ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಶುಕ್ರವಾರ ಕೂಡ ಧಾರವಾಡ, ಗದಗ, ದಾವಣಗೆರೆ, ಹಾವೇರಿ, ಕೊಪ್ಪಳ, ಚಾಮರಾಜನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ.

ಬೆಂಗಳೂರು (ಅ.15): ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಶುಕ್ರವಾರ ಕೂಡ ಧಾರವಾಡ, ಗದಗ, ದಾವಣಗೆರೆ, ಹಾವೇರಿ, ಕೊಪ್ಪಳ, ಚಾಮರಾಜನಗರ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಬಲಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರಲ್ಲಿ, ರಾಜಪ್ಪ(52) ಎಂಬಾತ ಹಿರೇಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. 

ಮತ್ತೊಂದೆಡೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ತುಂಗೋಟಿ ಗ್ರಾಮದಲ್ಲಿ ಮನೆಯ ಬಂಡೆ ಕುಸಿದು ಚೌಡಮ್ಮ (70) ಎಂಬುವವರು ಮೃತಪಟ್ಟಿದ್ದಾರೆ. ಗದಗ ನಗರದ ನರಿಬಾವಿ ಓಣಿಯಲ್ಲಿ ಶಿಥಿಲ​ಗೊಂಡ ಮನೆ ಗೋಡೆ ಕುಸಿದಿದ್ದು, ಮನೆ​ಯ​ಲ್ಲಿ ಮಲ​ಗಿದ್ದ 6 ಜನ ಅದೃಷ್ಟವಶಾತ್‌ ಪ್ರಾಣಾ​ಪಾ​ಯ​ದಿಂದ ಪಾರಾಗಿದ್ದಾರೆ. ಕೊಪ್ಪಳ ತಾಲೂಕಿನ ಹನುಮನಳ್ಳಿ ಗ್ರಾಮದ ಬಳಿ ಖಾಸಗಿ ವ್ಯಕ್ತಿ ತಮ್ಮ ಹೊಲದಲ್ಲಿ ನಿರ್ಮಾಣ ಮಾಡಿಕೊಂಡಿದ್ದ ಚೆಕ್‌ಡ್ಯಾಂ ಒಡೆದು, ಹೊಲಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ.

ಮುಂಗಾರು ಬೆಳೆನಷ್ಟ, ಕೈ ಹಿಡಿಯುವುದೇ ಹಿಂಗಾರು..!

ಬಸ್‌ ಡಿಪೋ ಮತ್ತೆ ಜಲಾವೃತ: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸಾರಿಗೆ ಬಸ್‌ ನಿಲ್ದಾಣ ಮತ್ತು ಬಸ್‌ ಡಿಫೋ ಮತ್ತೆ ಜಲಾವೃತಗೊಂಡಿವೆ. ಪರಿಣಾಮ ಸಾರಿಗೆ ಸಿಬ್ಬಂದಿ ಕೆರೆಯಂತಾಗಿರುವ ನೀರಿನಲ್ಲಿಯೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಸಾರಿಗೆ ಡಿಫೋ ಮತ್ತು ಬಸ್‌ ನಿಲ್ದಾಣ ಮೂರನೇ ಬಾರಿಗೆ ಜಲಾವೃತಗೊಂಡಿದೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರೇ ಖುದ್ದು ಎರಡು ಬಾರಿ ಸ್ಥಳಪರಿಶೀಲನೆ ನಡೆಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ರಾಡಿಯಾದ ಜಿಲ್ಲಾ ಕೇಂದ್ರ: ಚಾಮರಾಜನಗರ ಜಿಲ್ಲೆಯಾದ್ಯಂತ ಕೂಡ ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಇದರಿಂದಾಗಿ ಜಿಲ್ಲಾ ಕೇಂದ್ರದ ಜೋಡಿ ರಸ್ತೆ ಮಾಮೂಲಿಯಂತೆ ಹೊಳೆಯಂತಾಗಿ ವಾಹನ ಸವಾರರು ಪರದಾಡುವಂತಾಯಿತು. ನಗರದಲ್ಲಿ ಮಳೆನೀರಿನಿಂದ ಸುಮಾರು 100ಕ್ಕೂ ಹೆಚ್ವು ಮನೆಗಳು ಜಲಾವೃತವಾಗಿದ್ದು, ಅಪಾರ ಹಾನಿ ಸಂಭವಿಸಿದೆ.

