ತುಮಕೂರು ಫಾರ್ಮ್‌ಹೌಸ್ ಸ್ಪೋಟ ಪ್ರಕರಣ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರ ಬಂಧನ!

ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಕ್ಯಾಮೆರಾಮ್ಯಾನ್ ಮತ್ತು ಸೋಡಿಯಂ ಪೂರೈಕೆದಾರರನ್ನು ಬಂಧಿಸಲಾಗಿದೆ, ಫಾರ್ಮ್ ಹೌಸ್ ಮಾಲೀಕ ನಾಪತ್ತೆಯಾಗಿದ್ದಾನೆ.

Tumakuru farm house explosion Case drone Prathap another two friends arrest sat

ತುಮಕೂರು (ಡಿ.15): ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ವಸ್ತು ಬಳಸಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್‌ನ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಖಾಸಗಿ ಫಾರ್ಮ್‌ ಹೌಸ್ ನೀರಿನ ಕೊಳದಲ್ಲಿ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ವಸ್ತು ಬಳಸಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಾಪ್‌ನ ಇಬ್ಬರು ಸ್ನೇಹಿತರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕ್ಯಾಮೇರಾ ಮ್ಯಾನ್ ವಿನಯ್ ಹಾಗೂ ಸೋಡಿಯೋಂ ಕೊಡಿಸಿದ್ದ ಪ್ರಜ್ವಲ್ ಎನ್ನುವವರಾಗಿದ್ದಾರೆ. ಇವರ ಪೈಕಿ ಡ್ರೋನ್ ಪ್ರತಾಪ್ ಅವರು ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರಿದಿಸಿದ್ದರು. ಹೀಗಾಗಿ, ಡ್ರೋನ್ ಪ್ರತಾಪ್ ಅವರ ಇಬ್ಬರು ಸ್ನೇಹಿತರನ್ನು ಪೊಲೀಸರು ನಿನ್ನೆ ಮಧ್ಯರಾತ್ರಿ ಬೆಂಗಳೂರಿನಲ್ಲಿ ಅರೆಸ್ಟ್ ಮಾಡಿದ್ದಾರೆ.

ನೀರಿನ ಕೊಳದಲ್ಲಿ ಭಾರಿ ಪ್ರಮಾಣದ ಸ್ಪೋಟಕ ಬಳಸಿದ ಬೆನ್ನಲ್ಲಿಯೇ ದೂರು ದಾಖಲಿಸಿಕೊಂಡು ಡ್ರೊನ್ ಪ್ರತಾಪನನ್ನ ಬಂಧಿಸಿದ ತುಮಕೂರು ಜಿಲ್ಲೆಯ ಮಿಡಿಗೇಶಿ ಠಾಣಾ ಪೊಲೀಸರು ನಿನ್ನೆ ಡ್ರೋನ್ ಪ್ರತಾಪ್‌ನನ್ನು ಬೆಂಗಳೂರಿಗೆ ಕರೆದೊಯ್ದು, ಪ್ರತಾಪ್‌ನ ಮನೆ, ಕಚೇರಿ ಹಾಗೂ ಸೋಡಿಯಂ ಖರೀದಿಸಿದ್ದ ಅಂಗಡಿಯಲ್ಲಿ ಸ್ಥಳ ಮಹಜರು ನಡೆಸಿದ್ದರು. ಇನ್ನು ತಡರಾತ್ರಿ ಡ್ರೋನ್ ಪ್ರತಾಪ್ ಅವರ ಇಬ್ಬರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಬೆಂಗಳೂರಿನಿಂದ ತುಮಕೂರಿನ ಮಿಡಿಗೇಶಿ ಪೊಲೀಸ್ ಠಾಣೆಗೆ ಕರೆತರಲಾಗಿದೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಯಿಂದ ರಂಭಾಪುರಿ ಮಠಕ್ಕೆ ರೋಬೋಟಿಕ್ ಆನೆ ಕೊಡುಗೆ!

