ಲೀಲಾವತಿ ಅವರ ಕಲಾಸೇವೆ, ಸಾಮಾಜಿಕ ಕಳಕಳಿಯ ಬದುಕೇ ನಮಗೆ ಮಾದರಿ : ಡಿಕೆ ಶಿವಕುಮಾರ

ಹಿರಿಯ ನಟಿ ಲೀಲಾವತಿ ಗ್ರಾಮಿಣ ಪ್ರದೇಶದಲ್ಲಿ ಬೆಳೆದ ಹೆಣ್ಣುಮಗಳು. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆಂದರೆ ಸಾಮಾನ್ಯ ಅಲ್ಲ. ವಯೋಸಹಜ ಕಾಯಿಲೆಯಿಂದ ನಿನ್ನೆ (ಡಿ.8) ರಂದು ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ ಭಾವುಕರಾಗಿ ಪ್ರತಿಕ್ರಿಯಿಸಿದರು

Veteran actress Leelavati passed away and DK Shivakumar last darshan at bengaluru rav

ಬೆಂಗಳೂರು (ಡಿ.9): ಹಿರಿಯ ನಟಿ ಲೀಲಾವತಿ ಗ್ರಾಮಿಣ ಪ್ರದೇಶದಲ್ಲಿ ಬೆಳೆದ ಹೆಣ್ಣುಮಗಳು. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆಂದರೆ ಸಾಮಾನ್ಯ ಅಲ್ಲ. ವಯೋಸಹಜ ಕಾಯಿಲೆಯಿಂದ ನಿನ್ನೆ (ಡಿ.8) ರಂದು ಕೊನೆಯುಸಿರೆಳೆದ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ ಭಾವುಕರಾಗಿ ಪ್ರತಿಕ್ರಿಯಿಸಿದರು.

ನಾನು 40 ವರ್ಷಗಳಿಂದ  ಅವರ ಸಿನ್ಮಾ ನೋಡಿದ್ದೇನೆ. ಅವರು ಕೊನೆಯ ಬಾರಿ ಎರಡು ವಾರದ ಹಿಂದೆ ನಮ್ಮ ಮನೆಗೆ ಬಂದಿದ್ದರು. ಲೀಲಾವತಿ ಅವರು ನಮ್ಮ ಮನೆಗೆ ಬಂದಾಗ ಅವರ ಆರೋಗ್ಯ ಪರಿಸ್ಥಿತಿ ಶೋಚನಿಯವಾಗಿತ್ತು.  ಸ್ವಲ್ಪ ಪ್ರಜ್ಞೆ ಇತ್ತು, ಅವತ್ತು ಅವರು ನನಗೆ ಒಂದು ಇನ್ವಿಟೇಷನ್ ಕೊಟ್ರು, ಪಶುವೈದ್ಯ ಶಾಲೆಯನ್ನು ಕಟ್ಟಿದ್ದೇವೆ, ಉದ್ಘಾಟನೆಗೆ ಬರಲು ಹೇಳಿದ್ರು. ಮೂಕ ಪ್ರಾಣಿಗಳಿಗಾಗಿ ಮಾಡಿದ ಆಸ್ಪತ್ರೆ ಅದಾಗಿತ್ತು. ಅವರದ್ದು ಹೃದಯವಂತಿಕೆಯ ಜೀವ. ಮೂಕಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಕಾಳಜಿ. ಹೀಗಾಗಿ ಅವರ ಬದುಕಿನ ಆಸೆಯಂತೆ ಹೋಗಿ ನಾನು ಉದ್ಘಾಟನೆ ಮಾಡಿಬಂದಿದ್ದೆ. ಎಲೆಕ್ಷನ್ ಒತ್ತಡ ಇದ್ರೂ ಸೂಕ್ತ ಸಮಯ ಮಾಡಿಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದೆ. ಅದೃಷ್ಟ ಬದಲಾವಣೆ ಆಗಬಹುದು ಆದರೆ ನಿರ್ಧಾರ ಬದಲಾವಣೆ ಆಗಬಾರದು. ಹೀಗಾಗಿ ಒತ್ತಡದ ನಡುವೆಯೂ ಆ ಕಾರ್ಯಕ್ರಮದಲ್ಲಿ ನಾನು ಭಾಗಿಯಾದ್ಧೆ  ಇದು ನನಗೆ ಬಹಳ ಸಂತೋಷ್ ಆಗಿತ್ತು. ಅನೇಕ ಸಾಹುಕಾರರನ್ನು ನೋಡಿದ್ದೇನೆ. ಆದರೆ ಇವ್ರೇನು ಸಾಹುಕಾರ್ ಆಗಿರಲಿಲ್ಲ. ಆದರೂ ಸಮಾಜಸೇವೆ ತೊಡಗಿಸಿಕೊಂಡಿದ್ದರು.ಅವರು ಮಾಡಿದಂತಹ ಸೇವೆಯನ್ನು ಉದ್ಘಾಟನೆ ಮಾಡುವ ಭಾಗ್ಯ ನನಗೆ ಸಿಕ್ಕಿದ್ದಕ್ಕೆ ಬಹಳ ಸಂತೋಷ ಆಗಿತ್ತು ಲೀಲಾವತಿ ಅವರನ್ನು ಸ್ಮರಿಸಿದರು. 

