ಎಲ್ಲರಿಗೂ ಅಧಿಕಾರ ಸಿಗಲೆಂದುನಿಗಮ ಹುದ್ದೆಗೆ 2 ವರ್ಷ ಅವಧಿ: ಡಿಕೆ ಶಿವಕುಮಾರ
ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷದ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ. ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ತಿಳಿಸಿದರು.
ಬೆಂಗಳೂರು (ಜ.29): ‘ಪಕ್ಷಕ್ಕೆ ದುಡಿದ ಎಲ್ಲಾ ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ಸಿಗಲಿ ಎಂದು ನಿಗಮ ಮಂಡಳಿಗಳಿಗೆ ಎರಡು ವರ್ಷದ ಅವಧಿಯ ಸೂತ್ರವನ್ನು ಹೈಕಮಾಂಡ್ ಮಾಡಿದೆ. ಹೈಕಮಾಂಡ್ ಕೊಟ್ಟಿರುವ ಸೂತ್ರವನ್ನು ನಾವು ಜಾರಿಗೆ ತಂದಿದ್ದೇವೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ ಶಿವಕುಮಾರ್ ಅವರದ್ದೂ ಏನೂ ಇಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿ ಅಧಿಕಾರಾವಧಿಯನ್ನು ಎರಡು ವರ್ಷಗಳ ಅವಧಿಗೆ ಮಾತ್ರ ನೀಡಿರುವುದಕ್ಕೆ ಕೆಲವರು ಅಸಮಾಧಾನಗೊಂಡಿದ್ದಾರೆ ಎಂಬ ಬಗ್ಗೆ ಪ್ರತಿಕ್ರಿಯಿಸಿದರು.
ಬಿಜೆಪಿಯವ್ರು ಏನು ಬೇಕಾದ್ರೂ ಹೇಳಲಿ; ಲೋಕಸಭಾ ಚುನಾವಣೆ ಗೆಲುವು ಕೂಡ ನಮ್ಮದೇ : ಡಿಕೆ ಶಿವಕುಮಾರ
ಪಕ್ಷಕ್ಕಾಗಿ ಶಾಸಕರು, ಕಾರ್ಯಕರ್ತರು ಎಲ್ಲರೂ ದುಡಿದಿದ್ದಾರೆ. ಹೀಗಾಗಿ ಶಾಸಕರ ಜತೆಗೆ ಕಾರ್ಯಕರ್ತರಿಗೂ ನಿಗಮ-ಮಂಡಳಿ ನೀಡಲಾಗುತ್ತಿದೆ. ಇನ್ನು ಹೆಚ್ಚು ಮಂದಿಗೆ ಅವಕಾಶ ದೊರೆಯಬೇಕು. ಇತರರಿಗೂ ಅಧಿಕಾರ ಹಂಚಬೇಕು ಎಂಬ ಕಾರಣಕ್ಕೆ ಎರಡು ವರ್ಷ ಮಾತ್ರ ಅಧಿಕಾರಾವಧಿ ಎಂದು ಹೇಳಿದ್ದೇವೆ. ನಾವು ಹೈಕಮಾಂಡ್ ನೀಡಿರುವ ಸೂತ್ರವನ್ನು ಪಾಲಿಸಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಏನು ನಡ್ತೀದೆ? 'ಬಿಜೆಪಿ ಸಂಸದರನ್ನು ಗೆಲ್ಲಿಸಿ' ಎಂದ ಶಾಮನೂರು ಪರ ಎಂಬಿ ಪಾಟೀಲ್ ಬ್ಯಾಟಿಂಗ್!
543 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎನ್ನಲಿ!
ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಕರ್ನಾಟಕದಲ್ಲಿ 224 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಏನಾಯಿತು? ನಾವು 136-140 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆವು. ನಮ್ಮ ಮಾತು ಏನಾಯಿತು? ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರು ಬೇಕಿದ್ದರೆ ಲೋಕಸಭೆಯ 543 ಸ್ಥಾನಗಳನ್ನೂ ಗೆಲ್ಲುತ್ತೇವೆ ಎನ್ನಲಿ ಬೇಡ ಎಂದವರು ಯಾರು ಎಂದು ತಿರುಗೇಟು ನೀಡಿದರು.