ಮನೆ​ಯ​ಲ್ಲಿದ್ದ 6 ಜನ ಪ್ರಾಣ​ಪ​ಯ​ದಿಂದ ಪಾರು: ಗದಗ ಜಿಲ್ಲೆಯ ಮುಂಡ​ರ​ಗಿ, ಲಕ್ಷ್ಮೇ​ಶ್ವರ, ಶಿರ​ಹಟ್ಟಿ, ಗಜೇಂದ್ರ​ಗ​ಡ​, ಗದ​ಗ ತಾಲೂ​ಕಿನಾದ್ಯಂತ ಗುರು​ವಾರ ತಡ​ರಾ​ತ್ರಿ​ಯ ​ವ​ರೆಗೆ ಮಳೆ ಜಿನು​ಗಿದ್ದು, ಶುಕ್ರ​ವಾರ ಬೆಳ​ಗ್ಗೆಯೂ ಜಿಲ್ಲಾ​ದ್ಯಂತ ಧಾರಾ​ಕಾರ ಮಳೆ ಸುರಿ​ದಿ​ದೆ. ಗದಗ ನಗರದ ನರಿಬಾವಿ ಓಣಿಯಲ್ಲಿ ಶಿಥಿಲ​ಗೊಂಡ ಮನೆ ಗೋಡೆ ಕುಸಿದು, ಮನೆ​ಯ​ಲ್ಲಿ ಮಲ​ಗಿದ್ದ 6 ಜನ ಪ್ರಾಣಾ​ಪಾ​ಯ​ದಿಂದ ಪಾರಾದ ಘಟನೆ ಗುರು​ವಾರ ಮಧ್ಯರಾತ್ರಿ 12.30ರ ಸುಮಾ​ರಿಗೆ ನಡೆ​ದಿ​ದೆ. ಕಾ​ಶಪ್ಪ ಬರಡಿ ಎಂಬವರಿಗೆ ಸೇರಿದ ಮನೆ​ಯಾ​ಗಿ​ದ್ದು, ಮನೆಗೋಡೆ ಕುಸಿ​ತ​ದಿಂದ ಆತಂಕ​ಗೊಂಡ ಕುಟುಂಬ​ಸ್ಥ​ರು ರಾತ್ರಿಯೆ ಬೇರೆ ಮನೆಗೆ ತೆರ​ಳಿ​ದ​ರು.

ಮಳೆಯಿಂದ ಬೆಳೆಗೆ ಕುತ್ತು, ರೈತರಿಗೆ ಆಪತ್ತು..!

ಲಕ್ಷ್ಮೇ​ಶ್ವರ ತಾಲೂ​ಕಿನಾದ್ಯಂತ ಬೆಳಗ್ಗೆ ದಟ್ಟವಾದ ಮಂಜು ಮುಸು​ಕಿ​ದ್ದು, ಆಗಾಗ್ಗೆ ತುಂತುರು ಮಳೆಯಾಗಿದ್ದು, ಸಂಜೆ ಹೊತ್ತಿಗೆ ತಾಲೂ​ಕಿನ ಗೊಜ​ನೂರು, ಯಳ​ವತ್ತಿ, ಅಕ್ಕಿ​ಗುಂದ, ಕುಂದ್ರಳ್ಳಿ ಗ್ರಾಮ​ಗ​ಳ​ಲ್ಲಿ ರಭ​ಸದ ಮಳೆ ಸುರಿದು ತಗ್ಗು ಪ್ರದೇ​ಶ​ಗ​ಳಿಗೆ ನೀರು ನುಗ್ಗಿದೆ. ಗದಗ ತಾಲೂ​ಕಿನಾದ್ಯಂತ ಮುಳ​ಗುಂದ ಪಟ್ಟ​ಣ​ ಸೇರಿ​ದಂತೆ ವಿವಿಧ ಗ್ರಾಮ​ಗ​ಳಲ್ಲಿ ಬೆಳ​ಗಿನ ಜಾವ ಬಿರು ಬಿಸ​ಲಿನ ವಾತಾ​ವ​ರ​ಣ​ವಿದ್ದು, ಮಧ್ಯಾ​ಹ್ನದ ವೇಳೆಗೆ ಕೆಲ​ಕಾಲ ಉತ್ತಮ ಮಳೆ ಸುರಿ​ದಿದೆ. ಜಿಲ್ಲೆ​ಯಾ​ದ್ಯಂತ ಮೋಡ ಕವಿದ ವಾತ​ವಾ​ರಣ ಮುಂದು​ವ​ರೆ​ದಿ​ದೆ.