ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ತಬಾಹಿ ಹಾಡಿನ ಮೊದಲ ಪೋಸ್ಟರ್‌ಗೆ ಕೆಲ ಟೀಕೆಗಳು ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಟಾಕ್ಸಿಕ್ ತಂಡ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದೆ.
- Home
- News
- State
- Karnataka Latest News Live: ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ಯಶ್ ಕಿಯಾರ ಜೋಡಿಗೆ ಫ್ಯಾನ್ಸ್ ಫಿದಾ
Karnataka Latest News Live: ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ಯಶ್ ಕಿಯಾರ ಜೋಡಿಗೆ ಫ್ಯಾನ್ಸ್ ಫಿದಾ

ಶಿಕಾರಿಪುರ: ರಾಜಕೀಯ ಜೀವನದಲ್ಲಿ 50 ವಸಂತಗಳನ್ನು ಪೂರೈಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅದ್ಧೂರಿಯಾಗಿ ಅಭಿನಂದನೆ ಸಲ್ಲಿಸಲು ಚಿತ್ರದುರ್ಗದಲ್ಲಿ ಬರುವ ಮೇ ತಿಂಗಳಿನಲ್ಲಿ ಆಯೋಜಿಸಲು ಉದ್ದೇಶಿಸಿರುವ ಸಮಾವೇಶದ ಸಿದ್ಧತೆಗೆ ಚಾಲನೆ ದೊರೆತಿದೆ. ಇದಕ್ಕಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು, ಕೆಎಲ್ಇ ಮಾಜಿ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅವರನ್ನು ಅಧ್ಯಕ್ಷರನ್ನಾಗಿ, ಮಾಜಿ ಸಚಿವ ಶ್ರೀರಾಮುಲು ಅವರನ್ನು ಕಾರ್ಯಾಧ್ಯಕ್ಷರನ್ನಾಗಿ, ಸಂಸದ ಗೋವಿಂದ ಕಾರಜೋಳ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
Karnataka News Live:ಟಾಕ್ಸಿಕ್ ಸಾಂಗ್ ಪೋಸ್ಟರ್ ಟೀಕೆ ಬೆನ್ನಲ್ಲೇ ಮತ್ತೊಂದು ಅಪ್‌ಡೇಟ್, ಯಶ್ ಕಿಯಾರ ಜೋಡಿಗೆ ಫ್ಯಾನ್ಸ್ ಫಿದಾ
Karnataka News Live:ರಕ್ಷಿತ್ ಶೆಟ್ಟಿ ಹಾರ್ಟ್‌ಬ್ರೇಕ್, ಅಪ್ಡೇಟ್ ನಿರೀಕ್ಷೆಯಲ್ಲಿರುವಾಗಲೇ ಶ್ರದ್ದಾಂಜಲಿ ಸ್ಟೋರಿ ಪೋಸ್ಟ್ ಮಾಡಿದ ನಟ
ರಕ್ಷಿತ್ ಶೆಟ್ಟಿ ಹಾರ್ಟ್‌ಬ್ರೇಕ್, ಅಪ್ಡೇಟ್ ನಿರೀಕ್ಷೆಯಲ್ಲಿರುವಾಗಲೇ ಶ್ರದ್ದಾಂಜಲಿ ಸ್ಟೋರಿ ಪೋಸ್ಟ್ ಮಾಡಿದ ನಟ, ಅಭಿಮಾನಿಗಳು ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾ ಅಪ್‌ಡೇಟ್‌ಗಾಗಿ ಕಾಯುತ್ತಲೇ ಇರುವಾಗ ಈ ಪೋಸ್ಟ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
Karnataka News Live:ಕಾಂತಾರ ಚಿತ್ರಕ್ಕೆ ಪುನೀತ್ ರಾಜ್ ಆಯ್ಕೆಯಾಗಿದ್ರು! ಕುತೂಹಲದ ವಿಷ್ಯ ರಿವೀಲ್ ಮಾಡಿದ Rishab Shetty
'ಕಾಂತಾರ' ಚಿತ್ರದ ಶಿವನ ಪಾತ್ರಕ್ಕೆ ನಟ ಪುನೀತ್ ರಾಜ್‌ಕುಮಾರ್ ಮೊದಲ ಆಯ್ಕೆಯಾಗಿದ್ದರು ಎಂಬ ಕುತೂಹಲಕಾರಿ ವಿಷಯವನ್ನು ರಿಷಬ್ ಶೆಟ್ಟಿ ಬಹಿರಂಗಪಡಿಸಿದ್ದಾರೆ. ಕರಾವಳಿ ಭಾಷೆ ಕಲಿಯಲು ಬೇಕಾದ ಸಮಯದ ಅಭಾವ ಹಾಗೂ ಸಿನಿಮಾ ಬದ್ಧತೆಗಳಿಂದಾಗಿ, ಪುನೀತ್ ಅವರೇ ಈ ಪಾತ್ರವನ್ನು ರಿಷಬ್ ನಿರ್ವಹಿಸುವಂತೆ ಸೂಚಿಸಿದ್ದರು
Karnataka News Live:ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು?
ತಂದೆಯ ಕಾರ್ಗಿಲ್ ಯುದ್ಧ ಹೋರಾಟದ ಘಟನೆ ಬಿಚ್ಚಿಟ್ಟಿ ನಟಿ ರಾಗಿಣಿ ದ್ವಿವೇದಿ, ಅಂದು ಏನಾಗಿತ್ತು? ಸೇನಾಧಿಕಾರಿ ಪುತ್ರಿ ರಾಗಿಣಿ ದ್ವೇವೇದಿ ಬಾಂಬ್‌ಶೆಲ್ ಕುರಿತು ಹೇಳಿದ ಘಟನೆ ಇದೀಗ ಸದ್ದು ಮಾಡುತ್ತಿದೆ.
Karnataka News Live:ಮುಡಾ ಅಕ್ರಮ ಕೇಸ್ - ಕೋರ್ಟ್‌ನಲ್ಲಿ ₹50 ಕೋಟಿ ಲಂಚ, ವಾಮಾಚಾರದ ಸ್ಫೋಟಕ ಸತ್ಯ ಬಾಯ್ಬಿಟ್ಟ ಸ್ನೇಹಮಯಿ ಕೃಷ್ಣ!
ಮುಡಾ ಅಕ್ರಮ ಸೈಟ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಕಾರ್ಯಕರ್ತೆ ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣದಿಂದ ಹಿಂದೆ ಸರಿಯಲು ತಮಗೆ 50 ಕೋಟಿ ರೂ. ಲಂಚದ ಆಮಿಷ ಒಡ್ಡಲಾಗಿತ್ತು ಮತ್ತು ತಮ್ಮ ವಿರುದ್ಧ ವಾಮಾಚಾರ ನಡೆಸಲಾಗಿದೆ ಎಂದು ಹೇಳಿದ್ದಾರೆ.
Karnataka News Live:ರಂಜಾನ್ ಮಾಸದಲ್ಲಿ ಭಿಕ್ಷೆಗೆ ಬಂದ ಮಹಿಳೆಯನ್ನು ಮಕ್ಕಳ ಕಳ್ಳಿಯೆಂದು ಭಾವಿಸಿ ಧರ್ಮದೇಟು ಕೊಟ್ಟ ಜನ!
ಬೆಳಗಾವಿಯಲ್ಲಿ 'ಮಕ್ಕಳ ಕಳ್ಳರು' ಬಂದಿದ್ದಾರೆ ಎಂಬ ಸುಳ್ಳು ವದಂತಿಯಿಂದಾಗಿ, ಜನರು ಭಿಕ್ಷೆ ಬೇಡುತ್ತಿದ್ದ ಮಹಿಳೆಯೊಬ್ಬರನ್ನು ಥಳಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆ ರಕ್ಷಿಸಿದ್ದು, ಇಂತಹ ವದಂತಿಗಳನ್ನು ನಂಬದಂತೆ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.
