Asianet Suvarna News Asianet Suvarna News

15 ವರ್ಷದಿಂದ ಅನಾರೋಗ್ಯ ರಜೇಲಿದ್ರೂ ಸಂಬಳ ಜಾಸ್ತಿ ಮಾಡಿಲ್ಲ ಅಂತ ಕಂಪನಿ ವಿರುದ್ಧ ಕೇಸ್‌ ಹಾಕಿದ ಉದ್ಯೋಗಿ!

2008 ರಿಂದ ಅನಾರೋಗ್ಯ ರಜೆಯಲ್ಲಿರುವ ಹಿರಿಯ ಐಟಿ ವೃತ್ತಿಪರ ತಮ್ಮ ಕಂಪನಿ ತಮಗೆ ತಾರತಮ್ಯ ಮಾಡ್ತಿದ್ದಾರೆಂದು ಸಂಸ್ಥೆಯ ವಿರುದ್ಧವೇ ಕೇಸ್‌ ಹಾಕಿದ್ದಾರೆ.

ibm employee on sick leave for past 15 years sues company for no salary hike ash
Author
First Published May 15, 2023, 2:29 PM IST

ವಾಷಿಂಗ್ಟನ್‌ ಡಿಸಿ (ಮೇ 15, 2023): ಕಂಪನಿಯಲ್ಲಿ ಕೆಲಸ ಮಾಡೋರಿಗೆ ಅದ್ರಲ್ಲೂ ಐಟಿ ಅಥವಾ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ ವರ್ಷಕ್ಕೊಮ್ಮೆ ಅಥವಾ 2 ಬಾರಿ ಸಂಬಳ ಜಾಸ್ತಿ ಮಾಡ್ಲಿ, ಇತರೆ ಸವಲತ್ತುಗಳು ಕೊಡ್ಬೇಕು ಅಂತ ಇಚ್ಚಿಸ್ತಾರೆ, ಹಾಗೂ ಹಲವರು ಡಿಮ್ಯಾಂಡ್‌ ಕೂಡ ಮಾಡ್ತಾರೆ. ಆದರೆ, ಇಲ್ಲೊಬ್ಬರು ಉದ್ಯೋಗಿ 15 ವರ್ಷಗಳಿಂದಲೂ ಅನಾರೋಗ್ಯ ರಜೆಯಲ್ಲಿದ್ರೂ ತಮ್ಮ ಕಂಪನಿಯ ವಿರುದ್ಧ ಕೇಸ್‌ ಹಾಕಿದ್ದಾರೆ.

ಹೌದು,  2008 ರಿಂದ ಅನಾರೋಗ್ಯ ರಜೆಯಲ್ಲಿರುವ ಹಿರಿಯ ಐಟಿ ವೃತ್ತಿಪರ ತಮ್ಮ ಕಂಪನಿ ತಮಗೆ ತಾರತಮ್ಯ ಮಾಡ್ತಿದ್ದಾರೆಂದು ಸಂಸ್ಥೆಯ ವಿರುದ್ಧವೇ ಕೇಸ್‌ ಹಾಕಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ. IBM ನಲ್ಲಿ ಕೆಲಸ ಮಾಡುತ್ತಿರುವ ಇಯಾನ್ ಕ್ಲಿಫರ್ಡ್ ಅವರು ಕಳೆದ 15 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಅವರು 2013 ರಿಂದ 'ವೈದ್ಯಕೀಯವಾಗಿ ನಿವೃತ್ತರಾಗಿದ್ದಾರೆ' ಎಂದು ಅವರ ಲಿಂಕ್ಡ್‌ಇನ್ ಪ್ರೊಫೈಲ್ ಹೇಳುತ್ತದೆ.

ಇದನ್ನು ಓದಿ: ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದ ಭೂಮಿ ಖರೀದಿಸಿದ ಐಫೋನ್‌ ತಯಾರಕ ಫಾಕ್ಸ್‌ಕಾನ್: 1 ಲಕ್ಷ ಉದ್ಯೋಗ ಸೃಷ್ಟಿ!

