ಕಾಶ್ಮೀರ ಫೈಲ್ಸ್ ಚಿತ್ರ ನೋಡಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಪೊಲೀಸರು ಕಂಡ ಸತ್ಯಾಂಶವೇ ಬೇರೆ!
ಇತ್ತೀಚೆಗೆ ಉತ್ತರ ಕನ್ನಡದ ಹಳಿಯಾಳದಲ್ಲಿ ನಡೆದ ಘಟನೆಯಲ್ಲಿ ಮುಸ್ಲಿಂ ಯುವಕನ ಮೇಲೆ ಹಿಂದೂ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ಮಾಡಿದ್ದರು. ಕಾಶ್ಮೀರ ಫೈಲ್ಸ್ ಚಿತ್ರ ನೋಡಿ ಮರಳುತ್ತಿದ್ದ ವ್ಯಕ್ತಿ ಈ ರೀತಿ ಹಲ್ಲೆ ಮಾಡಿದ್ದಾನೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಘಟನೆಯನ್ನು ವೈರಲ್ ಮಾಡಲಾಗಿತ್ತು. ಅಸಲಿಗೆ ಪ್ರಕರಣದ ಸತ್ಯಾಂಶವೇ ಬೇರೆ ಆಗಿದೆ.
ಉತ್ತರ ಕನ್ನಡ (ಏ. 16): ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ದಿ ಕಾಶ್ಮೀರ ಫೈಲ್ಸ್ (The Kashmir Files) ಚಿತ್ರವನ್ನು ನೋಡಿ ಬರುತ್ತಿದ್ದ ಹಿಂದೂ ವ್ಯಕ್ತಿಯೊಬ್ಬ, 18 ವರ್ಷದ ಮುಸ್ಲಿಂ ಯುವಕನಿಗೆ ಚಾಕುವಿನಿಂದ ಇರಿದ ಸುದ್ದಿ ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಆದರೆ, ಈ ಪ್ರಕರಣದ ಸತ್ಯಾಸತ್ಯತೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಫ್ಯಾಕ್ಟ್ ಚೆಕ್ (Fact Check) ಮಾಡಿದ ಪೊಲೀಸರು (Karnataka Police) ಇದು ಬೇರೆಯ ಪ್ರಕರಣ ಎಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ತೇರ್ಗಾಂವ್ (Tergaovn)ಗ್ರಾಮದಲ್ಲಿ ಬುಧವಾರ ಸಂಜೆ 18 ವರ್ಷದ ಅಮಾನುಲ್ಲಾ ಇರ್ಫಾನ್ ಎನ್ನುವ ಯುವಕನ ಮೇಲೆ 30 ವರ್ಷದದ ಹೊನ್ನಪ್ಪ ಭೋವಿ ಎನ್ನುವವರು ಸಣ್ಣ ಚಾಕುವಿನಿಂದ ಕತ್ತಿನ ಭಾಗಕ್ಕೆ ಹಲ್ಲೆ ಮಾಡಿದ್ದರು. ರಾಜ್ಯದಲ್ಲಿ ಕಾಶ್ಮೀರ ಫೈಲ್ಸ್ ಚಿತ್ರದ ಕ್ರೇಜ್ ಹೆಚ್ಚಾಗಿ ಓಡುತ್ತಿದ್ದ ಕಾರಣಕ್ಕೆ ಇಡೀ ಪ್ರಕರಣದ ಸತ್ಯಾಂಶವನ್ನು ತಿರುಚಿ ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ ಮಾಡಲಾಗಿತ್ತು. ಕಾಶ್ಮೀರ ಫೈಲ್ಸ್ ಚಿತ್ರ ನೋಡಿ ಹಿಂದೂ ವ್ಯಕ್ತಿ, ಮುಸ್ಲಿಂ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಪ್ರಕರಣವನ್ನು ತಿರುಚಲಾಗಿತ್ತು. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಈ ಪ್ರಕರಣದ ಫ್ಯಾಕ್ಟ್ ಚೆಕ್ ಮಾಡಿದ ಕರ್ನಾಟಕ ಪೊಲೀಸರು, ಒಟ್ಟಾರೆ ಘಟನೆಯ ಸತ್ಯಾಂಶವನ್ನು ಹೊರಗೆ ಎಳೆದಿದ್ದಾರೆ.