Karnataka News Live:ಮಂಗಳೂರಿನಿಂದ ಗಲ್ಫ್ ದೇಶಗಳು ಸೇರಿ, ಇರಾನ್‌ನತ್ತ ಹೊರಟ ವಿಮಾನಗಳು ವಾಪಸ್; ರದ್ದಾದ ವಿಮಾನಗಳ ವಿವರ ಇಲ್ಲಿದೆ!
ಇರಾನ್-ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದ್ದರಿಂದ, ಮಂಗಳೂರು ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನಯಾನ ಸೇವೆಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ದುಬೈಗೆ ಹೊರಟಿದ್ದ ವಿಮಾನ ಅರ್ಧ ದಾರಿಯಿಂದಲೇ ವಾಪಸಾಗಿವೆ.
Karnataka News Live:ಸಿದ್ದರಾಮಯ್ಯ ಸರ್ಕಾರ ನಿರುದ್ಯೋಗಿಗಳ ವಿರೋಧಿ - ಮೀಸಲಾತಿ ಕಡಿತ, ಉದ್ಯೋಗ ಭರ್ತಿ ಮಾಹಿತಿ ಕೇಳಿದ ಎನ್.ರವಿಕುಮಾರ್!
ರಾಜ್ಯ ಸರ್ಕಾರದ 40 ಸಾವಿರ ಹುದ್ದೆ ಭರ್ತಿ ಹೇಳಿಕೆ ಸುಳ್ಳು ಎಂದು ಬಿಜೆಪಿ ಆರೋಪಿಸಿದೆ. ಮೀಸಲಾತಿ ಹೆಚ್ಚಳವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿರುವ ಮತ್ತು ಒಳಮೀಸಲಾತಿ ಬಗ್ಗೆ ಗೊಂದಲ ಸೃಷ್ಟಿಸಿರುವ ಕಾಂಗ್ರೆಸ್ ಸರ್ಕಾರ ಎಂದು ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Karnataka News Live:ಚಿಲ್ಲರೆ ಕಾಸಿಗೆ '51 ಸಾವಿರ ಅತಿಥಿ ಶಿಕ್ಷಕರ ನಿಯೋಜನೆ'ಯೇ ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಸಾಧನೆಯಂತೆ!
51 ಸಾವಿರ ಅತಿಥಿ ಶಿಕ್ಷಕರ ನೇಮಕವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಸಾಧನೆ ಎಂದಿರುವುದು ನಿರುದ್ಯೋಗಿ ಪದವೀಧರರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಕಾಯಂ ಹುದ್ದೆಗಳ ಭರ್ತಿಗೂ ಮುನ್ನ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ.
Karnataka News Live:ಭ್ರಮನಿರಸನಗೊಂಡ ಕರ್ನಾಟಕ, ರಣಜಿ ಕಿರೀಟ ಗೆದ್ದು ಭಾರತದ ಹೊಸ ಕ್ರಿಕೆಟ್ ರಾಜನಾದ ಜಮ್ಮು-ಕಾಶ್ಮೀರ!
ಜಮ್ಮು ಮತ್ತು ಕಾಶ್ಮೀರ ತಂಡವು ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬಲಿಷ್ಠ ಕರ್ನಾಟಕ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಈ ತಂಡ, ಆಕಿಬ್ ನಬಿ, ಶುಭಂ ಪುಂಡಿರ್ ಮತ್ತು ಕಮ್ರಾನ್ ಇಕ್ಬಾಲ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ 66 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿದೆ.
Karnataka News Live:ಕೋಡಿಮಠ ಶ್ರೀ ಹೇಳಿದ್ರು ದರ್ಶನ್ ಭವಿಷ್ಯ! ರಾಜಕೀಯದಲ್ಲಿ ಕಾಟೇರನಿಗಿದೆಯಾ ವೈಭೋಗ?