ಆದರೂ, ಕೆಲಸ ಮಾಡಲು ಸಾಧ್ಯವಾಗದ 15 ವರ್ಷಗಳಿಂದ ತನ್ನ ಆದಾಯವು ಸುಧಾರಿಸದ ಕಾರಣ ತಾನು "ಅಂಗವೈಕಲ್ಯ ತಾರತಮ್ಯ" ಕ್ಕೆ ಒಳಗಾಗಿದ್ದೇನೆ ಎಂದು ಅವರು ಹೇಳಿದರು. IBM ಆರೋಗ್ಯ ಯೋಜನೆಯಡಿಯಲ್ಲಿ ಐಇಟ ಪರಿಣತರು ವರ್ಷಕ್ಕೆ 54,000 ಪೌಂಡ್‌ಗಳಿಗಿಂತ ಹೆಚ್ಚು (US$67,300) ಗಳಿಸುವ ಭರವಸೆ ಇದೆ ಮತ್ತು 65 ನೇ ವಯಸ್ಸಿನವರೆಗೆ ಇದನ್ನು ಪಡೆಯುತ್ತಾರೆ. ಆದರೆ, ಆರೋಗ್ಯ ಯೋಜನೆಯು ''ಸಾಕಷ್ಟು ಉದಾರವಾಗಿಲ್ಲ'' ಎಂದು ಉದ್ಯೋಗಿ ಪ್ರತಿವಾದಿಸಿದ್ದಾರೆ. ಹಾಗೂ, ಹಣದುಬ್ಬರದಿಂದಾಗಿ ತನ್ನ ಆದಾಯವು ಕುಸಿಯುತ್ತದೆ ಎಂದೂ ಅವರು ಆರೋಪಿಸಿದ್ದಾರೆ.

ಇಯಾನ್‌ ಕ್ಲಿಫರ್ಡ್ ಆರಂಭದಲ್ಲಿ ಸೆಪ್ಟೆಂಬರ್ 2008 ರಲ್ಲಿ ಅನಾರೋಗ್ಯ ರಜೆ ತೆಗೆದುಕೊಂಡಿದ್ದರು. ಮತ್ತು ಅವರು 2013 ರಲ್ಲಿ ದೂರು ಸಲ್ಲಿಸುವವರೆಗೂ ಪರಿಸ್ಥಿತಿಯು ಹಾಗೆಯೇ ಇತ್ತು. ಅವರ ದೂರಿಗೆ ಪ್ರತಿಕ್ರಿಯೆಯಾಗಿ, IBM ಅವರ ಜತೆ "ರಾಜಿ ಒಪ್ಪಂದ" ಮಾಡಿಕೊಂಡಿದೆ. ಈ ಪೈಕಿ ಅವರನ್ನು ಸಂಸ್ಥೆಯಿಂದ ವಜಾ ಮಾಡುವ ಬದಲು ಕಂಪನಿಯ ಅಂಗವೈಕಲ್ಯ ಯೋಜನೆಗೆ ಸೇರಿಸಲಾಯಿತು. ಈ ಯೋಜನೆಯಡಿಯಲ್ಲಿ ಕೆಲಸ ಮಾಡಲು ಸಾಧ್ಯವಾಗದ ಕೆಲಸಗಾರನನ್ನು ವಜಾ ಮಾಡಲಾಗುವುದಿಲ್ಲ; ಬದಲಾಗಿ, ಅವರನ್ನು ಇನ್ನೂ ಉದ್ಯೋಗಿಗಳೆಂದೇ ಪರಿಗಣಿಸಲಾಗುತ್ತದೆ ಮತ್ತು ಅವರು ಕೆಲಸ ಮಾಡಲೇಬೇಕೆಂದೇನಿಲ್ಲ ಎಂಬುದು ಆ ಸಂಸ್ಥೆಯ ನಿಯಮ.