ಇನ್ನೊಬ್ಬ ಆರೋಪಿ ನಾಪತ್ತೆ: ಇನ್ನು ನೀರಿನ ಕೊಳದಲ್ಲಿ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ನಾಪತ್ತೆ ಆಗಿದ್ದಾನೆ. ಫಾರಂ ಹೌಸ್ ಮಾಲೀಕ ಜಿತೇಂದ್ರ ಜೈನ್ ಕೂಡ ಇದರಲ್ಲಿ ಆರೋಪಿ ಆಗಿದ್ದು, ನಾಲ್ಕೈದು ದಿನಗಳವರೆಗೆ ಪೊಲೀಸರ ಕೈಗೆ ಸಿಕ್ಕಿ ಬೀಳದೇ ನಾಪತ್ತೆ ಆಗಿದ್ದಾನೆ. ಪೊಲೀಸರಿಂದ ಜಿತೇಂದ್ರ ಜೈನ್‌ಗಾಗಿ ಹುಡುಕಾಟ ಮುಂದುವರೆದಿದೆ.

ಡ್ರೋನ್ ಪ್ರತಾಪ್ ಸೋಡಿಯಂ ಮೆಟಲ್ ವಸ್ತು ಬಳಸಿ ಸ್ಪೋಟ ಪ್ರಕರಣದಲ್ಲಿ ಘಟನೆಯ ದೃಶ್ಯಾವಳಿಗಳನ್ನ ಕ್ಯಾಮರಾಮ್ಯಾನ್ ವಿನಯ್ ಚಿತ್ರಿಕರಿಸಿದ್ದರು. ಜೊತೆಗೆ, ಪ್ರತಾಪ್‌ಗೆ ಸೋಡಿಯಂ ಕೊಡಿಸಿದ್ದ ಇನ್ನೊಬ್ಬ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಇನ್ನು ವಿಡಿಯೋ ಚಿತ್ರಿಕರಣಕ್ಕೆ ಬಳಸಿದ್ದ ಕ್ಯಾಮರಾ ಸೀಜ್ ಮಾಡಲಾಗಿದೆ. ಈ ಕ್ಯಾಮೆರಾವನ್ನು ಜೆಪಿ ನಗರದಲ್ಲಿ ಇಡಲಾಗಿತ್ತು. ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿರುವ ವಾಸು ಸೈಂಟಿಸ್ಟ್ ಶಾಪ್‌ನಲ್ಲಿ ಸೋಡಿಯಂ ಖರೀದಿ ಮಾಡಲಾಗಿತ್ತು. ಈ ಕೆಮಿಕಲ್ ಶಾಪ್ ಅನ್ನು ಕಳೆದ 75 ವರ್ಷಗಳಿಂದ ನಡೆಸಿಕೊಂಡು ಹೋಗುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ಪ್ರಯೋಗಾಲಯಗಳಿಗೆ ನೀಡುವ ಸೋಡಿಯಂ ಅನ್ನು ಡ್ರೋನ್ ಪ್ರತಾಪ್‌ ಅವರು ಬಳಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ನಿನ್ನೆ ಡ್ರೋಣ್ ಪ್ರತಾಪ್ ಅವರನ್ನ ಕರೆದೊಯ್ದು ಸ್ಥಳ ಮಹಜರು ನಡೆಸಿರುವ ಪೊಲೀಸರು, ವಿಚಾರಣೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ: ಪತ್ನಿ ನಿಖಿತಾ ಸೇರಿದಂತೆ ಮೂವರ ಬಂಧನ

ಪ್ರಕರಣದ ಹಿನ್ನೆಲೆಯೇನು?
ಡ್ರೋನ್ ಪ್ರತಾಪ್ ಅವರು ತುಮಕೂರಿನ ಫಾರ್ಮ್‌ ಹೌಸ್‌ನಲ್ಲಿ ಸ್ಪೋಟಕ ವಸ್ತುವನ್ನ ನೀರಿಗೆ ಎಸೆದಿದ್ದರು. ಈ ಕುರಿತು ಯೂಟ್ಯೂಬ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದರು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಠಾಣಾ ಪೊಲೀಸರು ವಿಡಿಯೋ ಆಧರಿಸಿ ಬಿಎನ್ಎಸ್ ಕಾಯಿದೆ ಸೆಕ್ಷನ್ 288 ಮತ್ತು ಸ್ಪೋಕಟ ವಸ್ತುಗಳ ಕಾಯಿದೆ ಸೆಕ್ಷನ್ 3ರ ಅಡಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್‌ನನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದರು.

Latest Videos
Follow Us:
Download App:
  • android
  • ios