ಶಾಸಕ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಟ್ರ್ಯಾಪ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪೊಲೀಸರ ಟ್ರ್ಯಾಪ್ ವೇಳೆ ಸಿಕ್ಕಿ ಬಿದ್ದಿದ್ದ ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆ ದಾಖಲಾಗಿದ್ದು 1.60 ಕೋಟಿ ಹಣದ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ‌‌‌‌.

ಬೆಂಗಳೂರು (ಮಾ.7) : ಶಾಸಕ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಟ್ರ್ಯಾಪ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಪೊಲೀಸರ ಟ್ರ್ಯಾಪ್ ವೇಳೆ ಸಿಕ್ಕಿ ಬಿದ್ದಿದ್ದ ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆ ದಾಖಲಾಗಿದ್ದು 1.60 ಕೋಟಿ ಹಣದ ಅಸಲಿಯತ್ತನ್ನ ಬಿಚ್ಚಿಟ್ಟಿದ್ದಾರೆ‌‌‌‌. ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಟ್ರ್ಯಾಪ್ ಪ್ರಕರಣದ ತನಿಖೆಯನ್ನ ಲೋಕಾಯುಕ್ತ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಪ್ರಶಾಂತ್ ಮಾಡಾಳ್ ಜೊತೆ ಬಂಧಿತರಾಗಿದ್ದ ಇಬ್ಬರು ಖಾಸಗಿ ವ್ಯಕ್ತಿಗಳ ಲಿಖಿತ ಹೇಳಿಕೆಯನ್ನ ಅಧಿಕಾರಿಗಳು ದಾಖಲು ಮಾಡಿದ್ದಾರೆ. ಟ್ರ್ಯಾಪ್ ಕಾರ್ಯಚರಣೆ ನಡೆಸಿ ಮಾರ್ಚ್ 2ರಂದು ರಾತ್ರಿಯೇ ನಿಕೋಲಸ್ ಮತ್ತು ಗಂಗಾಧರ್ ಅವರನ್ನ ವಿಚಾರಣೆ ನಡೆಸಿದ ತನಿಖಾ ತಂಡ ಇಬ್ಬರಿಂದ ಲಿಖಿತ ಹೇಳಿಕೆ ದಾಖಲಿಸಿದ್ದಾರೆ.

ಮನಸ್ಸು ಮಾಡಿದ್ರೆ ಮಾಡಾಳು ವಿರುದ್ಧ ಕೇಸ್‌ ತಪ್ಪಿ​ಸ​ಬ​ಹು​ದಿ​ತ್ತು: ಪ್ರಲ್ಹಾದ್ ಜೋಶಿ

ಇಬ್ಬರು ಆರೋಪಿಗಳ ಲಿಖಿತ ಹೇಳಿಕೆಯಲ್ಲಿ ನಿಕೋಲಸ್ ಮತ್ತು ಗಂಗಾಧರ್ ತಾವು ಹಣ ನೀಡಲು ಬಂದಿದ್ದಾಗಿ ತಿಳಿಸಿದ್ದಾರೆ. ಕೆಎಸ್ ಡಿಎಲ್ ಟೆಂಡರ್ ಅಪ್ರೂವಲ್ ಮಾಡಲು ಹಣ ನೀಡಲು ಬಂದಿದ್ದಾಗಿ ಲೋಕಾಯುಕ್ತ ಅಧಿಕಾರಿಗಳ ಬಳಿ ಲಿಖಿತ ಹೇಳಿಕೆ ದಾಖಲು ಮಾಡಿದ್ದಾರೆ. ಕರ್ನಾಟಕ ಅರೋಮಸ್ ಕಂಪನಿಯ ಉದ್ಯೋಗಿಗಳಾದ ನಿಕೋಲಸ್ ಮತ್ತು ಗಂಗಾಧರ್, ಮಾರ್ಚ್ 2ರಂದು ಕ್ರೆಸೆಂಟ್ ರಸ್ತೆಯ ಪ್ರಶಾಂತ್ ಮಾಡಾಳ್ ಕಚೇರಿಗೆ ಬಂದಿದ್ದರಂತೆ. ಹಣದ ಸಮೇತ ಬಂದಿದ್ದ ವೇಳೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಜೊತೆಗೆ ನಿಕೋಲಸ್ ಹಾಗೂ ಗಂಗಾಧರ್ ಇಬ್ಬರನ್ನು ಬಂಧಿಸಿದ್ದರು.

ವಿರೂಪಾಕ್ಷಪ್ಪಗೆ ಲೋಕಾಯುಕ್ತ ಖೆಡ್ಡಾ ತೋಡಿದ್ದು ಹೇಗೆ? ನ್ಯಾ. ಬಿಎಸ್‌ ಪಾಟೀಲ್‌ ವಿವರಿಸಿದ್ದು ಹೀಗೆ

ಇಬ್ಬರು ಖಾಸಗಿ ವ್ಯಕ್ತಿಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ ಲೋಕಾಯುಕ್ತ ಅಧಿಕಾರಿಗಳು ನಂತರ ಇಬ್ಬರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸದ್ಯ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಟ್ರ್ಯಾಪ್ ಸಂಬಂಧ ಅಧಿಕಾರಿಗಳು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.