ಇಂದು ಜೈಲಿನಿಂದ ಕರವೇ ನಾರಾಯಣಗೌಡ ಸೇರಿ 29 ಕಾರ್ಯಕರ್ತರ ಬಿಡುಗಡೆ; ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ!

ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರರು ಕರ್ನಾಟಕ ರಕ್ಷಣಾ ವೇದಿಕೆ  ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಪ್ರಕರಣದಲ್ಲಿ ಇಂದು ನಾರಾಯಣಗೌಡ ಸೇರಿ ಕಾರ್ಯಕರ್ತರೆಲ್ಲರೂ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

Karnataka Rakshana Vedike Narayana Gowda and 29 activists released from jail today at bengaluru rav

ಬೆಂಗಳೂರು (ಜ.8): ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರರು ಕರ್ನಾಟಕ ರಕ್ಷಣಾ ವೇದಿಕೆ  ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಪ್ರಕರಣದಲ್ಲಿ ಇಂದು ನಾರಾಯಣಗೌಡ ಸೇರಿ ಕಾರ್ಯಕರ್ತರೆಲ್ಲರೂ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ಸೆಂಬರ್‌ 27ರಂದು (ಬುಧವಾರ) ಪ್ರತಿಭಟನೆ ವೇಳೆ ಬಂಧಿಸಿದ್ದ ಪೊಲೀಸರು. ಡಿ. 28ರಿಂದ ಪರಪ್ಪನಗ್ರಹಾರ ಜೈಲಲ್ಲಿದ್ದ ಕರವೇ ನಾರಾಯಣ ಗೌಡ. ನಾರಾಯಣ ಗೌಡ ಸೇರಿ 29ಜನರಿಗೆ ಶನಿವಾರವೇ ಜಾಮೀನು ಮಂಜೂರಾಗಿತ್ತು. ಬಳಿಕ ಜಾಮಿನು ಪ್ರತಿ ಶನಿವಾರ ಸಂಜೆ 7ಗಂಟೆಯ ನಂತರ ಜೈಲಾಧೀಕಾರಿಗಳಿಗೆ ತಲುಪಿತ್ತು. ನಿನ್ನೆ  ಭಾನುವಾರ ಆಗಿದ್ದರಿಂದ‌ ಜಾಮೀನು ಪ್ರತಿ ಪರೀಶಿಲನೆ ಸಾಧ್ಯವಾಗಿರಲಿಲ್ಲ. ಇಂದು ಇಂದು ನಾರಾಯಣಗೌಡ ಸೇರಿದಂತೆ 29ಜನರ ಜಾಮೀನು ಅರ್ಜಿ ಪರೀಶಿಲಿಸಲಿರುವ ಅಧಿಕಾರಿಗಳು.  ಪರೀಶಿಲನೆ ನಂತರ ಜೈಲಿನಿಂದ  ಬಿಡುಗಡೆ‌ ಮಾಡಲಿರುವ ಪೋಲಿಸರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರಿಗೆ ಇನ್ನೂ 4 ದಿನ ಜೈಲೇ ಗತಿ: ಇಲ್ಲಿದೆ ಅಸಲಿ ಕಾರಣ!

ಇಂದು ಕರವೇ ನಾರಾಯಣ ಗೌಡ ಬಿಡುಗಡೆ ಸಾಧ್ಯತೆ ಹಿನ್ನಲೆ ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ ಮಾಡಲಿರುವ ಪೊಲೀಸರು. ನಾರಾಯಣ ಗೌಡ ಬಿಡುಗಡೆ ಹಿನ್ನಲೆ ಹೆಚ್ಚು ಬೆಂಬಲಿಗರು ಸೇರುವ ಸಾಧ್ಯತೆಯಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

Latest Videos
Follow Us:
Download App:
  • android
  • ios