Asianet Suvarna News Asianet Suvarna News

ದೇಶದ ಬಿಕ್ಕಟ್ಟುಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಭಜನೆ ಮಾಡಿಸಲಾಗುತ್ತಿದೆ: ಚಿಂತಕ ಪರಕಾಲ ಪ್ರಭಾಕರ್‌

ದೇಶ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ಜನರ‌ ಗಮನವನ್ನು‌ ಬೇರೆಯೆಡೆ ಸೆಳೆಯಲಾಗುತ್ತಿದೆ ಎಂದು ಚಿಂತಕ, ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್ ಹೇಳಿದ್ದಾರೆ.

Unemployment is increasing in the country says parakala prabhakar at mangaluru rav
Author
First Published Jan 29, 2024, 7:19 AM IST

ಮಂಗಳೂರು (ಜ.29) : ದೇಶ ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶ ಎದುರಿಸುತ್ತಿರುವ ಬಿಕ್ಕಟ್ಟುಗಳಿಂದ ಜನರ‌ ಗಮನವನ್ನು‌ ಬೇರೆಯೆಡೆ ಸೆಳೆಯಲಾಗುತ್ತಿದೆ ಎಂದು ಚಿಂತಕ, ರಾಜಕೀಯ ವಿಶ್ಲೇಷಕ ಪರಕಾಲ ಪ್ರಭಾಕರ್ ಹೇಳಿದ್ದಾರೆ.

75ನೇ ಗಣರಾಜ್ಯೋತ್ಸವ ಸಲುವಾಗಿ ಮಂಗಳೂರಿನ ಟಾಗೋರ್ ಪಾರ್ಕ್‌ನಲ್ಲಿ ಶುಕ್ರವಾರ ‘ರಿಪಬ್ಲಿಕ್ ಇನ್ ಕ್ರೈಸಿಸ್’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಎಚ್‌ಡಿಕೆ ಸಹವಾಸ ಮಾಡಿದವರು ಯಾರೂ ಉದ್ಧಾರವಾದ ಇತಿಹಾಸ ಇಲ್ಲ: ವೀರಪ್ಪ ಮೊಯ್ಲಿ

ಜನರ‌ ಗಮನ ಬೆರೆಯೆಡೆ ಸೆಳೆಯಲು ಜನರನ್ನು ಭಜನೆ ಮಾಡಲು, ಘೋಷಣೆ‌ ಕೂಗಲು ಪ್ರೋತ್ಸಾಹಿಸಲಾಗುತ್ತಿದೆ. ಉದ್ಯಮಿಗಳು ಅಚಾನಕ್ ಆಗಿ ಭಜನೆ ಮಾಡಲು ಆರಂಭಿಸಿದ್ದಾರೆ. ಎಂದೂ ದೇವಾಲಯಗಳಿಗೆ‌ ಹೋಗದವರು ಇಂದು ದೇವಾಲಯಗಳಿಗೆ‌ ಹೋಗಲು‌ ಆರಂಭಿಸಿದ್ದಾರೆ. ದೇಶದ ಆರ್ಥಿಕತೆ ನೆಲಕಚ್ಚಿದೆ, ಅಧೋಗತಿಗೆ ಇಳಿದಿದೆ ಎಂದರು.

ದೇಶದಲ್ಲಿ‌ ನಿರುದ್ಯೋಗ‌ ಸಮಸ್ಯೆ ಮಿತಿ ಮೀರಿದೆ. ಬಾಂಗ್ಲಾದೇಶಕ್ಕಿಂತ‌ ಅತೀ ಹೆಚ್ಚು ನಿರುದ್ಯೋಗ ನಮ್ಮ‌ ದೇಶದಲ್ಲಿದೆ. ಭಾರತದಲ್ಲಿ ಶೇ.24ರಷ್ಟುನಿರುದ್ಯೋಗ‌ ಇದ್ದರೆ ಬಾಂಗ್ಲಾದೇಶದಲ್ಲಿ ಕೇವಲ ಶೇ.12. ರೈತರು, ಕಾರ್ಮಿಕರು ಚಳವಳಿ ಆರಂಭಿಸಿದರೆ ಅವರು ದೇಶದ್ರೋಹಿಗಳು. ನಕ್ಸಲರು, ಉಗ್ರವಾದಿಗಳು, ಖಾಲಿಸ್ಥಾನಿಗಳು, ತುಕ್ಡೆ ತುಕ್ಡೆ ಗ್ಯಾಂಗ್ ಎಂದು‌ ಟ್ಯಾಗ್‌ ಕೊಡಲಾಗುತ್ತದೆ. ದೇಶದಲ್ಲಿ ಪ್ರಜೆಗಳು ಪ್ರಶ್ನೆ ಮಾಡುವ ಅಧಿಕಾರವನ್ನೇ ಕಳೆದುಕೊಂಡಿದ್ದಾರೆ. ದೇಶಕ್ಕೆ, ದೇಶದ ಪ್ರಜಾಪ್ರಭುತ್ವಕ್ಕೆ ಎರಡು ರೀತಿಯ ಜನರಿಂದ ಅತ್ಯಂತ ಹೆಚ್ಚು ಗಂಡಾಂತರವಿದೆ. ಈ ದೇಶ ಹಿಂದೂಗಳಿಗೆ‌ ಸೇರಿದ್ದು ಎಂದು ಹೇಳುವವರು ಅಪಾಯಕಾರಿಗಳು. ಆದರೆ ಇಷ್ಟು ವರ್ಷ‌ ಸೆಕ್ಯೂಲರ್ ಆಗಿದ್ದವರು‌ ಈಗ ಅಚಾನಕ್‌ ಆಗಿ ಭಕ್ತರಾಗಿ ಬಿಡುವವರು ಅತ್ಯಂತ ಅಪಾಯಕಾರಿಗಳು. ಇಷ್ಟು ವರ್ಷ ಸೆಕ್ಯೂಲರ್ ಗಳು ಆಗಿದ್ದವರು ಈಗ ಏಕಾಏಕಿ ಅಯೋಧ್ಯೆಯಲ್ಲಿ ಭೂಮಿ ಖರೀದಿಸುತ್ತಾರೆ, ರಾಮನ ಭಕ್ತರಾಗಿ ಬಿಟ್ಟಿದ್ದಾರೆ. ಭವಿಷ್ಯದಲ್ಲಿ ದೇಶದಲ್ಲಿ ಪಲ್ಲಟಗಳು ನಡೆದರೆ ಇವರು ಮತ್ತೆ ಸೆಕ್ಯೂಲರ್‌ಗಳಾಗಿ ಬಿಡುತ್ತಾರೆ. ಇಂಥಹ ಮಾನಸಿಕತೆ ಇರುವವರು‌ ದೇಶಕ್ಕೆ ಅತ್ಯಂತ‌ ಅಪಾಯಕಾರಿಗಳು ಎಂದರು.

