Asianet Suvarna News

ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'!

2ನೇ ಮಗುವಿನ ತಾಯಿಯಾದ ರಾಧಿಕಾ | ಸಂಭ್ರಮದಲ್ಲಿ ರಾಕಿಂಗ್​ ದಂಪತಿ | ಯಶ್ ಕುಟುಂಬಕ್ಕೆ ಮತ್ತೊಂದು ಮಗು ಸಂಭ್ರಮ | ರಾಕಿಂಗ್​ ಕುಟುಂಬಕ್ಕೆ ಹೊಸ ಸದಸ್ಯರ ಎಂಟ್ರಿ
 

Radhika Pandit Yash blessed with baby boy
Author
Bengaluru, First Published Oct 30, 2019, 9:42 AM IST
  • Facebook
  • Twitter
  • Whatsapp

ಬೆಂಗಳೂರು (ಅ. 30): ರಾಧಿಕಾ ಯಶ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಪುಟಾಣಿ ಐರಾ ಅಕ್ಕ ಆಗಿದ್ದಾಳೆ. ಯಶ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಐರಾಗೆ ಸಿಗದ ಅಂಬಿ ಗಿಫ್ಟ್: ಯಶ್ 2 ನೇ ಮಗೂಗೆ ಆ ಅದೃಷ್ಟ! 

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ - ಮಗ ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. 

2018 ಡಿಸಂಬರ್ 2 ರಂದು ಐರಾ ಜನಿಸಿದ್ದಳು. ಒಂಭತ್ತು ತಿಂಗಳೊಳಗಾಗಿ ಇನ್ನೊಂದು ಮಗುವಿನ ಆಗಮನವಾಗಿದೆ. 

'ಆದಿಲಕ್ಷ್ಮಿ ಪುರಾಣ' ಚಿತ್ರದ ಪ್ರೆಸ್ ಮೀಟ್ ನಲ್ಲಿ ದೊಡ್ಡಣ್ಣ ಈ ಸಲ ಗಂಡು ಮಗು ಹುಟ್ಟುತ್ತದೆ ಅಂದಿದ್ದರು. ನಟಿ ತಾರಾ ಅದೇ ಪ್ರೆಸ್ ಮೀಟ್ ಅಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅಂತಲೂ ಹಾರೈಸಿದ್ದರು. ಹಿರಿಯ ನಟ ದೊಡ್ಡಣ್ಣನ ಭವಿಷ್ಯ ನಿಜವಾಗಿದೆ. ನಂದಗೋಕುಲಕ್ಕೆ 'ಕೃಷ್ಣ' ಬಂದಿದ್ದಾನೆ. 

"

ಮೊಮ್ಮಗ ಬಂದ ಖುಷಿಯನ್ನ ಹಂಚಿಕೊಂಡ ಯಶ್ ತಾಯಿ ಪುಷ್ಪ, 'ಮೊಮ್ಮಗ‌ ಹುಟ್ಟಿರೋದು ಖುಷಿ ತಂದಿದೆ. ಮೊಮ್ಮಗ ಯಶ್ ನಂತೆಯೇ ಕಾಣುತ್ತಾನೆ. ಇಂದು ಮತ್ತು ನಾಳೆ ಡೇಟ್ ಕೊಟ್ಟಿದ್ರು ಆದ್ರೆ ಇವತ್ತು 9 ಗಂಟೆಗೆ ಡೆಲಿವರಿ ಆಗಿದೆ. ರಾಧಿಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ನಮ್ಮ ಮೇಲೆ‌ ನೀವೆಲ್ಲ‌ ಇಟ್ಟಿರೋ ಪ್ರೀತಿಯನ್ನೇ ನಮ್ಮ ಮೊಮ್ಮಕ್ಕಳಿಗೂ ಕೊಡಿ' ಎಂದಿದ್ದಾರೆ. 

ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಡಾಕ್ಟರ್ ಸ್ವರ್ಣಾ ಮಾತನಾಡಿದ್ದಾರೆ.  ತಾಯಿ,ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ 3 ಕೆಜಿ ತೂಕ ಇದೆ.  ಐರಾಳಂತೆಯೇ ಇದ್ದಾನೆ ಯಶ್ ಎರಡನೇ ಮಗು. ಮೊದಲನೆಯದ್ದು ಸಿಸೇರಿಯನ್, ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್. ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ.  ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ.   ಇನ್ನೂ ಮೂರು ದಿನಗಳಲ್ಲಿ ಡಿಸ್ ಚಾರ್ಜ್ ಮಾಡುತ್ತೇವೆ ಎಂದಿದ್ದಾರೆ.  

ಅಕ್ಟೋಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios