Asianet Suvarna News Asianet Suvarna News

ಡಿ.31ರ ಸಂಜೆ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ಅಮಿತ್‌ ಶಾ ಭೇಟಿ

ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಾಳೆ ಸಂಜೆ 5.00 ಗಂಟೆಗೆ ಬೆಂಗಳೂರಿನ ಆದಮ್ಯಚೇತನದ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ಭೇಟಿ ನೀಡಲಿದ್ದಾರೆ. ಅದಮ್ಯಚೇತನ ಸಂಸ್ಥೆ ಆಯೋಜಿಸಿರುವ 'ಅನಂತ  ಉತ್ಸವ'ದಲ್ಲಿ ಭಾಗಿಯಾಗಲಿದ್ದಾರೆ.

Union home minister Amit Shah will visit Ananthakumar Foundation Adamya Chetana on December 31 gow
Author
First Published Dec 30, 2022, 10:09 PM IST

ಬೆಂಗಳೂರು (ಡಿ.30): ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಾಳೆ ಸಂಜೆ 5.00 ಗಂಟೆಗೆ ಬೆಂಗಳೂರಿನ ಆದಮ್ಯಚೇತನದ ಅನಂತಕುಮಾರ್‌ ಪ್ರತಿಷ್ಠಾನಕ್ಕೆ ಭೇಟಿ ನೀಡಲಿದ್ದಾರೆ. ಅದಮ್ಯಚೇತನ ಸಂಸ್ಥೆ ಆಯೋಜಿಸಿರುವ 'ಅನಂತ  ಉತ್ಸವ'ದಲ್ಲಿ ಭಾಗಿಯಾಗಲಿದ್ದಾರೆ. ಅದಮ್ಯ ಚೇತನದ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್‌ ಅವರ ಆಹ್ವಾನ‌ ಹಿನ್ನೆಲೆಯಲ್ಲಿ  ಕಾರ್ಯಕ್ರಮಕ್ಕೆ ಬರಲು ಅಮಿತ್ ಷಾ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕಾರ್ಯಕ್ರಮ ಮುಗಿಸಿ  ಅಮಿತ್ ಷಾ ದೆಹಲಿಗೆ ವಾಪಸ್ ಆಗಲಿದ್ದಾರೆ.

ಕೃಷ್ಣಾ-ಮಹದಾಯಿ ನೀರಿನಿಂದ ಜನರ ದೂರವಿಟ್ಟ ಮೋದಿ, ಶಾ
ಹುಬ್ಬಳ್ಳಿ: ಕೃಷ್ಣಾ ಹಾಗೂ ಮಹದಾಯಿ ನೀರಿನಿಂದ ಕರ್ನಾಟಕದ ಜನತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ದೂರವಿಟ್ಟಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ . 40 ಸಾವಿರ ಕೋಟಿ, ಮಹದಾಯಿ ಯೋಜನೆಗೆ . 3 ಸಾವಿರ ಕೋಟಿ ಅನುದಾನ ಒದಗಿಸಲಾಗುವುದು. ಅದರಲ್ಲಿ . 500 ಕೋಟಿಯನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನೀಡಲಾಗುವುದು ಎಂದು ಭರವಸೆ ನೀಡಿದರು.

ಮಹದಾಯಿ ವಿಚಾರದಲ್ಲಿ ಬಿಜೆಪಿ 8 ವರ್ಷಗಳಿಂದ ಜನರನ್ನು ಮೂರ್ಖರನ್ನಾಗಿಸಿದೆ. ಇದನ್ನು ಖಂಡಿಸಿ, ಯೋಜನೆ ಜಾರಿಗೆ ಆಗ್ರಹಿಸಿ ಜ. 2ರಂದು ಹುಬ್ಬಳ್ಳಿಯಲ್ಲಿ ಮಹದಾಯಿಗಾಗಿ ಹೋರಾಟ ನಡೆಯಲಿದೆ ಎಂದು ತಿಳಿಸಿದರು.

 

ದೇಶದಲ್ಲಿ ಮೊದಲ ಸಹಕಾರಿ ಸಂಸ್ಥೆ ಸ್ಥಾಪಿಸಿದ ಹೆಗ್ಗಳಿಕೆ, ಕರ್ನಾಟಕ ಸಹಕಾರಿ ಶಕ್ತಿ ವಿವರಿಸಿದ ಅಮಿತ್ ಶಾ!

ಮಹದಾಯಿ ಯೋಜನೆಯ ಡಿಪಿಆರ್‌ಗೆ ಅನುಮತಿ ದೊರೆತಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ, ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಒಪ್ಪಿಗೆ ಮತ್ತು ಅನುಷ್ಠಾನಕ್ಕೆ ಟೆಂಡರ್‌ ಪ್ರಕ್ರಿಯೆ ಯಾವಾಗ ನಡೆಯುತ್ತದೆ ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಕಾಂಗ್ರೆಸ್‌- ಜೆಡಿಎಸ್‌ನಿಂದ ಮುಕ್ತಿ ಕೊಡಿ: ಬಿಜೆಪಿಯನ್ನು ಗೆಲ್ಲಿಸಲು ಅಮಿತ್ ಶಾ ಮನವಿ

ಕರ್ನಾಟಕಕ್ಕೆ ಇಂದು ಕೇಂದ್ರ ಸಚಿವ ಅಮಿತ್‌ ಶಾ ಬಂದಿದ್ದಾರೆ. ಆದರೆ ಕೃಷ್ಣಾ ಮತ್ತು ಮಹದಾಯಿ ನೀರಿನ ಕುರಿತು ಮಾತನಾಡುವುದಿಲ್ಲ. ಕೃಷ್ಣಾ ನದಿ ವಿಚಾರದಲ್ಲಿಯೂ ಬಿಜೆಪಿ ಜನರಿಗೆ ದ್ರೋಹ ಮಾಡುತ್ತಾ ಬಂದಿದೆ ಎಂದು ಕಿಡಿಕಾರಿದರು.

Follow Us:
Download App:
  • android
  • ios