ನಾಳೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್ ಸಮ್ಮಾನ್- 2024 ಪ್ರಶಸ್ತಿ ಪ್ರದಾನ

ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ್ ಸಾವರ್ಕರ್ ವಿಚಾರಧಾರೆಗಳ ಕುರಿತು ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವುಳ್ಳ ಪ್ರತಿಷ್ಠಿತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯನ್ನು ಮೇ 28 ರಂದು 141ನೇ ಸಾವರ್ಕರ್ ಜಯಂತಿಯಂದು ಪ್ರದಾನ ಮಾಡುತ್ತಿದೆ.

Veer Savarkar Samman2024 award for Chakraborty Sulibele tomorrow at mysuru rav

ಮೈಸೂರು (ಮೇ.27)  ನಗರದ ವೀರ್ ಸಾವರ್ಕರ್ ಪ್ರತಿಷ್ಠಾನದಿಂದ ಮೇ.28 ರಂದು ಇಲ್ಲಿನ ಕಲಾಮಂದಿರದಲ್ಲಿ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರವನ್ನು ಆಯೋಜಿಸಲಾದೆ. ಸ್ವಾತಂತ್ರ್ಯ ಸೇನಾನಿ ವಿನಾಯಕ ದಾಮೋದರ್ ಸಾವರ್ಕರ್ ವಿಚಾರಧಾರೆಗಳ ಕುರಿತು ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವುಳ್ಳ ಪ್ರತಿಷ್ಠಿತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯನ್ನು ಮೇ 28 ರಂದು 141ನೇ ಸಾವರ್ಕರ್ ಜಯಂತಿಯಂದು ಪ್ರದಾನ ಮಾಡುತ್ತಿದೆ.

ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸಿ ಅವರನ್ನು ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ - 2024 ಯನ್ನು ನೀಡಲಾಗುತ್ತಿದೆ ಎಂದು ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ; ಚಕ್ರವರ್ತಿ ಸೂಲಿಬೆಲೆ

ಈ ಪ್ರಶಸ್ತಿಯನ್ನು ಮೇ 28ರಂದು ಸಂಜೆ 5.30ಕ್ಕೆ ನಗರದ ಕರ್ನಾಟಕ ಕಲಾಮಂದಿರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ. ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪಾಲ್ಗೊಳ್ಳುವರು. ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಮುಖ್ಯ ಭಾಷಣಕಾರರಾಗಿ ಆಗಮಿಸುವರು. ಮಧ್ಯಾಹ್ನ 2 ಗಂಟೆಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್ ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ, ದ್ವಿತೀಯ ಬಹುಮಾನವಾಗಿ 3 ಸಾವಿರ, ತೃತೀಯ ಬಹುಮಾನವಾಗಿ 1000 ನಗದು ಬಹುಮಾನದ ಜೊತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಸಾವರ್ಕರ್ ಕುರಿತು ಅನೇಕ ಅಧ್ಯಯನ ಮಾಡಿ ಕೃತಿ ರಚಿಸಿರುವ ವಿಕ್ರಂ ಸಂಪತ್ ಅವರಿಗೆ ಕಳೆದ ವರ್ಷ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ- 2023ಯನ್ನು ನೀಡಲಾಗಿತ್ತು.

ಸಾವರ್ಕರ್ ಪ್ರತಿಷ್ಠಾನ ಕಾರ್ಯಕ್ರಮಗಳ ಮೂಲಕ ಸಾವರ್ಕರ್ ವಿಚಾರಧಾರೆಯನ್ನು ಜನರ ಮುಂದಿಡುತ್ತಾ ಬಂದಿದೆ. ಸಾವರ್ಕರ್ ರಥಯಾತ್ರೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ಸಾವರ್ಕರ್ ಕುರಿತ ಮಾಹಿತಿ, ಸಾಹಿತ್ಯ ಹಾಗೂ ಪುಸ್ತಕಗಳ ಮೂಲಕ 10 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು, ಸಾವರ್ಕರ್ ಕುರಿತ ಕನ್ನಡದ ನಾಟಕ ಕರಿನೀರ ವೀರ ರಾಜ್ಯಾದ್ಯಂತ ಅನೇಕ ಪ್ರದರ್ಶನ ನಡೆಸಿ ಜನಮನ ಗೆದ್ದಿದೆ, ವಿದ್ಯಾರ್ಥಿಗಳಿಗಾಗಿ ಸಾವರ್ಕರ್ ಪ್ರಬಂಧ, ಭಾಷಣ, ಚಿತ್ರಕಲೆ ಹೀಗೆ ಅನೇಕ ಸ್ಪರ್ಧೆಗಳನ್ನು ಹಲವಾರು ಶಾಲಾ ಕಾಲೇಜು ಗಳಲ್ಲಿ ಆಯೋಜಿಸಿ ಅವರುಗಳಲ್ಲಿ ಸಾವರ್ಕರ್ ವ್ಯಕ್ತಿ ಹಾಗೂ ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಸಾವರ್ಕರ್ ಪ್ರತಿಷ್ಠಾನ ಮಾಡುತ್ತಿದೆ ಎಂದು ಅವರು ತಿಳಿಸಿದರು.

Chakravarti Sulibele: ಚುನಾವಣೆ ಸ್ಪರ್ಧೆಗೆ ಅವಕಾಶ ಸಿಕ್ಕರೆ ವಿರೋಧ ಇಲ್ಲ: ಚಿಂತಕ ಚಕ್ರವರ್ತಿ ಸೂಲಿಬೆಲೆ

 

ಈ ಕಾರ್ಯಕ್ರಮ ಕುರಿತು ಹೆಚ್ಚಿನ ಮಾಹಿತಿಗೆ ರಾಕೇಶ್ಭಟ್ ಮೊ. 99162 21184, ರಜತ್ 63634 43699, ಶಿವಕುಮಾರ್ 86602 19746 ಸಂಪರ್ಕಿಸಬುಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಸದಸ್ಯರಾದ ಶಿವಕುಮಾರ್ ಚಿಕ್ಕಕಾನ್ಯ, ಕೆ.ಎಂ. ನಿಶಾಂತ್, ಟಿ.ಎಸ್. ಅರುಣ್ ಹಾಗೂ ಟಿ.ಪಿ. ಮಧುಸೂದನ್ ಇದ್ದರು.

Latest Videos
Follow Us:
Download App:
  • android
  • ios