ಅಮ್ಮನ ನೆನಪಿನಲ್ಲಿ ಸದಾ ಇರುತ್ತೇನೆ, ಅವರ ಕೆಲ ಕನಸುಗಳಿದ್ವು ಅದನ್ನು ನನಸಾಗಿಸುತ್ತೇನೆ: ವಿನೋದ್ ರಾಜ್‌

ಲೀಲಾವತಿ ದಕ್ಷಿಣ ಭಾರತದ ಮೇರು ನಟಿ ಅವ್ರು. ಅವರ  ಬದುಕೇ ನಮಗೆ ಒಂದು ಮಾರ್ಗದರ್ಶನ. ಪುತ್ರ ವಿನೋದ ರಾಜ್ ಇಡೀ ಜೀವನ ತಾಯಿಯ ಸೇವೆ ಮಾಡಿದ್ದಾರೆ. ತಾಯಿಗೆ ತಕ್ಕ ಮಗ. ಇಂಥ ತಾಯಿ ಮಗ ಬೇರೆ ಎಲ್ಲೂ ನೋಡಲಾಗಲ್ಲ. ವಿನೋದ ರಾಜ್ ಮಾತ್ರವಲ್ಲದೆ ಅವರ ಮನೆಯ ಕರಿಯ ನಾಯಿ ಕೂಡ ಲೀಲಾವತಿ ಅವರು ಅನಾರೋಗ್ಯ ಬಳಿಕ ಊಟ ಮಾಡ್ತಿರಲಿಲ್ಲ. ಲೀಲಾವತಿ ಅವರದು ಹೋರಾಟದ ಬದುಕು. ಅವರಿಂದು ಭೌತಿಕವಾಗಿ ನಮ್ಮೊಂದಿಗಿಲ್ಲ ಮನೋಜ್ಞ ಅಭಿನಯದ ಮೂಲಕ ಅವರ ಎಂದೆಂದೂ ನಮ್ಮೊಂದಿರುತ್ತಾರೆ. ಅವರ ಹೆಸರು ಉಳಿಯೋಕೆ ಏನು ಮಾಡಬೇಕೋ ಅದನ್ನ ನಮ್ಮ ಸರ್ಕಾರ ಮಾಡುತ್ತೆ. ಈಗ ಹೇಳೋಕೆ ಹೋಗಲ್ಲ, ನಾವೆಲ್ಲರೂ ಚರ್ಚೆ ಮಾಡಿ ತೀರ್ಮಾನ ಮಾಡ್ತೇವೆ ಎಂದರು.
 

Latest Videos
Follow Us:
Download App:
  • android
  • ios