ಇದನ್ನೂ ಓದಿ: ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ, ಮಾನವೀಯತೆಗೆ ಡೇಂಜರ್‌ : ಗೂಗಲ್‌ನಿಂದ ಹೊರಬಂದ AI ಜನಕ

ಈ ಯೋಜನೆಯಲ್ಲಿರುವ ಉದ್ಯೋಗಿ ಚೇತರಿಸಿಕೊಳ್ಳುವವರೆಗೆ, ನಿವೃತ್ತಿ ಅಥವಾ ಅವರ ಮರಣದವರೆಗೆ (ಯಾವುದು ಮೊದಲು ಸಂಭವಿಸುತ್ತದೋ) 75% ರಷ್ಟು ಒಪ್ಪಿಕೊಂಡ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇನ್ನು, ಇಯಾನ್‌ ಕ್ಲಿಫರ್ಡ್‌ ಅವರ ಪ್ರಕರಣದಲ್ಲಿ, ಒಪ್ಪಿಗೆ ನೀಡಿದ ಪರಿಹಾರವು 72,037 ಪೌಂಡ್‌ಗಳು. ಅಂದರೆ 2013 ರಿಂದ ಪ್ರಾರಂಭಿಸಿ, ಅವರು 25% ಕಡಿತದ ನಂತರ 54,028 ಪೌಂಡ್‌ಗಳನ್ನು ಸ್ವೀಕರಿಸಿದ್ದಾರೆ. ಅವರು 65 ವರ್ಷ ವಯಸ್ಸಿನವರೆಗೆ ಮತ್ತು ನಿವೃತ್ತಿಗೆ ಅರ್ಹರಾಗುವವರೆಗೆ ಇದೇ ಸಂಬಳ ಬರುತ್ತದೆ (ಅನಾರೋಗ್ಯದ ರಜೆಯಡಿ).

ಈ ಹಿನ್ನೆಲೆ ಇಯಾನ್ ಕ್ಲಿಫರ್ಡ್ ಫೆಬ್ರವರಿ 2022 ರಲ್ಲಿ IBM ವಿರುದ್ಧ ಉದ್ಯೋಗ ನ್ಯಾಯಮಂಡಳಿಯ ಮುಂದೆ ಅಂಗವಿಕಲತೆಯ ತಾರತಮ್ಯವನ್ನು ಆರೋಪಿಸಿ ಮೊಕದ್ದಮೆ ಹೂಡಿದರು. "ಕೆಲಸ ಮಾಡಲಾಗದ ಉದ್ಯೋಗಿಗಳಿಗೆ ಭದ್ರತೆಯನ್ನು ಒದಗಿಸುವುದು; ಪಾವತಿಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದರೆ ಅದನ್ನು ಸಾಧಿಸಲಾಗುವುದಿಲ್ಲ" ಎಂದೂ ಅರೋಪಿಸಿದರು. 

ಇದನ್ನೂ ಓದಿ: Bengaluru: ಥಿಯೇಟರ್‌ನಲ್ಲಿ ‘ವರ್ಕ್‌ ಫ್ರಂ ಹೋಮ್‌’ ಮಾಡ್ತಿರೋ ಭೂಪ: ಐಟಿ ಸಿಟಿಯಲ್ಲಿ ಮಾತ್ರ ಸಾಧ್ಯ ಅಂತಾರೆ ನೆಟ್ಟಿಗರು!

ಆದರೆ, ಅವರ ವಾದವನ್ನು ಉದ್ಯೋಗ ನ್ಯಾಯಮಂಡಳಿಯು ತಿರಸ್ಕರಿಸಿದ್ದು, ಕಂಪನಿಯು ಉದ್ಯೋಗಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿದೆ, ಮತ್ತು ಅನುಕೂಲಕರವಾದ ಸಂಬಳವನ್ನೂ ನೀಡುತ್ತಿದೆ. ಮತ್ತು ಬಹಳ ಗಣನೀಯ ಪ್ರಯೋಜನವನ್ನು ಪಡೆದಿದ್ದಾರೆ ಎಂದೂ ಜಡ್ಜ್‌ ಅಭಿಪ್ರಾಯ ಪಟ್ಟರು. 

ಇದನ್ನೂ ಓದಿ: Shocking: ಕೃತಕ ಬುದ್ಧಿಮತ್ತೆಯಿಂದ 30 ಕೋಟಿ ಉದ್ಯೋಗ ನಷ್ಟ: ಗೋಲ್ಡ್‌ಮನ್‌ ಸ್ಯಾಚ್ಸ್ ಭವಿಷ್ಯ

Follow Us:
Download App:
  • android
  • ios