ರಾಜ್ಯದಲ್ಲಿ 2 ಡೆಲ್ಟಾಪ್ಲಸ್‌ ಕೇಸ್‌ ಪತ್ತೆ, ಇಬ್ಬರೂ ಗುಣ

* ಕುಟುಂಬದವರಿಗೆ ಸೋಂಕು ಹರಡಿಲ್ಲ: ಆರೋಗ್ಯ ಇಲಾಖೆ
* ಮೈಸೂರು ಹಾಗೂ ಬೆಂಗಳೂರು ನಗರದಲ್ಲಿ ತಲಾ ಒಂದೊಂದು ಡೆಲ್ಟಾಪ್ಲಸ್‌ ಪ್ರಕರಣ ಪತ್ತೆ
* ಹೋಂ ಐಸೋಲೇಷನ್‌ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖ 
 

Two Patients Recoverd From Delta Plus in Karnataka grg

ಬೆಂಗಳೂರು(ಜೂ.25): ರಾಜ್ಯದಲ್ಲಿ ಡೆಲ್ಟಾಪ್ಲಸ್‌ ರೂಪಾಂತರಿ ವೈರಾಣುವಿನ ಎರಡು ಪ್ರಕರಣ ಮಾತ್ರ ಪತ್ತೆಯಾಗಿದ್ದು, ಇಬ್ಬರೂ ಗುಣಮುಖರಾಗಿದ್ದಾರೆ. ಅವರ ಕುಟುಂಬ ಸದಸ್ಯರಿಗೂ ಸೋಂಕು ಹರಡಿಲ್ಲ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಹೇಳಿದ್ದಾರೆ.

ಗುರುವಾರ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಮೈಸೂರು ಹಾಗೂ ಬೆಂಗಳೂರು ನಗರದಲ್ಲಿ ತಲಾ ಒಂದೊಂದು ಡೆಲ್ಟಾಪ್ಲಸ್‌ (ಬಿ1.617.2.1) ಪ್ರಕರಣ ಪತ್ತೆಯಾಗಿದೆ. ಮೇ ತಿಂಗಳಲ್ಲಿ ಸಂಗ್ರಹಿಸಿದ್ದ ಮಾದರಿಯ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಶಿಷ್ಟಾಚಾರದ ಪ್ರಕಾರ ಚಿಕಿತ್ಸೆ ನೀಡಿದ್ದು ಈಗಾಗಲೇ ಗುಣಮುಖರಾಗಿದ್ದಾರೆ ಎಂದರು.

ಡೆಲ್ಟಾಪ್ಲಸ್‌ ವೈರಸ್‌ ಬಗ್ಗೆ ರಾಜ್ಯದಲ್ಲಿ ತೀವ್ರ ನಿಗಾ: ಸಚಿವ ಬೊಮ್ಮಾಯಿ

ಮೈಸೂರು ಹಾಗೂ ಬೆಂಗಳೂರಿನ ಎರಡೂ ಪ್ರಕಣದಲ್ಲಿ ಯಾವುದೇ ರೀತಿಯ ಗಂಭೀರ ಸ್ವರೂಪದ ರೋಗ ಲಕ್ಷಣಗಳು ಕಂಡುಬಂದಿಲ್ಲ. ಹೋಂ ಐಸೋಲೇಷನ್‌ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೀಗಾಗಿ ಆತಂಕ ಬೇಡ ಎಂದು ಹೇಳಿದರು.
 

Latest Videos
Follow Us:
Download App:
  • android
  • ios