Asianet Suvarna News Asianet Suvarna News

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರಿಗೆ ಇನ್ನೂ 4 ದಿನ ಜೈಲೇ ಗತಿ: ಇಲ್ಲಿದೆ ಅಸಲಿ ಕಾರಣ!

ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತುಯ ಪ್ರತಿಭಟನೆ ಮಾಡಿ ಜೈಲು ಪಾಲಾದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರಿಗೆ ಇನ್ನೂ ನಾಲ್ಕು ದಿನ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಲಿದೆ.

Karnataka Rakshana Vedike president Narayanagowda jail stay another 4 days sat
Author
First Published Jan 2, 2024, 8:11 PM IST

ಬೆಂಗಳೂರು (ಜ.02): ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕರವೇ ನಾರಾಯಣಗೌಡ ಅವರಿಗೆ ಇನ್ನೂ ನಾಲ್ಕು ದಿನಗಳ ಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ.

ಕಳೆದ ಡಿಸೆಂಬರ್‌ 27ರಂದು (ಬುಧವಾರ) ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳಿಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಮಾಡಲಾಗಿದ್ದು, ಕೆಲವು ಶಾಪಿಂಗ್‌ ಮಾಲ್‌ಗಳಿಗೂ ಮುತ್ತಿಗೆ ಹಾಕಿ ಸರ್ಕಾರದ ಆದೇಶದದಂತೆ ಕನ್ನಡ ನಾಮಫಲಕಗಳನ್ನು ಅಳವಡಿಕೆ ಮಾಡುವಂತೆ ಹೋರಾಟ ಮಾಡಿದ್ದರು. ಈ ವೇಳೆ ಶಾಂತಿಯುತ ಪ್ರತಿಭಟನೆ ಮಾಡದೇ ಕೆಲವು ಆಸ್ತಿಗಳನ್ನು ಧ್ವಂಸ ಮಾಡುತ್ತಿದ್ದಾರೆಂದು ಹಾಗೂ ಪೊಲೀಸರ ಅನುಮತಿ ಪಡೆಯದೇ ಪ್ರತಿಭಟನೆ ಮಾಡುತ್ತಾ ಸರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿದ್ದಾರೆಂದು ಕರವೇ ಅಧ್ಯಕ್ಷ ನಾರಾಯಣಗೌಡ  ಸೇರಿದಂತೆ 32 ಜನರನ್ನು ಬಂಧಿಸಲಾಗಿದ್ದು, ಎಲ್ಲರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಕಾರಿನ ಬಳಿ ಭಿಕ್ಷೆಗೆ ಬಂದ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ ಕೇರಳದ ಕಾಮುಕರು: ಗ್ರಾಮಸ್ಥರು ಹಿಡಿದು ಗೂಸಾ ಕೊಟ್ರು!

ಕರವೇ ಅಧ್ಯಕ್ಷ ನಾರಾಯಣಗೌಡರು ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ದೇವನಹಳ್ಳಿ ಸೆಷೆನ್ಸ್ ನ್ಯಾಯಾಲಯವು, ಎರಡೂ ಕಡೆಯವರ ವಾದ ಪ್ರತಿವಾದ ಆಲಿಸಿ ಆದೇಶವನ್ನು ಜ.6ನೇ ತಾರೀಖಿಗೆ ಕಾಯ್ದಿರಿಸಿದೆ. ಈ ಹಿನ್ನೆಲೆಯಲ್ಲಿ ಇನ್ನೂ ನಾಲ್ಕು ದಿನ ನಾರಾಯಣಗೌಡರಿಗೆ ಜೈಲೇ ಫಿಕ್ಸ್ ಆಗಿದೆ. ಕರವೇ ನಾರಾಯಣಗೌಡರು ಸೇರಿದಂತೆ ಕರವೇ ಕಾರ್ಯಕರ್ತರ ಜಾಮೀನು ಆದೇಶವನ್ನು ಅದೇ ದಿನಕ್ಕೆ ಕಾಯ್ದಿರಿಸಲಾಗಿದೆ.

ಇನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಅವರ ಬಿಡುಗಡೆ ಮಾಡುವಂತೆ ಸರ್ಕಾರದ ಮೇಲೆ ಎಷ್ಟೇ ಒತ್ತಡ ಹಾಕಿದರೂ ಸರ್ಕಾರದಿಂದ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡಲಿಲ್ಲ. ಇದರ ಬದಲಾಗಿ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಕರವೇ ಕಾರ್ಯಕರ್ತರ ಮೇಲೆ ಬೆಂಗಳೂರು ನಗರ ಪೊಲೀಸರು ಕೈಗೊಂಡ ಕ್ರಮವೇ ಸೂಕ್ತವಾಗಿದೆ. ಸಾರ್ವಜನಿಕರಿಗೆ ಕಿರುಕುಳ ಹಾಗೂ ಸಾರ್ವಜನಿಕ ಆಸ್ತಿ ಹಾನಿ ಮಾಡಿದರೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಕಾನೂನಿನಲ್ಲಿ ಇರುವಂತೆ ಕರವೇ ಕಾರ್ಯಕರ್ತರಿಗೆ ತಕ್ಕ ಕ್ರಮವಾಗಲಿದೆ ಎಂದು ಹೇಳಿದ್ದರು.

ರಾಮಜನ್ಮಭೂಮಿಗೆ ಹೋರಾಡಿದ ಹಿಂದೂಗಳನ್ನು ಬಂಧಿಸಿದ ಸರ್ಕಾರ, ಹುಬ್ಬಳ್ಳಿ ಗಲಭೆಕೋರರ ರಕ್ಷಣೆಗೆ ನಿಂತಿದ್ದೇಕೆ?

ಕರವೇ ನೂರಾರು ಕಾರ್ಯಕರ್ತರು ತಮ್ಮ ಅಧ್ಯಕ್ಷ ನಾರಾಯಣಗೌಡ ಅವರ ಬಿಡುಗಡೆಗಾಗಿ ಶಕ್ತಿ ದೇವತೆ ಬನಶಂಕರಿ ದೇವಿಯ ಮೊರೆ ಹೋಗಿದ್ದಾರೆ. ಕರವೇ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅಶ್ವಿನಿಗೌಡ ನೇತೃತ್ವದಲ್ಲಿ ಬನಶಂಕರಿ ದೇವಿಗೆ ಪೂಜೆ ನೆರವೇರಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವಿನಿ ಗೌಡ ಅವರು ರಾಜ್ಯ ಸರ್ಕಾರ ಕರವೇ ಮಹಿಳಾ ಹೋರಾಟಗಾರರ ಕುಟುಂಬದವರಿಗೆ ಕಿರುಕುಳ ನೀಡುತ್ತಿದೆ. ಪೊಲೀಸರ ಕುಮ್ಮಕ್ಕಿನಿಂದ ಕನ್ನಡಪರ ಹೋರಾಟಗ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios