ಬೆಂಗಳೂರು(ಏ.23) ಬಿಹಾರ ಕೊರೋನಾ ಬಾಂಬಿಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಹೊಂಗಸಂದ್ರ ಸ್ಲಂ ಇದೀಗ ಖಾಲಿ-ಖಾಲಿಯಾಗಿದ್ದು, ಸ್ಲಂನಲ್ಲಿರುವ ಮುನ್ನೂರು ಮನೆಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಕೊರೋನಾ ಸೋಂಕಿತ ಬಿಹಾರಿ ಕಾರ್ಮಿಕನಿಂದಾಗಿ ಎಲ್ಲರೂ ಭಯದಲ್ಲಿ ಕಾಲ ದೂಡುವಂತಾಗಿದೆ. ವಿದ್ಯಾಜ್ಯೋತಿ ನಗರದಲ್ಲಿರುವಂತ ಹೊಂಗಸಂದ್ರ ಸ್ಲಂ ಇದೀಗ ಬಿಕೋ ಎನ್ನಲಾರಂಭಿಸಿದೆ. 

"

ಇದೀಗ ಎಚ್ಚೆತ್ತುಕೊಂಡ ಬಿಬಿಎಂಪಿ ಇಡೀ ಸ್ಲಂ ಏರಿಯಾಗೆ ಔ‍ಷಧಿ ಸಿಂಪಡಿಸಿದೆ. ಒಬ್ಬ ಬಿಹಾರಿ ಸೋಂಕಿತನಿಂದ 9 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಏಪ್ರಿಲ್ 18ಕ್ಕೆ ಬೊಮ್ಮನಹಳ್ಳಿಯ ಖಾಸಗಿ ಆಸ್ಪತ್ರೆಗೆ ಭೇಟಿ ಕೊಡುತ್ತಾನೆ. ಇಲ್ಲಿಂದ ಆತನ ಟ್ರಾವೆಲ್ ಹಿಸ್ಟರಿ ಏನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

"

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿದ್ದು, ಆ ಏರಿಯಾದಲ್ಲಿರುವ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ ಘಟನೆಯ ಬಗ್ಗೆ ಶಾಸಕ ಸತೀಶ್ ರೆಡ್ಡಿ ಹೇಳಿದ್ದಿಷ್ಟು...

"

ಒಂದು ಏರಿಯಾದಿಂದ ಇಡೀ ಬೆಂಗಳೂರಿಗೆ ಆಪತ್ತು ಶುರುವಾಗಿದೆಯೇ ಎನ್ನುವ ಅನುಮಾನ ಆರಂಭವಾಗಿದೆ. ಇದರ ಬೆನ್ನಲ್ಲೇ ಇಡೀ ವಿದ್ಯಾಜ್ಯೋತಿ ನಗರ ಸ್ಲಂ ಖಾಲಿ ಮಾಡಿಸಲಾಗಿದೆ. ಕ್ವಾರಂಟೈನ್‌ನಲ್ಲಿದ್ದ 9 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. 

"

ಇನ್ನು ವಿದ್ಯಾಜ್ಯೋತಿ ನಗರದ ಇಡೀ ಹೊಂಗಸಂದ್ರ ಸ್ಲಂಗೆ ಬಿಬಿಎಂಪಿ ಔಷಧಿ ಸಿಂಪಡಿಸಿದೆ. 

"