂದು ನಗರದ ಸಿದ್ದೇಶ್ವರ ದೇವಸ್ಥಾನದಿಂದ ಸಂಜೆ ೪ ಗಂಟೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.

ರೈತರು ತಿರುಗಿಬಿಳ್ತಿದ್ದಂತೆ ಉಲ್ಟಾ ಹೊಡೆದ ಸಚಿವ;10 ಎಕರೆ ಮಾತ್ರ ವಕ್ಫ್ ಆಸ್ತಿ ಉಳಿದಿದ್ದೆಲ್ಲ ರೈತರ ಜಮೀನು ಎಂದ ಎಂಬಿ ಪಾಟೀಲ್

ಅಲ್ಲಿಯೇ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಲ್ಲಿಯೇ ದೀಪ ಬೆಳಗಿಸಿ ಅಡುಗೆ ಮಾಡಿ ಊಟ ಮಾಡಿ ಅನಿರ್ಧಿಷ್ಟ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಸಮಸ್ಯೆಗಿಡಾದ ರೈತರ ಉತಾರೆಗಳನ್ನು ಮೊದಲಿನಂತೆ ಮಾಡುವವರೆಗೆ ಈ ಹೋರಾಟ ಮುಂದುವರೆಯಲಿದೆ. ಈ ಹೋರಾಟದಲ್ಲಿ ರೈತರ ಆಸ್ತಿಯಲ್ಲಿ ವಕ್ಫ್ ಎಂದು ಬಂದಿರುವ ಅಥವಾ ನೋಟಿಸ್ ಬಂದಿರುವ ರೈತರು, ಜಿಲ್ಲೆಯ ಎಲ್ಲಾ ರೈತರು, ರೈತ ಸಂಘಟನೆ ಮುಖಂಡರು, ರೈತಪರ, ಪ್ರಗತಿಪರ, ಸಂಘಟನೆಯ ಮುಖಂಡರು ಹಾಗೂ ಮಠಾಧಿಶರು ಪಕ್ಷಾತೀತ, ಜಾತ್ಯಾತೀತ ಹಾಗೂ ಧರ್ಮಾತೀತವಾಗಿ ರೈತರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios