ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗಂಗಾವತಿಯ ಯುವಕ ಮತ್ತು ಲಿಂಗಸೂಗೂರಿನ ಮಹಿಳೆ ಬಲಿ.

ರಾಯಚೂರು, ಕೊಪ್ಪಳ (ಜು.17): ಜಿಲ್ಲೆಯ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಅಬ್ದುಲ್ (24) ಎಂಬ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮೃತ ಯುವಕ. ಇಂದು ಗಂಗಾವತಿ ನಗರದಲ್ಲಿ ಏಕಾಏಕಿ ಹೃದಯ ಬೇನೆ ಕಾಣಿಸಿಕೊಂಡಿದೆ ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಬ್ದುಲ್ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇನ್ನೊಂದೆಡೆ ರಾಯಚೂರಿನಲ್ಲಿ ಮಹಿಳೆಯೋರ್ವರು ಸಹ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಿಂದ ಯಡಹಳ್ಳಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಕ್ಕಮಹಾದೇವಿ ಶೀಲವಂತರ (65) ಎಂಬ ಮಹಿಳೆ, ಹುನಗುಂದ ಬಳಿ ಬಸ್‌ನಲ್ಲಿಯೇ ಲೋ ಬಿಪಿಯಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Karnataka Heart Attack Rate: ರಾಜ್ಯದಲ್ಲಿ ಸಾಲು ಸಾಲು ಹೃದಯಾಘಾತ; ಸರ್ಕಾರ ಮಹತ್ವದ ಘೋಷಣೆ, ಹೊಸ ಕ್ರಮಗಳೇನು? ತಿಳಿಯಿರಿ

ರಾಜ್ಯದಲ್ಲಿ ಆತಂಕ: ಹೃದಯಾಘಾತದಿಂದ ಸಾವು ಪ್ರಕರಣಗಳು ಹೆಚ್ಚಳ

ರಾಜ್ಯದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.