ನಟ ದರ್ಶನ್ ಅವರ ಜೈಲು ವಾಸದ ಬಗ್ಗೆ ಹಲವು ಭವಿಷ್ಯಗಳು ಕೇಳಿಬರುತ್ತಿರುವಾಗ, ಇದೀಗ ಕೋಡಿ ಮಠದ ಶ್ರೀಗಳು ಮೊದಲ ಬಾರಿಗೆ ಮಾತನಾಡಿದ್ದಾರೆ. ದರ್ಶನ್ ಮೊದಲು ಜೈಲಿನಿಂದ ಹೊರಬರಲಿ, ನಂತರ ಅವರ ರಾಜಕೀಯ ಭವಿಷ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದಿದ್ದಾರೆ.
Karnataka News Live:ಎಲ್ಲರೂ ಸರಿ ಎಂದ್ಕೊಂಡೆ, ಆಮೇಲೆ ಜ್ಞಾನೋದಯ ಆಯ್ತು - ಸಂದರ್ಶನದಲ್ಲಿ ಅಂದೇ ಹೇಳಿದ್ರು Rakshit Shetty!
Karnataka News Live:Bigg boss ಗಿಲ್ಲಿ ನಟನ ಮುಗಿಯದ ಹವಾ! ಪರೀಕ್ಷೆಯಲ್ಲೂ ಗಿಲ್ಲಿ ಕುರಿತ ಬಿಟ್ಟಸ್ಥಳ ತುಂಬಿ; ಏನಿದು ಪ್ರಶ್ನೆ?
Karnataka News Live:ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನವೇ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ - ವಿಧಿಯಾಟಕ್ಕೆ ಬಲಿಯಾದ ಚಿಕ್ಕೋಡಿಯ ಭೂಮಿಕಾ!
ಬೆಳಗಾವಿಯಲ್ಲಿ ಪರೀಕ್ಷೆಗೂ ಮುನ್ನವೇ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.
Karnataka News Live:ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ - ಮುಖ್ಯೋಪಾಧ್ಯಾಯರ ಬಡ್ತಿ ನಿಯಮಕ್ಕೆ ಮಹತ್ವದ ತಿದ್ದುಪಡಿ!
ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ನಿಯಮಗಳಿಗೆ ಮಹತ್ವದ ತಿದ್ದುಪಡಿ ತಂದಿದೆ. ಈ ಹೊಸ ನಿಯಮದ ಪ್ರಕಾರ, ಮುಖ್ಯೋಪಾಧ್ಯಾಯರ ಹುದ್ದೆಗಳನ್ನು 1-5ನೇ ತರಗತಿ ಮತ್ತು 6-8ನೇ ತರಗತಿ ಶಿಕ್ಷಕರಿಂದ 2:1 ಅನುಪಾತದಲ್ಲಿ ಭರ್ತಿ ಮಾಡಲಾಗುವುದು.
Karnataka News Live:Amruthadhaare ಜೈದೇವ್ ಜೊತೆ ಮದ್ವೆ ಗುಡ್ನ್ಯೂಸ್ ಬೆನ್ನಲ್ಲೇ ಲೈವ್ಗೆ ಬಂದ ಭಾರ್ಗವಿ LLB ಹೇಳಿದ್ದೇನು?
Karnataka News Live:ಜ್ಯೋತಿಷಿ ಮಾತು ನಂಬಿ ನೇಣು ಬಿಗಿದುಕೊಂಡ ಮದ್ವೆ ತಯಾರಿಯಲ್ಲಿದ್ದ ಬೆಂಗಳೂರಿನ ಟೆಕ್ಕಿ ವಿದ್ಯಾಜ್ಯೋತಿ
ಬೆಂಗಳೂರಿನ ಮಹಿಳಾ ಟೆಕ್ಕಿಯೊಬ್ಬರು ಜ್ಯೋತಿಷಿಯೊಬ್ಬರ ಅಲ್ಪಾಯುಷಿ ಭವಿಷ್ಯವನ್ನು ನಂಬಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮದುವೆಗೆ ಸಿದ್ಧತೆ ನಡೆಸುತ್ತಿದ್ದ 27 ವರ್ಷದ ವಿದ್ಯಾಜ್ಯೋತಿ, 9 ದಿನಗಳ ಪೂಜೆಯ ಕೊನೆಯ ದಿನದಂದು ಈ ದುರಂತ ನಿರ್ಧಾರ ತೆಗೆದುಕೊಂಡಿದ್ದಾರೆ.
