ಬೆಂಗಳೂರು(ಅ. 30): ರಸ್ತೆಬದಿ ಬಿದ್ದಿದ್ದ ವಾರಸುದಾರರಿಲ್ಲದ ಸೂಟ್‌ಕೇಸ್‌ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಸ್ಥಳಕ್ಕೆ ಬಾಂಬ್‌ ನಿಷ್ಕ್ರಿಯದಳ ಮತ್ತು ಶ್ವಾನದಳ ಪರಿಶೀಲನೆ ಬಳಿಕ ಸೂಟ್‌ಕೇಸ್‌ನಲ್ಲಿ ಯಾವುದೇ ವಸ್ತುಗಳಿಲ್ಲ ಎಂಬುದು ತಿಳಿದಾದ ನಂತರ ಸಾರ್ವಜನಿಕರು ನಿಟ್ಟುಸಿರು ಬಿಟ್ಟರು.

ಮಂಗಳವಾರ ಮಧ್ಯಾಹ್ನ 3.30ರಲ್ಲಿ ಸ್ಥಳೀಯರು ‘ನಮ್ಮ-100’ಗೆ ಕರೆ ಮಾಡಿ ರಾಜಾಜಿನಗರ ಕೈಗಾರಿಕಾ ಪ್ರದೇಶ 76ನೇ ಅಡ್ಡರಸ್ತೆಯಲ್ಲಿ ವಾರಸುದಾರರು ಇಲ್ಲದ ಹೊಸ ಸೂಟ್‌ಕೇಸ್‌ ಪತ್ತೆಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಸಮುದ್ರದಲ್ಲಿ ಮುಳುಗಿ ಬೆಂಗಳೂರಿನ ನಾಲ್ವರು ಸಾವು

ನಮ್ಮ-100ನಿಂದ ಬಂದ ಮಾಹಿತಿ ಮೇರೆಗೆ ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಸೂಟ್‌ಕೇಸ್‌ ಇದ್ದ ಪ್ರದೇಶವನ್ನು ಸುತ್ತುವರೆದು ಯಾರು ಪ್ರವೇಶಿಸದಂತೆ ನಿರ್ಬಂಧಿಸಿದರು. ಅಷ್ಟೊತ್ತಿಗೆ ಪಶ್ಚಿಮ ವಿಭಾಗ ಡಿಸಿಪಿ ಬಿ. ರಮೇಶ್‌, ಭೇಟಿ ಕೊಟ್ಟು ಶ್ವಾನ ದಳ ಮತ್ತು ಬಾಂಬ್‌ ನಿಷ್ಕಿ್ರಯ ದಳದ ಸಿಬ್ಬಂದಿಗೆ ಸ್ಥಳಕ್ಕೆ ಬರುವಂತೆ ಸೂಚಿಸಿದರು.

ತಜ್ಞರು ಬಂದು ಸೂಟ್‌ಕೇಸ್‌ ಪರಿಶೀಲನೆ ನಡೆಸಿ ಅದರಲ್ಲಿ ಸ್ಫೋಟಕ ವಸ್ತು ಇಲ್ಲವೆಂದು ಖಚಿತ ಪಡಿಸಿಕೊಂಡ ಬಳಿಕ ತೆರೆದು ಮಾಡಿದಾಗ ಖಾಲಿಯಾಗಿತ್ತು. ಮೂರು ತಾಸಿನ ಬಳಿಕ ಪೊಲೀಸರು ಮತ್ತು ಸಾರ್ವಜನಿಕರು ಆತಂಕ ನಿವಾರಣೆ ಆಯಿತು.

ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'!