ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣ; ನಾಲ್ವರು ಮಾಜಿ ನಕ್ಸಲರು ಪೊಲೀಸ್  ವಶಕ್ಕೆ, ಇಂದು ಕೋರ್ಟ್ ಗೆ ಹಾಜರು!

ಸುಮಾರು 19 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ನಡೆಸಿದ್ದ ಪೊಲೀಸ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹಿಳೆ ಸೇರಿ ಐವರು ಆರೋಪಿಗಳನ್ನು ಪಾವಗಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Venkatammanahalli Police Massacre Case 4 former Naxalites in police custody at Tumakuru rav

ವರದಿ : ಮಹಂತೇಶ್‌ ಕುಮಾರ್‌, ಏಷ್ಯನೆಟ್‌ ಸುವರ್ಣ ನ್ಯೂಸ್‌ ತುಮಕೂರು.

ತುಮಕೂರು (ಜ.8): ಸುಮಾರು 19 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವೆಂಕಟಮ್ಮನಹಳ್ಳಿಯಲ್ಲಿ ನಕ್ಸಲರು ನಡೆಸಿದ್ದ ಪೊಲೀಸ್ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮಹಿಳೆ ಸೇರಿ ಐವರು ಆರೋಪಿಗಳನ್ನು ಪಾವಗಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಗಂತಿಮೇರಿಯ ನಾಗರಾಜು (40), ಧರ್ಮಾವರಂನ ಪದ್ಮ (35), ರಾಮಗಿರಿ ಬೋಯ ಓಬಳೇಶ್ (40), ರಾಮಮೋಹನ್ (42) ಮತ್ತು ಆಂಜನೇಯುಲು (44) ಬಂಧಿತರಾಗಿದ್ದು,
ಇವರನ್ನು ಆಂಧ್ರಪ್ರದೇಶ ವಿವಿಧ ಕಡೆಯಲ್ಲಿ ಬಂಧಿಸಿ ಪಾವಗಡ ಪೊಲೀಸ್ ಠಾಣೆಗೆ ಕರೆ ತರಲಾಗಿದೆ. ಭಾರಿ ಭದ್ರತೆಯ ನಡುವೆ ಪೊಲೀಸರು ಆರೋಪಿಗಳನ್ನು ಪಾವಗಡ ಠಾಣೆಗೆ ಕರೆ ತಂದು ರಾತ್ರಿವರೆಗೆ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪೊಲೀಸ್ ಠಾಣೆಯ ಮುಖ್ಯ ಗೇಟ್‌ಗೆ ಬೀಗ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಇಂದು ಜೈಲಿನಿಂದ ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆ; ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ!

ಇಂದು ಕೋರ್ಟ್‌ಗೆ ಹಾಜರು

ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ. ಸದರಿ ವೆಂಕಟಮ್ಮನಹಳ್ಳಿ ಪೊಲೀಸ್ ಹತ್ಯಾಕಾಂಡ ಪ್ರಕರಣದ ಕುರಿತು ಪಾವಗಡ ಮತ್ತು ಮಧುಗಿರಿ
ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ‌. ಬಹುತೇಕ ಆರೋಪಿಗಳ ವಿರುದ್ಧ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. 

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರಿಗೆ ಇನ್ನೂ 4 ದಿನ ಜೈಲೇ ಗತಿ: ಇಲ್ಲಿದೆ ಅಸಲಿ ಕಾರಣ!

ಪೊಲೀಸ್ ಹತ್ಯಾಕಾಂಡ ವಿವರ

ಆಂಧ್ರಪ್ರದೇಶ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಕ್ಸಲರ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ, ನಕ್ಸಲರ ಹಾವಳಿಯನ್ನು ನಿಯಂತ್ರಿಸಲು ನಕ್ಸಲ್ ನಿಗ್ರಹ  ಕಾರ್ಯಚರಣೆ ಶುರು ಮಾಡಿಕೊಂಡಿತ್ತು.
ನಕ್ಸಲ್‌ ನಿಗ್ರಹ ಪಡೆಯ ಪೊಲೀಸರ ತಂಡ ಪಾವಗಡ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಕ್ಯಾಂಪ್ ಹಾಕಿದ್ದರು. ಈ ಕ್ಯಾಂಪ್ ಮೇಲೆ ನಕ್ಸಲರ್ ಗುಂಡಿ‌ನ ದಾಳಿ ನಡೆಸಿ 8 ಜನರನ್ನು ಹತ್ಯೆ ಮಾಡಿದ್ದರು. 2005ರ ಫೆಬ್ರವರಿ 11ರಂದು ರಾತ್ರಿ ಲಾರಿಯಲ್ಲಿ ಬಂದಿಳಿದ ನಕ್ಸಲರ ತಂಡವು ವೆಂಕಟಮ್ಮನಹಳ್ಳಿ ಶಾಲೆಯ ಅವರಣದಲ್ಲಿದ್ದ ಪೊಲೀಸ್ ಬಿಡಾರದ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿತ್ತು. ದಾಳಿ ಬಳಿಕ ಕ್ಯಾಂಪ್‌ ಒಳಗೆ ನುಗ್ಗಿದ ನಕ್ಸಲರು ಪೊಲೀಸರ ಶಸ್ತ್ರಾಸ್ತ್ರಗಳನ್ನು ದೋಚಿದ್ದರು. ಈ ದಾಳಿಯಲ್ಲಿ 7 ಮಂದಿ ಪೊಲೀಸರು ಮತ್ತು ಓರ್ವ ಸಾರ್ವಜನಿಕ ಸ್ಥಳದಲ್ಲೇ ಮೃತಪಟ್ಟಿದ್ದರು

Latest Videos
Follow Us:
Download App:
  • android
  • ios