Karnataka News Live:ಓ ದೇವರೇ, ಯಶ್ ಹೊತ್ತುಕೊಂಡಿರೋ ಹುಡುಗಿ ಅವಳಾಗದಿರಪ್ಪಾ! ರುಕ್ಕು ಫ್ಯಾನ್ಸ್ ಹೀಗೊಂದು ಹರಕೆ
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಪೋಸ್ಟರ್ವೊಂದು ವೈರಲ್ ಆಗಿದ್ದು, ಇದರಲ್ಲಿ ಯಶ್ ಯುವತಿಯೊಬ್ಬರನ್ನು ಎತ್ತಿಕೊಂಡಿದ್ದಾರೆ. ಈ ಪೋಸ್ಟರ್ ಅನ್ನು ಕಿಯಾರಾ ಅಡ್ವಾಣಿ ಹಂಚಿಕೊಂಡಿದ್ದು, ಹಾಡಿನಲ್ಲಿರುವ ನಟಿ ಅವರೇ ಇರಬಹುದೆಂಬ ಚರ್ಚೆ ಶುರುವಾಗಿದೆ. ಮಾರ್ಚ್ 2 ರಂದು ಹಾಡು ಬಿಡುಗಡೆಯಾಗಲಿದೆ.
Karnataka News Live:ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ - ₹53 ಲಕ್ಷ ವಾಪಸ್ ಬಂದ ಕಥೆ
ಮಂಡ್ಯ ತಾಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ, ಪ್ರಭಾರಿ ಪಿಡಿಒ ಒಬ್ಬರು ಅಕ್ರಮವಾಗಿ ವರ್ಗಾಯಿಸಿದ್ದ ₹54 ಲಕ್ಷ ಹಣದಲ್ಲಿ, ಜಿಪಂ ಸಿಇಒ ಕೆ.ಆರ್.ನಂದಿನಿ ಅವರ ಸಮಯೋಚಿತ ಕ್ರಮದಿಂದ ₹53 ಲಕ್ಷ ಹಣವನ್ನು ಮರಳಿ ಪಂಚಾಯಿತಿ ಖಾತೆಗೆ ಜಮೆ ಮಾಡಲಾಗಿದೆ.
Karnataka News Live:ಕಠಿಣ 9 ಷರತ್ತುಗಳೊಂದಿಗೆ 22 ಹಿಂದುಳಿದ, ದಲಿತ ಮಠ, ಟ್ರಸ್ಟ್, ಸಂಘಗಳಿಗೆ 53 ಎಕ್ರೆ ಭೂಮಿ ಮಂಜೂರು
ರಾಜ್ಯ ಸರ್ಕಾರವು ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ಸೇರಿದ 22 ಮಠಗಳು ಮತ್ತು ಸಂಘ-ಸಂಸ್ಥೆಗಳಿಗೆ ಬೆಂಗಳೂರಿನಲ್ಲಿ 52 ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ದಾಸನಪುರ ಹೋಬಳಿಯ ರಾವುತ್ತನಹಳ್ಳಿ ಗ್ರಾಮದಲ್ಲಿರುವ ಈ ಗೋಮಾಳ ಭೂಮಿಯ ಬಳಕೆಗೆ ಸರ್ಕಾರವು ಒಂಬತ್ತು ಕಠಿಣ ಷರತ್ತುಗಳನ್ನು ವಿಧಿಸಿದೆ.