ಹಲ್ಲೆಗೆ ಕಾರಣವೇನು?: ಪ್ರಚೋದನಕಾರಿ ಫೋಸ್ಟ್ ಹಾಕಿ ವೈರಲ್ ಮಾಡಿದ್ದ ಕಿಡಿಗೇಡಿಗಳು. ಆದರೆ ಪೊಲೀಸರ ತನಿಖೆ ವೇಳೆ ಇಡೀ ಪ್ರಕರಣದ ಅಸಲಿ ಸತ್ಯವೇ ಬೇರೆಯಾಗಿತ್ತು. ಹೊನ್ನಪ್ಪ ಎಂಬ ಯುವಕ ಅಮನುಲ್ಲಾ ಷರೀಫ್ ಗೆ ಚಾಕು ಇರಿದು ಹಲ್ಲೆ ಮಾಡಿದ್ದ. ಹೊನ್ನಪ್ಪನ ತಾಯಿಗೆ ಅಮಾನುಲ್ಲಾ ಷರೀಫ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ. ಇದರಿಂದ ಸಿಟ್ಟಾಗಿದ್ದ ಹೊನ್ನಪ್ಪ 18 ವರ್ಷದ ಅಮಾನುಲ್ಲಾ ಷರೀಫ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಈ ಸಂಬಂಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ನಿಜಾಂಶವನ್ನು ಬದಿಗಿಟ್ಟಿದ್ದ ಕಿಡಿಗೇಡಿಗಳು. ಪ್ರಚೋದನಕಾರಿ ಪೋಸ್ಟ್ ಹಾಕಿ ಇಡೀ ಪ್ರಕರಣ ಬೇರೆ ತಿರುಗುವಂತೆ ಮಾಡಿದ್ದರು.
ವೈರಲ್ ಫೋಸ್ಟ್ ನ ಸತ್ಯಾಂಶ ಪತ್ತೆ ಹಚ್ಚಲು ರಾಜ್ಯ ಪೊಲೀಸರು ತ್ವರಿತವಾಗಿ ಫ್ಯಾಕ್ಟ್ ಚೆಕ್ ಮಾಡಿದಾಗ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಫ್ಯಾಕ್ಟ್ ಚೆಕ್ ಮಾಡಿ ಕೆಎಸ್ ಪಿ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಿದ ಪೊಲೀಸರು. ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಫೋಸ್ಟ್ ಹಾಕಿದವರ ಮೇಲೆ ಕ್ರಮಕ್ಕೆ ಸೂಚನೆ ನೀಡಲಾಗಿದೆ.
Fact Check: ಪ್ರಧಾನಮಂತ್ರಿ ಕಲ್ಯಾಣ ನಿಧಿಗೆ ಕಾಶ್ಮೀರ ಫೈಲ್ಸ್ ತಂಡ ₹200 ಕೋಟಿ ದೇಣಿಗೆ ನೀಡಿದ್ದು ಸುಳ್ಳು
ಈ ನಡುವೆ ಚಿತ್ರತಂಡಕ್ಕೂ ಸುಳ್ಳು ಸುದ್ದಿಗಳು ಕಾಡಿವೆ. ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಅಭಿನಯಿಸಿರುವ ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಕಾಶ್ಮೀರಿ ಪಂಡಿತರ ನರಮೇಧ ಬಿಂಬಿಸುವ ‘ಕಾಶ್ಮೀರ್ ಫೈಲ್ಸ್’ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಕಾನೂನಾತ್ಮಕ ಅಡೆತಡೆಗಳನ್ನು ಎದುರಿಸಿಯೂ ನಿಗದಿಯಂತೆ ಮಾ.11ರಂದು ಸೀಮಿತ ಸಂಖ್ಯೆಯ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರ ದೇಶಾದ್ಯಂತ ಭಾರೀ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿತ್ತು. ಅನೇಕ ವಿವಾದಗಳ ನಡುವೆಯೂ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಶನ್ ಮಾಡಿದೆ.
Kashmir Files ಆಯ್ತು ಇದೀಗ 'ದಿ ದೆಹಲಿ ಫೈಲ್ಸ್' ಸಿನಿಮಾ ಘೋಷಿಸಿದ ಅಗ್ನಿಹೋತ್ರಿ
ಈ ನಡುವೆ, "ಭರವಸೆಯಂತೆ 200 ರೂಪಾಯಿಗಳನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ದೇಣಿಗೆ ನೀಡಲಾಗಿದೆ" ಎಂಬ ಹೇಳಿಕೆಯೊಂದಿಗೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟಿ ಪಲ್ಲವಿ ಜೋಷಿ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ ದಿ ಕಾಶ್ಮೀರ್ ಫೈಲ್ಸ್ ತಂಡವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ನಿಜ ಆದರೆ ಪ್ರಧಾನಮಂತ್ರಿ ನಿಧಿಗೆ ನಿರ್ಮಾಪಕರು 200 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಹೇಳುವ ವೈರಲ್ ಪೋಸ್ಟ್ ಸುಳ್ಳು ಎಂದು ಫ್ಯಾಕ್ಟ್ ಚೆಕ್‌ನಲ್ಲಿ ತಿಳಿದು ಬಂದಿದೆ.