ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಹಲವು ಬಾರಿ ತಮ್ಮ ಸರಳತೆಯ ಕಾರಣಕ್ಕೂ ಸುದ್ದಿಯಾಗಿದ್ದಾರೆ. ಅದೇ ರೀತಿ ಈಗ ಚೆನ್ನೈನಲ್ಲಿ ತಮ್ಮ ನಿವಾಸದ ಸಮೀಪದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಅವರು ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಖರೀದಿಸಿ ತಂದಿದ್ದಾರೆ.

ಚೆನ್ನೈ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಹಲವು ಬಾರಿ ತಮ್ಮ ಸರಳತೆಯ ಕಾರಣಕ್ಕೂ ಸುದ್ದಿಯಾಗಿದ್ದಾರೆ. ಅದೇ ರೀತಿ ಈಗ ಚೆನ್ನೈನಲ್ಲಿ ತಮ್ಮ ನಿವಾಸದ ಸಮೀಪದ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಅವರು ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಖರೀದಿಸಿ ತಂದಿದ್ದಾರೆ. ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಆಕ್ಟೋಬರ್ 8 ರಂದು ಚೆನ್ನೈನ ಮೈಲಾಪುರ್‌ನಲ್ಲಿರುವ ತರಕಾರಿ ಮಾರುಕಟ್ಟಗೆ ಭೇಟಿ ನೀಡಿದರು. ಇದೇ ವೇಳೆ ಅಲ್ಲಿನ ಮಾರಾಟಗಾರರು ಹಾಗೂ ಸಾರ್ವಜನಿಕರೊಂದಿಗೆ ಮಾತನಾಡಿದ ನಿರ್ಮಲಾ ಅವರು ತಮ್ಮ ಮನೆಗೆ ಬೇಕಾದ ತರಕಾರಿಗಳನ್ನು ಇದೇ ವೇಳೆ ಖರೀದಿಸಿದರು. ಒಂದು ದಿನದ ಪ್ರವಾಸಕ್ಕಾಗಿ ಹಣಕಾಸು ಸಚಿವೆ ಚೆನ್ನೈಗೆ ತೆರಳಿದ್ದರು. ಇದೇ ವೇಳೆ ಅವರು ಅನಿರೀಕ್ಷಿತವಾಗಿ ತರಕಾರಿ ಮಾರುಕಟ್ಟೆ ಬಳಿ ವಾಹನದಿಂದ ಇಳಿದು ತರಕಾರಿ ಮಾರಾಟಗಾರರ ಜೊತೆ ಮಾತುಕತೆ ನಡೆಸಿದ್ದಲ್ಲದೇ ತಮ್ಮ ಮನೆಗೆ ಸ್ವಲ್ಪ ತರಕಾರಿಯನ್ನು ಖರೀದಿಸಿದರು. ಸಚಿವರು ಮಾರುಕಟ್ಟೆಯಲ್ಲಿ ಜನ ಸಾಮಾನ್ಯರಂತೆ ತರಕಾರಿ ಖರೀದಿಸುತ್ತಿರುವ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Scroll to load tweet…

ಚೆನ್ನೈ (Chennai) ಭೇಟಿ ವೇಳೆ ನಿರ್ಮಲಾ ಸೀತಾರಾಮನ್ ಅವರು ಮೈಲಾಪೊರ್ ಮಾರ್ಕೆಟ್‌ಗೆ (Mylapore market) ಭೇಟಿ ನೀಡಿ, ತರಕಾರಿ ವ್ಯಾಪಾರಸ್ಥರ ಜೊತೆ, ಅಲ್ಲಿನ ಸ್ಥಳೀಯ ನಿವಾಸಿಗಳ ಜೊತೆ ಮಾತುಕತೆ ನಡೆಸಿದರು. ಜೊತೆಗೆ ತರಕಾರಿ ಖರೀದಿಸಿದರು ಎಂದು ಬರೆದು ನಿರ್ಮಲಾ ಸೀತಾರಾಮನ್ ಅವರ ಅಧಿಕೃತ ಖಾತೆಯಿಂದ ವಿಡಿಯೋವೊಂದನ್ನು ಪೋಸ್ಟ್‌ ಮಾಡಲಾಗಿದೆ.

ಬಲಿಷ್ಠ ಭಾರತಕ್ಕೆ ಕರ್ನಾಟಕದ ಕೊಡುಗೆ ಬೇಕು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌

ಈ ವಿಡಿಯೋ ನೋಡಿದ ಒಬ್ಬರು ಹಣಕಾಸು ಸಚಿವರದ್ದು ಎಂಥಹಾ ಸರಳತೆ. ಹಣಕಾಸು ಸಚಿವರೊಬ್ಬರು ನೇರವಾಗಿ ತರಕಾರಿ ಮಾರಾಟಗಾರರಿಂದ ತರಕಾರಿ ಖರೀದಿಸಿದ್ದನ್ನು ಹಿಂದೆಂದೂ ನೋಡಿಲ್ಲ. ಇದು ಖಂಡಿತವಾಗಿಯೂ ನಾವು ಸುರಕ್ಷಿತವಾದ ಕೈಯಲ್ಲಿದ್ದೇವೆ ಎಂಬ ಭಾವನೆಯನ್ನು ನೀಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಇನ್ನೊಬ್ಬ ಬಳಕೆದಾರರು, ಇದರಲ್ಲೇನೂ ದೊಡ್ಡ ವಿಚಾರವಿಲ್ಲ. ಇಲ್ಲಿ ಊಹೆ ಮಾಡದ್ದು ಏನಿದೆ, ನಾವು ಭಾರತದಲ್ಲಿ ಜನ ಪ್ರತಿನಿಧಿಗಳನ್ನು ದೇವರಂತೆ ಮಾಡಿದ್ದೇವೆ. ಎಲ್ಲಾ ರಾಜಕಾರಣಿಗಳು ಸಾಮಾನ್ಯ ನಾಗರಿಕರಂತೆ ಬದುಕಬೇಕು ಮತ್ತು ವರ್ತಿಸಬೇಕು ಆದರೆ ಭಾರತೀಯ ಪ್ರಜಾಪ್ರಭುತ್ವದ ಭ್ರಮೆ ಬೇರೆ ಎಂದು ಬರೆದಿದ್ದಾರೆ.

Scroll to load tweet…

ಭಾರತದ ಸಾಧನೆ ಬಗ್ಗೆ ಹೆಚ್ಚು ಸಕಾರಾತ್ಮಕವಾಗಿರಿ: ನಿರ್ಮಲಾ ಸೀತಾರಾಮನ್

ಸೀತಾರಾಮನ್ ಅವರು ವಿಶೇಷ ಚೇತನ ಮಕ್ಕಳಿಗಾಗಿ ತಮಿಳುನಾಡಿನ ಅಂಬತ್ತೂರು ಜಿಲ್ಲೆಯ (Ambattur district) ಚೆನ್ನೈನಲ್ಲಿ ಆನಂದ ಕರುಣಾ ವಿದ್ಯಾಲಯಮ್ ಅನ್ನು ತೆರೆದಿದ್ದಾರೆ. ವಿಶೇಷ ಚೇತನ ಮಕ್ಕಳಿಗೆ (children) ವಿಶೇಷ ಆರೈಕೆ ನೀಡಲು ಸಾಧ್ಯವಾಗದ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಗಮನದಲ್ಲಿರಿಸಿಕೊಂಡು ಹಾಗೂ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಆಟಿಸಂನಿಂದ (autism) ಬಳಲುವ ಮಕ್ಕಳಿಗೆ, ಡಿಸ್ಲೆಕ್ಸಿಯಾ ಮತ್ತು ನಿಧಾನ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳಿಗಾಗಿ 2018 ರಲ್ಲಿ ಈ ಕಲಿಕಾ ಕೇಂದ್ರವನ್ನು ಸ್ಥಾಪಿಸಲಾಯಿತು.