ದೇಶದಲ್ಲಿ ಇಂದು ಹಲವು ರಾಜ್ಯಗಳ ಸ್ವಂತ ಸಂಪನ್ಮೂಲಗಳ ಮೂಲಕ ಆರ್ಥಿಕ ಕ್ರೋಢೀಕರಣ ಮಾಡಲು ಸಾಧ್ಯವಾಗುತ್ತಿಲ್ಲ. ತಮ್ಮ ಜತೆ ಕೈ ಜೋಡಿಸಿದವರಿಗೆ ಮಾತ್ರ ಕೇಂದ್ರ ಆರ್ಥಿಕ ನೆರವು ನೀಡುತ್ತಿದೆ. ರಾಜ್ಯಗಳನ್ನು ಅದರ ಹಕ್ಕುಗಳಿಂದ ವಿಮುಖ ಗೊಳಿಸಲಾಗುತ್ತಿದ್ದು, ಸಂವಿಧಾನದ ರಾಜ್ಯಗಳ ಮೌಲ್ಯಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂದರು.

ಮೂರು ಕೃಷಿ ಕಾಯ್ದೆಯನ್ನು ಜಾರಿಗೊಳಿಸುವಾಗಲೂ, ಹಿಂಪಡೆಯುವಾಗಲೂ ಚರ್ಚೆಯೇ ನಡೆದಿಲ್ಲ. ಇದು ಮಾತ್ರವಲ್ಲದೆ ಹಲವು ಕಾಯ್ದೆಗಳನ್ನು ಚರ್ಚೆಯೇ ನಡೆಯದೆ ಜಾರಿಗೊಳಿಸಲಾಗುತ್ತಿದೆ. ರಾಷ್ಟ್ರಪತಿ, ಪಾರ್ಲಿಮೆಂಟ್‌, ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗಗಳಿಗೆ ಮಹತ್ವವೇ ಇಲ್ಲದಂತಾಗಿದೆ. ದೇಶದಲ್ಲಿ ಬಿಕ್ಕಟ್ಟು ತಲೆದೋರಿದರೆ ಸುಪ್ರೀಂಕೋರ್ಚ್‌ ಮಧ್ಯಪ್ರವೇಶ ಮಾಡುತಿತ್ತು. ಆದರೆ ಇಂದು ಅಂತಹ ವಿಚಾರಗಳೇ ತೋರುತ್ತಿಲ್ಲ ಎಂದರು.

ಎಲ್ಲರಿಗೂ ಅಧಿಕಾರ ಸಿಗಲೆಂದುನಿಗಮ ಹುದ್ದೆಗೆ 2 ವರ್ಷ ಅವಧಿ: ಡಿಕೆ ಶಿವಕುಮಾರ

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ.ವಲೇರಿಯನ್‌ ರಾಡ್ರಿಗಸ್‌ ಕೃತಿ ಲೋಕಾರ್ಪಣೆಗೊಳಿಸಿ, ರಾಜಕೀಯ ನೇತೃತ್ವ ಹೇಗೆ ರಾಷ್ಟ್ರೀಯ ಸಿದ್ಧಾಂತವಾಗಿರುವ ಪ್ರಜಾಪ್ರಭುತ್ವದಿಂದ ಹಳಿ ತಪ್ಪುತ್ತಿದೆ ಎಂದು ಸಮಕಾಲೀನ ಆಧಾರಗಳ ಮೇಲೆ ಕೃತಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ ಎಂದರು.

ಮಹಾತ್ಮಾಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷರಾದ ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಪ್ರಭಾಕರ ಸಾಲಿಯಾನ್‌, ಇಬ್ರಾಹಿಂ ಕೋಡಿಜಾಲ್‌, ಕಾರ್ಯದರ್ಶಿ ಡಾ.ಇಸ್ಮಾಯಿಲ್‌, ಪಾಲಿಕೆ ಸದಸ್ಯ ಎ.ಸಿ.ವಿನಯರಾಜ್‌ ಮತ್ತಿತರರಿದ್ದರು.

Follow Us:
Download App:
  • android
  • ios